ಕರ್ನಾಟಕ

karnataka

ETV Bharat / state

'ನಾವು ಹಿಜಾಬ್ ಧರಿಸೇ ಧರಿಸುತ್ತೇವೆ..': ಗದಗದಲ್ಲಿ ಪ್ರತಿಭಟನಾ ರ‍್ಯಾಲಿ

ಸೋಮವಾರದಂದು ಮುಸ್ಲಿಂ ಸಮುದಾಯದ ಜನರು ಪ್ರತಿಭಟನಾ ರ‍್ಯಾಲಿ ಮಾಡಿ, ಹಿಜಾಬ್​ಗಾಗಿ ಜಿಲ್ಲಾಧಿಕಾರಿ ಹಾಗೂ ಎಸ್ಪಿಗೆ ಮನವಿ ಸಲ್ಲಿಸಿದ್ದಾರೆ.

Hijab supporters protest in gadag
ಗದಗದಲ್ಲಿ ಹಿಜಾಬ್ ಬೆಂಬಲಿಸಿ ಪ್ರತಿಭಟನಾ ರ‍್ಯಾಲಿ

By

Published : Feb 15, 2022, 8:51 AM IST

Updated : Feb 15, 2022, 9:07 AM IST

ಗದಗ: ಶಾಲಾ, ಕಾಲೇಜುಗಳಲ್ಲಿ ಹಿಜಾಬ್‌ ಧರಿಸಲು ಅವಕಾಶ ಕೋರಿ ಸೋಮವಾರ ಮುಸ್ಲಿಂ ಸಮುದಾಯದ ಜನರು ಬೃಹತ್ ಪ್ರತಿಭಟನಾ ರ‍್ಯಾಲಿ ಮಾಡಿದರು. ಎಸ್​ಸಿ, ಎಸ್​ಟಿ ಹಾಗೂ ಅಲ್ಪಸಂಖ್ಯಾತರು ಈ ಪ್ರತಿಭಟನಾ ರ‍್ಯಾಲಿ ಆಯೋಜಿಸಿದ್ದರು.

ಶಿಕ್ಷಣದ ಹಕ್ಕು ಎಲ್ಲರಿಗೂ ಸಿಗಲಿ, ಪ್ರತಿಯೊಬ್ಬರೂ ಕಾನೂನನ್ನು ಗೌರವಿಸಲಿ, ಸರ್ಕಾರಿ ಕಚೇರಿಯಲ್ಲಿ ಯಾವುದೇ ಧರ್ಮದ ಆಚರಣೆ ಮಾಡಬಾರದು, ಜಾತಿ-ಧರ್ಮಗಳ ನಡುವೆ ವಿಷ ಬೀಜ ಬಿತ್ತದಿರಿ, ಸಮಾನ ಶಿಕ್ಷಣಕ್ಕಾಗಿ ನಮ್ಮ ಹೋರಾಟ ಸೇರಿದಂತೆ ಹಲವು ನಾಮಫಲಕಗಳನ್ನು ಹಿಡಿದು ರ‍್ಯಾಲಿಯಲ್ಲಿ ಪ್ರತಿಭಟನಾನಿರತರು ಸಾಗಿದರು.

ತೋಂಟದಾರ್ಯ ಮಠದಿಂದ ಆರಂಭವಾದ ಈ ರ‍್ಯಾಲಿ ನಗರದ ವಿವಿಧೆಡೆ ಸಂಚರಿಸಿ ನಂತರ ಮುನ್ಸಿಪಲ್ ಕಾಲೇಜು ಮೈದಾನದಲ್ಲಿ ಸಮಾವೇಶಗೊಂಡಿತು.


ಈ ವೇಳೆ ಮುಸ್ಲಿಂ ವಿದ್ಯಾರ್ಥಿನಿಯೊಬ್ಬಳು ಮಾತನಾಡಿ, 'ನಮಗೆ ಹಿಜಾಬ್ ಬೇಕೇ ಬೇಕು. ನಾವು ಹುಟ್ಟಿದಾಗಿನಿಂದ ಹಿಜಾಬ್ ಧರಿಸಿಕೊಂಡು ಬಂದಿದ್ದೇವೆ, ಸಾಯುವವರೆಗೆ ಹಿಜಾಬ್ ಧರಿಸುತ್ತೇವೆ. ಈ ಹಿಂದೆ ನಮ್ಮ ಸೀನಿಯರ್ಸ್,​ ಸೂಪರ್ ಸೀನಿಯರ್ಸ್​ ಸಹ ಹಿಜಾಬ್ ಹಾಕುತ್ತಿದ್ದರು. ಹೀಗಾಗಿ ನಾವೂ ಕೂಡ ಧರಿಸುತ್ತೇವೆ ಎಂದರು.

ಇದನ್ನೂ ಓದಿ:'ಹಿಜಾಬ್ ವಿವಾದವನ್ನು ವಿದ್ಯಾರ್ಥಿನಿಯರ ಮೂಲಕ ಆಡಿಸುತ್ತಿರುವ ಕೀಲಿಕೈ ಬೇರೆಯೇ ಇದೆ'

Last Updated : Feb 15, 2022, 9:07 AM IST

ABOUT THE AUTHOR

...view details