ಹಾಸನ:ಒಂಟಿ ಮನೆಯೊಂದರಲ್ಲಿ ನಡೆಯುತ್ತಿದ್ದ ಹುಕ್ಕಾಬಾರ್ ಪಾರ್ಟಿ ಮೇಲೆ ದಾಳಿ ನಡೆಸಿದ ಹೊಳೆನರಸೀಪುರ ಪೊಲೀಸರು ಏಳು ಯುವಕರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನ ಚನ್ನರಾಯಪಟ್ಟಣ ಮೂಲದ ಸುಹಾಸ್ ಮತ್ತು ರೀಹಾನ್ ಮೈಸೂರು ಮೂಲದ ಅಜಿತ್ ಹೊಳೆನರಸೀಪುರ ಮೂಲದ ಮನು ಮತ್ತು ಲಿಖಿತ, ಹಳ್ಳಿ ಮೈಸೂರು ಮೂಲದ ಸಂದೇಶ ಮತ್ತು ಹೊಳೆನರಸೀಪುರ ನಗರದ ಅಫ್ರಿಧಿ ಎಂದು ಗುರುತಿಸಲಾಗಿದೆ.
ಹುಕ್ಕ ಪಾರ್ಟಿ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಹೊಳೆನರಸೀಪುರದ ಗ್ರಾಮೀಣ ಪೊಲೀಸರು ಕಸಬಾ ಹೋಬಳಿಯ ಅಡಿಕೆ ಕೆರೆ ಗ್ರಾಮದ ಮನೆಯೊಂದರ ಮೇಲೆ ದಾಳಿ ನಡೆಸಿದ ಇವರು ಗಾಂಜಾ ಹಾಗೂ ಹುಕ್ಕಾ ಉಪಕರಣಗಳನ್ನು ವಶಕ್ಕೆ ಪಡೆದಿದ್ದಾರೆ. ಹಾಸನ ಜಿಲ್ಲೆ, ಹೊಳೆನರಸೀಪುರ ತಾಲೂಕಿನ, ಅಡಿಕೆರೆ ಗ್ರಾಮದ ಮನೆಯೊಂದರಲ್ಲಿ ಚನ್ನರಾಯಪಟ್ಟಣ ತಾಲೂಕು ಮೂಲದ ಎಚ್.ವಿ.ಸುಹಾಸ್ ಹುಕ್ಕಾಬಾರ್ ನಡೆಯುತ್ತಿದ್ದು, ಈತನನ್ನು ಸೇರಿ ಏಳು ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ. ಒಂಟಿ ಮನೆಯನ್ನು ಬಾಡಿಗೆ ಪಡೆದು ಅಲ್ಲಿ ಹುಕ್ಕಾ ಬಾರ್ ನಡೆಸುತ್ತಿದ್ದ ಸುಹಾಸ್ ತನ್ನದೇ ಗ್ರಾಹಕರನ್ನು ಹೊಂದಿದ್ದ. ಗ್ರಾಮೀಣ ಪ್ರದೇಶವಾದ ಕಾರಣ ಯಾರ ಗಮನಕ್ಕೂ ಬರುವುದಿಲ್ಲ ಎಂದು ಭಾವಿಸಿದ್ದ. ಖಚಿತ ಮಾಹಿತಿ ಆಧರಿಸಿ ರಾತ್ರಿ ಮನೆ ಮೇಲೆ ದಾಳಿ ನಡೆಸಿದ ಹೊಳೆನರಸೀಪುರ ಪೊಲೀಸರು ಗಾಂಜಾ ಸೇವಿಸುತ್ತಿದ್ದ ಯುವಕರನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರಿಂದ ಎಂಟರಿಂದ ಹತ್ತು ಸಾವಿರ ಮೌಲ್ಯದ ಗಾಂಜಾ, ಹುಕ್ಕಾ ಬಾರ್ ಮತ್ತು ಗಾಂಜಾ ಮಾರಾಟ ಮಾಡಿದ್ದ ಹಣವನ್ನು ಪೊಲೀಸರು ವಶ ಪಡಿಸಿಕೊಂಡಿದ್ದಾರೆ.ಡಿವೈಎಸ್ಪಿ ಲಕ್ಷ್ಮೇಗೌಡ ನೇತೃತ್ವದಲ್ಲಿ ಸಿಪಿಐ ಆರ್. ಪಿ. ಅಶೋಕ್ , ಪಿಎಸ್ಐ ಮೋಹನ್ ಕೃಷ್ಣ ತಂಡ ಕಾರ್ಯಾಚರಣೆ ನಡೆಸಿ ಹುಕ್ಕಾಬಾರ್ ಬಂದ್ ಮಾಡಿಸಿದೆ.