ಹಾಸನ : ಹಾಸನ್ ಅಡ್ಮಿನ್ಸ್ ಗ್ರೂಪ್ ಮತ್ತು ಎಂಸಿಇ ಕಾಲೇಜು ವತಿಯಿಂದ ಸಾರ್ವಜನಿಕರಿಂದ ಸಂಗ್ರಹಿಸಿದ ಹಣದಿಂದ ಅಗತ್ಯ ಸಾಮಗ್ರಿಗಳನ್ನು ಖರೀದಿಸಿ ಸಕಲೇಶಪುರ ತಾಲೂಕು ಆನೆಮಹಲ್ನಲ್ಲಿ ತೆರೆಯಲಾಗಿರುವ ನೆರೆ ಸಂತ್ರಸ್ತರ ಪುನರ್ವಸತಿ ಕೇಂದ್ರಕ್ಕೆ ನೀಡಲಾಯಿತು.
ಈ ಫೇಸ್ಬುಕ್ ಪೇಜ್ ಮನರಂಜನೆಗಷ್ಟೇ ಅಲ್ಲ... ನೆರೆ ಸಂತ್ರಸ್ತರಿಗೆ ನೆರವು ನೀಡಿದ 'ಹಾಸನ ಅಡ್ಮಿನ್ಸ್ ' - Helping flood victims in Hassan
ಹಾಸನ್ ಅಡ್ಮಿನ್ಸ್ ಗ್ರೂಪ್ ಮತ್ತು ಎಂಸಿಇ ಕಾಲೇಜು ವತಿಯಿಂದ ಸಾರ್ವಜನಿಕರಿಂದ ಸಂಗ್ರಹಿಸಿದ ಹಣದಿಂದ ಅಗತ್ಯ ಸಾಮಗ್ರಿಗಳನ್ನು ಖರೀದಿಸಿ ಸಕಲೇಶಪುರ ತಾಲೂಕು ಆನೆಮಹಲ್ನಲ್ಲಿ ತೆರೆಯಲಾಗಿರುವ ನೆರೆ ಸಂತ್ರಸ್ತರ ಪುನರ್ವಸತಿ ಕೇಂದ್ರಕ್ಕೆ ನೀಡಲಾಯಿತು.
ಅತಿವೃಷ್ಟಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಸಂತ್ರಸ್ತರಿಗೆ ನೆರವಾಗಬೇಕು ಎಂಬ ಉದ್ದೇಶದಿಂದ ಈ ಕೆಲಸ ಮಾಡಲಾಗಿದ್ದು, ಇನ್‍ಸ್ಟಾಗ್ರಾಂ ಪೇಜ್‍ನಲ್ಲಿ ನೆರೆ ಸಂತ್ರಸ್ತರಿಗೆ ನೆರವಾಗೋಣ ಎಂಬ ಸಂದೇಶವನ್ನು ಅಪ್‍ಲೋಡ್ ಮಾಡಿದ್ದರು. ಅದಕ್ಕೆ ನಾಗರಿಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು 37,200 ರೂಪಾಯಿ ಸಂಗ್ರಹವಾಗಿತ್ತು.
ಇತ್ತೀಚಿನ ದಿನಗಳಲ್ಲಿ ಬೇಡವಾದ ವಿಷಯಕ್ಕೆ ಹೆಚ್ಚು ಬಳಕೆಯಾಗುತ್ತಿರುವ ಸಾಮಾಜಿಕ ಜಾಲತಾಣವನ್ನು ಉತ್ತಮ ಕಾರ್ಯಕ್ಕೆ ಬಳಸಿಕೊಂಡು ಪ್ರವಾಹ ಸಂತ್ರಸ್ತರಿಗೆ ನೆರವಾಗುವ ಮೂಲಕ ಹಾಸನ್ ಅಡ್ಮಿನ್ಸ್ ಗ್ರೂಪ್ ಸದಸ್ಯರು ಮತ್ತು ಎಂಸಿಇ ಕಾಲೇಜು ಸಾಮಾಜಿಕ ಕಳಕಳಿ ಮೆರೆದಿದೆ.