ಸಕಲೇಶಪುರ (ಹಾಸನ): ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಶಂಕುಸ್ಥಾಪನೆ ಪೂಜೆಗೆ ತಾಲೂಕಿನ ಪುಣ್ಯ ನದಿ ಹೇಮೆಯ ಜಲವನ್ನು ಕಳುಹಿಸಿಕೊಡಲಾಗುತ್ತದೆ ಎಂದು ಬಜರಂಗದಳ ದಕ್ಷಿಣ ಪ್ರಾಂತ ಸಹ ಸಂಯೋಜಕ ರಘು ಸಕಲೇಶಪುರ ಹೇಳಿದರು.
ಪಟ್ಟಣದ ಸಕಲೇಶ್ವರ ಸ್ವಾಮಿ ದೇಗುಲದಲ್ಲಿ ಹೇಮಾವತಿ ನದಿಯ ಜಲಕ್ಕೆ ಸಂಘಟನೆಯಿಂದ ಪೂಜಾ ವಿಧಿ ವಿಧಾನಗಳನ್ನು ನಡೆಸಿದ ನಂತರ ಮಾತನಾಡಿ ಕೋಟ್ಯಂತರ ಹಿಂದೂಗಳ ಕನಸಿನ ಶ್ರೀ ರಾಮ ಮಂದಿರ ನಿರ್ಮಾಣ ಮಾಡಲು ಅಯೋಧ್ಯೆಯಲ್ಲಿ ಆಗಸ್ಟ್ 5ರಂದು ಶಂಕುಸ್ಥಾಪನೆ ಕಾರ್ಯಕ್ಕೆ ಚಾಲನೆ ನೀಡಲಾಗುತ್ತದೆ. ದೇಶದ ವಿವಿಧೆಡೆಯಿಂದ ಪುಣ್ಯ ನದಿಗಳ ನೀರನ್ನು ತಂದು ಅಂದಿನ ಪೂಜೆಯಲ್ಲಿ ಬಳಸಿಕೊಳ್ಳಲಾಗುತ್ತದೆ ಎಂದರು.