ಹಾಸನ: ಈಟಿವಿ ಭಾರತ ವರದಿ ಬಾಣಂತಿಯ ಬಾಳಿಗೆ ಬೆಳಕಾಗಿದೆ. ವರದಿಗೆ ಸ್ಪಂದಿಸಿರುವ ಖಾಸಗಿ ಸಂಸ್ಥೆಯೊಂದು ಲಾಕ್ಡೌನ್ ಹಿನ್ನಲೆ ಜಿಲ್ಲೆಯಲ್ಲಿ ಕಲ್ಲುಕೋರೆಯಲ್ಲಿ ಸಿಲುಕಿಕೊಂಡಿದ್ದ ಬಾಣಂತಿಗೆ ಬೇಕಾದ ಬಟ್ಟೆ, ಆಹಾರ, ತಾತ್ಕಾಲಿಕ ವಸತಿ ನೀಡುವ ಮೂಲಕ ಮಾನವೀಯತೆ ಮೆರೆದಿದೆ.
ಹೊಟ್ಟೆಗೆ ಹಿಟ್ಟಿಲ್ಲದೇ ಎದೆಯಲ್ಲಿ ಹಾಲು ಬರುತ್ತಿಲ್ಲರೀ... ಕರುಳು ಹಿಂಡುವಂತಿದೆ ಈ ಬಡಪಾಯಿಗಳ ಬದುಕು 'ಎಂಬ ಶೀರ್ಷಿಕೆಯಡಿ ವಿಸ್ತೃತ ವರದಿಯನ್ನ ಈಟಿವಿ ಭಾರತ ಬಿತ್ತರಿಸಿತ್ತು. ಲಾಕ್ ಡೌನ್ ಹಿನ್ನಲೆಯಲ್ಲಿ ಉತ್ತರ ಕರ್ನಾಟಕದಿಂದ ಕಲ್ಲುಕೋರೆಯಲ್ಲಿ ಕೆಲಸಕ್ಕೆಂದು ಬಂದಿದ್ದ ಸುಮಾರು 490 ಮಂದಿ ಸಿಲುಕಿಕೊಂಡಿದ್ದರು. ಅದರಲ್ಲಿ 9 ಮಂದಿ ಗರ್ಭಿಣಿಯರು ಹಾಗೂ ಓರ್ವ ಬಾಣಂತಿ ಸಿಲುಕಿಕೊಂಡಿದ್ದರು. ಇವರ ಸಮಸ್ಯೆಯನ್ನು ಸಂಬಂಧಪಟ್ಟ ಅಧಿಕಾರಿಗಳಿಗೆ ಹಾಗೂ ಸಾರ್ವಜನಿಕರ ಗಮನಕ್ಕೆ ತರುವಲ್ಲಿ ಈಟಿವಿ ಭಾರತ ಯಶಸ್ವಿಯಾಗಿದೆ.