ಕರ್ನಾಟಕ

karnataka

ETV Bharat / state

ಹೋಟೆಲ್​ ಸೇವೆ ಆರಂಭವಾದರೂ ಗ್ರಾಹಕರ ಸಂಖ್ಯೆ ಬೆರಳೆಣಿಕೆ

ಸರ್ಕಾರದ ಆದೇಶದಂತೆ ಹೋಟೆಲ್​ಗಳ ಸೇವೆ ಆರಂಭವಾಗಿದ್ದರೂ ಗ್ರಾಹಕರ ಸಂಖ್ಯೆ ಬೆರಳೆಣಿಕೆಯಷ್ಟಿದೆ. ಇದರಿಂದಾಗಿ ಮಾಲೀಕರು ಆತಂಕಕ್ಕೆ ಒಳಗಾಗಿದ್ದಾರೆ.

hotel
ಹೋಟೆಲ್​​

By

Published : Jun 9, 2020, 3:45 PM IST

ಸಕಲೇಶಪುರ:ಸರ್ಕಾರ ಅನುಮತಿ ಮೇರೆಗೆ ಹೋಟೆಲ್​​​ಗಳು ಆರಂಭವಾಗಿದ್ದರೂ ಗ್ರಾಹಕರ ಕೊರತೆ ಎದ್ದು ಕಾಣುತ್ತಿದೆ.

ಲಾಕ್​​​ಡೌನ್ ಸಂದರ್ಭದಲ್ಲಿ ಪಾರ್ಸೆಲ್​​ಗೆ ಅವಕಾಶವಿದ್ದರೂ ನಷ್ಟ ಅನುಭವಿಸುವ ಆತಂಕದಿಂದ ಮಾಲೀಕರು ಹೋಟೆಲ್​​ಗಳನ್ನು ತೆರೆಯುವ ಗೋಜಿಗೆ ಹೋಗಿರಲಿಲ್ಲ. ಈಗ ತೆರೆದರೂ ಗ್ರಾಹಕರು ಬರುತ್ತಿಲ್ಲ. ಹೀಗಾಗಿ ಮಾಲೀಕರಿಗೆ ಆತಂಕ ಎದುರಾಗಿದೆ.

ಸರ್ಕಾರ ಹೋಟೆಲ್​​​ಗಳನ್ನು ತೆರೆಯಲು ತಡವಾಗಿ ಅವಕಾಶ ನೀಡಿದೆ. ಹಲವು ಕ್ಷೇತ್ರಗಳಿಗೆ ಸರ್ಕಾರ ತುಸು ಆರ್ಥಿಕ ನೆರವು ನೀಡಿದೆ. ಆದರೆ, ನಮ್ಮ ಉದ್ಯಮಕ್ಕೆ ಮಾತ್ರ ಸರ್ಕಾರ ಯಾವುದೇ ನೆರವು ನೀಡಿಲ್ಲ ಎಂದು ಹೋಟೆಲ್​ ಮಾಲೀಕ ನಾರಾಯಣ ಆಳ್ವ ಬೇಸರ ವ್ಯಕ್ತಪಡಿಸಿದರು.

ಹೋಟೆಲ್​ ಮಾಲೀಕರ ಅಭಿಪ್ರಯ

ಇದೀಗ ಹೋಟೆಲ್ ತೆರೆದಿದ್ದರೂ ಜನ ಅಷ್ಟಾಗಿ ಬರುತ್ತಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಕಷ್ಟದಲ್ಲಿರುವ ಹೋಟೆಲ್ ಮಾಲೀಕರ ನೆರವಿಗೆ ಬರಬೇಕು ಎಂದು ಅವರು ಮನವಿ ಮಾಡಿದರು. ಸಾಮಾಜಿಕ ಅಂತರ ಪಾಲನೆ ಮತ್ತು ಮಾಸ್ಕ್​ ಧರಿಸುವುದು ಕಡ್ಡಾಯ ಎಂದು ಸರ್ಕಾರ ಸೂಚಿಸಿದೆ.

ABOUT THE AUTHOR

...view details