ಹಾಸನ:ಕೊರೊನಾ ವೈರಸ್ ನಿಯಂತ್ರಣಕ್ಕೆ ಸರ್ಕಾರ ಲಾಕ್ಡೌನ್ ವಿಸ್ತರಣೆ ಮಾಡಿದ್ದು, ಔಷಧಿ ತರಲು ಬಂದಿದ್ದ ಯುವಕನಿಗೆ ಹೋಂಗಾರ್ಡ್ ಹಿಗ್ಗಾ ಮುಗ್ಗ ಥಳಿಸಿರುವ ಘಟನೆ ಹೊಳೆನರಸೀಪುರ ತಾಲೂಕು ಹಳ್ಳಿ ಮೈಸೂರಿನಲ್ಲಿ ನಡೆದಿದೆ.
ಔಷಧಿ ತರಲು ಬಂದ ಯುವಕನಿಗೆ ಹಿಗ್ಗಾ ಮುಗ್ಗ ಥಳಿಸಿದ ಹೋಂ ಗಾರ್ಡ್ - ಹಾಸನ ಲೇಟೆಸ್ಟ್ ನ್ಯೂಸ್
ಔಷಧಿ ತರಲೆಂದು ಮೆಡಿಕಲ್ ಶಾಪ್ಗೆ ಬಂದಿದ್ದ ಯುವಕನಿಗೆ ಹೋಂ ಗಾರ್ಡ್ ಮನಬಂದಂತೆ ಥಳಿಸಿರುವ ಘಟನೆ ಹಾಸನದಲ್ಲಿ ನಡೆದಿದೆ.
ಔಷಧಿ ತರಲು ಬಂದ ಯುವಕನಿಗೆ ಹಿಗ್ಗಾ ಮುಗ್ಗಾ ಥಳಿಸಿದ ಹೋಂಗಾರ್ಡ್
ನಗರದಲ್ಲಿ ಯುವಕನೊಬ್ಬ ಔಷಧಿ ತರಲೆಂದು ಮೆಡಿಕಲ್ ಶಾಪ್ಗೆ ಬಂದಿದ್ದ. ಈ ವೇಳೆ ಯುವಕನನ್ನು ತಡೆದ ಹೋಂಗಾರ್ಡ್ ಮನೆಯಿಂದ ಯಾಕೆ ಹೊರ ಬಂದಿದ್ದೀಯಾ ಎಂದು ಪ್ರಶ್ನೆ ಮಾಡಿದ್ದಾರೆ. ಕೆಲಕಾಲ ಇಬ್ಬರ ನಡುವೆ ವಾಗ್ವಾದ ನಡೆದು ಕೋಪಗೊಂಡ ಹೋಂಗಾರ್ಡ್ ಲಾಠಿಯಿಂದ ಯುವಕನನ್ನು ಮನಬಂದಂತೆ ಥಳಿಸಿದ್ದಾರೆ.ಇದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಆಗಮಿಸಿದ ಮತ್ತೊಬ್ಬ ಹೋಂ ಗಾರ್ಡ್ ಮನೆಯಿಂದ ಹೊರ ಬರದಂತೆ ಎಚ್ಚರಿಕೆ ನೀಡಿ ಯುವಕನನ್ನು ಕಳುಹಿಸಿದರು.