ಹಾಸನ: ಜಿಲ್ಲೆಯಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಈ ಸಾರಿ ಸರಿಯಾದ ಟೈಂಗೆ ಬಂದ ಮಳೆ... ಹಾಸನದ ಕೃಷಿಕರಿಗೆ ಖುಷಿಯೋ ಖುಷಿ - Hassan rain news 2020
ಹಾಸನದಲ್ಲಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿರುವುದರಿಂದ ರೈತರು ಸಂತಸಗೊಂಡಿದ್ದಾರೆ.
ಹಾಸನ ಜಿಲ್ಲೆಯಲ್ಲಿ ಧಾರಾಕಾರ ಮಳೆ
ಜಿಲ್ಲೆಯ ಗ್ರಾಮೀಣ ಭಾಗದ ರೈತರು ಬೆಳೆದಿರುವ ರಾಗಿ, ಭತ್ತ ಮತ್ತು ದ್ವಿದಳ ಧಾನ್ಯದ ಬೆಳೆಗಳಿಗೆ ಈಗ ಮಳೆಯ ಅವಶ್ಯಕತೆ ಇದ್ದಿದ್ದರಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಸೆಪ್ಟೆಂಬರ್ 28ರವರೆಗಿನ ಜಿಲ್ಲೆಯ ಮಳೆಯ ವರದಿಯನ್ನು ನೋಡುವುದಾದರೆ, ಹಾಸನ ತಾಲೂಕಿನಲ್ಲಿ 7.2 ಮಿ.ಮೀ. ಮಳೆಯಾಗಿದ್ದರೆ, ಚನ್ನರಾಯಪಟ್ಟಣ ತಾಲೂಕಿನ ಹಿರಿಸಾವೆಯಲ್ಲಿ 8.1 ಮಿ.ಮೀ. ಹಾಗೂ ನುಗ್ಗೆಹಳ್ಳಿಯಲ್ಲಿ 22. 4 ಮಿ.ಮೀ. ಮಳೆ ದಾಖಲಾಗಿದೆ.
Last Updated : Sep 29, 2020, 6:29 PM IST