ಅರಕಲಗೂಡು/ಹಾಸನ:ತಾಲೂಕಿನ ಯಗಟಿ ಭಾಗದಲ್ಲಿ ರೈತರು ಬೆಳೆದ ಕೋಸು ಮಾರಾಟ ಮಾಡಲು ಕೊರೊನಾ ಅಡ್ಡಿಯಾಗಿ ಸಂಕಷ್ಟಕ್ಕೀಡಾಗಿದ್ದರು. ಇದೀಗ ಈ ರೈತರ ಸಹಾಯಕ್ಕೆ ಇಲಾಖೆ ಸ್ಪಂದಿಸಿದೆ. ಅಲ್ಲಿಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಅನೇಕ ರೈತರು ಎಲೆಕೋಸು ಕೊಯ್ಲು ಮಾಡುತ್ತಿಲ್ಲ ಎಂದು ವರದಿಯಾಗಿದೆ. ಇದಕ್ಕಾಗಿ ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
ಎಪಿಎಂಸಿ ಕಾರ್ಯದರ್ಶಿ ಸೋಮಶೇಖರ್ ಮತ್ತು ಅರಕಲಗೂಡು ಯಗಟಿ ಗ್ರಾಮದ ಕೆಲವು ಜಮೀನುಗಳಿಗೆ ಭೇಟಿ ನೀಡಿದ್ದು, ರೈತರಿಗೆ ತಿಳಿ ಹೇಳಿದ್ದಾರೆ. ಕೃಷಿ ಉತ್ಪನ್ನಗಳ ಸಾಗಣೆಗೆ ಯಾವುದೇ ನಿರ್ಬಂಧಗಳಿಲ್ಲ ಮತ್ತು ಈಗ ರಾಜ್ಯದ ಎಲ್ಲ ಎಪಿಎಂಸಿಗಳು ಮುಕ್ತವಾಗಿದೆ ಎಂದು ಸರ್ಕಾರ ಸ್ಪಷ್ಟಪಡಿಸಿದೆ ಎಂದು ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ರಾಜೇಶ್ ಡಿ ತಿಳಿಸಿದ್ದಾರೆ.
ಕೋಸು ಬೆಳೆದ ರೈತನ ಸಂಕಷ್ಟ: ಹೊಲಗಳಿಗೆ ಭೇಟಿ ನೀಡಿದ ತೋಟಗಾರಿಕೆ ಇಲಾಖೆ ಅಧಿಕಾರಿ ಎಲೆ-ಕೋಸುಗಳ ಮಾರುಕಟ್ಟೆ ದರ ಕೆ.ಜಿಗೆ 4ರಿಂದ6 ರೂ ಇದೆ. ಎಬಿ ಕ್ಯಾಬೇಜ್ ಅನ್ನು ಮುಖ್ಯವಾಗಿ ಹೋಟೆಲ್‌ಗಳಲ್ಲಿ ಬಳಸಲಾಗುತ್ತದೆ. ಎಲೆಕೋಸಿಗಾಗಿ ಮನೆಯವರ ಬೇಡಿಕೆ ತುಂಬಾ ಕಡಿಮೆ. ಆದರೆ, ಹೋಟೆಲ್ಗಳು ಬಾಗಿಲು ಹಾಕಿವೆ. ಆದ್ದರಿಂದ ಬೆಲೆ ಕುಸಿದಿದೆ. ಆದಾಗ್ಯೂ ಮಾರ್ಕೆಟಿಂಗ್ ಸಮಸ್ಯೆಯಿಲ್ಲ. ಒಆರ್ಟಿ ತೋಟಗಾರಿಕೆ ಇಲಾಖೆ ಅರಕಲಗೂಡು ಮಾರುಕಟ್ಟೆ ಮತ್ತು ಸಾರಿಗೆ ಸಮಸ್ಯೆಗಳಿಗೆ ಸಂಬಂಧಿಸಿದಂತೆ ರೈತರಿಗೆ ವಿಶೇಷ ಸಹಾಯವಾಣಿಯನ್ನೂ ತೆರೆದಿದೆ.
ಈ ಕುರಿತು ಮಾತನಾಡಿದ ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಡಿ, ಇಲಾಖೆ ವತಿಯಿಂದ ಎಲೆಕೋಸು ಬೆಳೆಗಾರರಿಗೆ ಅನೇಕ ಯೋಜನೆಗಳು ಚಾಲ್ತಿಯಲ್ಲಿವೆ. ಆದರೆ, ಹೊಲಗಳಲ್ಲಿ ರೈತರು ಬೆಳೆಗಳನ್ನು ಕಟಾವು ಮಾಡದೇ ಹಾಗೆಯೇ ಬಿಡುತ್ತಿದ್ದಾರೆ. ನಮ್ಮ ಅಧಿಕಾರಿಗಳು ಕಾಲಾನುಕ್ರಮ ಎಲ್ಲಾ ಹೊಲಗಳಿಗೂ ಭೇಟಿ ನೀಡಲಿದ್ದಾರೆ. ನಾವು ಕೃಷಿ ಸಮುದಾಯದೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದಿದ್ದಾರೆ.