ಕರ್ನಾಟಕ

karnataka

ETV Bharat / state

ಹಾಸನ ಕಾಲೇಜಿಗೂ ಕಾಲಿಟ್ಟ ಹಿಜಾಬ್-ಕೇಸರಿ ಶಾಲು ಗಲಾಟೆ

ಈಗಾಗಲೇ ನಾವು ಇದನ್ನು ವಿರೋಧ ಮಾಡಿ ಕಾಲೇಜಿನ ಪ್ರಾಂಶುಪಾಲರಿಗೆ ಮತ್ತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದೇವೆ. ಸೋಮವಾರದ ಒಳಗೆ ಈ ವಿಚಾರದ ಬಗ್ಗೆ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಸೋಮವಾರ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತರಗತಿಗೆ ಹಾಜರಾಗುತ್ತಾರೆ..

By

Published : Feb 5, 2022, 7:14 PM IST

Hijab -Saffron controversy also started in Hassan college
ಹಾಸನದ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಹಿಜಾಬ್- ಕೇಸರಿ ಶಾಲು ವಿವಾದ

ಹಾಸನ :ಕರಾವಳಿಯಲ್ಲಿ ಆರಂಭವಾಗಿರುವ ಹಿಜಾಬ್​-ಕೇಸರಿ ಶಾಲು ವಿವಾದ ಈಗ ಜಿಲ್ಲೆಗೂ ಕಾಲಿಟ್ಟಿದೆ. ಇಲ್ಲಿನ ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ಕಾಲೇಜಿಗೆ ಬರುಲು ಆರಂಭಿಸಿದ್ದಾರೆ.

ಕಾಲೇಜಿನ ವಿದ್ಯಾರ್ಥಿಗಳಿಗೆ ಸಮವಸ್ತ್ರ ಇದೆ. ಆದರೆ, ಕೆಲವರು ಸಮವಸ್ತ್ರ ಧರಿಸದೆ ಹಿಜಾಬ್​​ ಹಾಕಿಕೊಂಡು ಬರುತ್ತಾರೆ. ಅವರಿಗೆ ಅವರ ಧರ್ಮ ಮುಖ್ಯವಾದರೆ, ನಮಗೂ ನಮ್ಮ ಧರ್ಮ ಮುಖ್ಯ. ಹೀಗಾಗಿ, ಶಾಲೆಯಲ್ಲಿ ಎಲ್ಲರೂ ಸಮವಸ್ತ್ರದ ನಿಯಮವನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇಲ್ಲದಿದ್ದರೆ ನಾವು ಕೂಡ ಕೇಸರಿ ಶಾಲು ಧರಿಸಿಯೇ ಕಾಲೇಜಿಗೆ ಬರುತ್ತೇವೆ ಎಂದು ವಿದ್ಯಾರ್ಥಿಗಳು ವಾದಿಸುತ್ತಿದ್ದಾರೆ.

ಕಾಲೇಜಿಗೆ ಬರುವಾಗ ಎಲ್ಲರೂ ಒಟ್ಟಿಗೆ ಬರುತ್ತೇವೆ. ಕ್ಯಾಂಪಸ್, ಊಟದ ಹಾಲ್, ಕ್ರೀಡಾ ಸಮಯ ಹಾಗೂ ಇತರ ಯಾವುದೇ ಶಿಕ್ಷಣದ ಚಟುವಟಿಕೆಗಳಲ್ಲಿ ಒಟ್ಟಿಗೆ ಪಾಲ್ಗೊಳ್ಳುತ್ತೇವೆ. ಆದರೆ, ಸಮವಸ್ತ್ರದ ವಿಚಾರದಲ್ಲಿ ಹಿಜಾಬ್​ ಹಾಕಿಕೊಂಡು ಬರುವುದು ಬೇಸರದ ಸಂಗತಿ.

ಈಗಾಗಲೇ ನಾವು ಇದನ್ನು ವಿರೋಧ ಮಾಡಿ ಕಾಲೇಜಿನ ಪ್ರಾಂಶುಪಾಲರಿಗೆ ಮತ್ತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದೇವೆ. ಸೋಮವಾರದ ಒಳಗೆ ಈ ವಿಚಾರದ ಬಗ್ಗೆ ಸ್ಪಷ್ಟ ನಿಲುವು ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ಸೋಮವಾರ ವಿದ್ಯಾರ್ಥಿಗಳು ಕೇಸರಿ ಶಾಲು ಧರಿಸಿ ತರಗತಿಗೆ ಹಾಜರಾಗುತ್ತಾರೆ.

ಹಾಗಾಗಿ, ಸರ್ಕಾರ ಮತ್ತು ಜಿಲ್ಲಾಡಳಿತ ಸಮವಸ್ತ್ರದ ನೀತಿಸಂಹಿತೆಯನ್ನು ಸಮಾನ ರೀತಿ ಪಾಲಿಸುವಂತೆ ಕ್ರಮಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ. ಫೆಬ್ರವರಿ 7ರವರೆಗೆ ಗಡುವು ನೀಡಿರುವ ಹಾಸನ ಜಿಲ್ಲಾ ಹಿಂದೂ ಜಾಗರಣ ವೇದಿಕೆ ಹಾಗೂ ಶಾಲಾ ವಿದ್ಯಾರ್ಥಿಗಳು ಸೋಮವಾರದಿಂದ ಬೀದಿಗಿಳಿದು ಪ್ರತಿಭಟನೆ ಮಾಡುವ ಎಚ್ಚರಿಕೆ ಕೂಡ ಕೊಟ್ಟಿದ್ದಾರೆ.

ಸದ್ಯ ಕಾಲೇಜಿನ ವಿದ್ಯಾರ್ಥಿಗಳ ಸಮವಸ್ತ್ರ ಹೋರಾಟದ ಬಗ್ಗೆ ಯಾವುದೇ ಗೊಂದಲ ಆಗದಂತೆ ಉಪನ್ಯಾಸಕರು ಎಲ್ಲಾ ವಿದ್ಯಾರ್ಥಿಗಳಿಗೂ ಪಾಠ ಕೇಳಲು ಅವಕಾಶ ಮಾಡಿಕೊಟ್ಟಿದ್ದಾರೆ.

ಇದನ್ನೂ ಓದಿ: ಕಾಫಿನಾಡು ಚಿಕ್ಕಮಗಳೂರಿಗೆ ಮತ್ತೆ ಕಾಲಿಟ್ಟ ಹಿಜಾಬ್ ಗಲಾಟೆ

For All Latest Updates

TAGGED:

ABOUT THE AUTHOR

...view details