ಹಾಸನ: ಹೊಳೆನರಸೀಪುರದಲ್ಲಿ ಇಂದು ಭರ್ಜರಿ ಮಳೆಯಾಗಿದ್ದರಿಂದ ತಾಲೂಕಿನ ಜನರ ಮೊಗದಲ್ಲಿ ಮಂದಹಾಸ ಮೂಡಿದೆ. ಮೂರ್ನಾಲ್ಕು ದಿನದಿಂದ ಬಿಸಿಲು ಹೆಚ್ಚಾಗಿದ್ದರಿಂದ ಜನರು ತಾಪಕ್ಕೆ ಬಳಲಿದ್ರು. ಇಂದು ನಿರಂತರವಾಗಿ 2 ಗಂಟೆಗಳಿಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಇಳೆ ತಂಪಾಗಿದೆ.
ಹೊಳೆನರಸೀಪುರದಲ್ಲಿ ಭಾರಿ ಮಳೆ: ಹರ್ಷ ಚಿತ್ತರಾದ ಜನತೆ.. ಜು.20 ರಿಂದ ಪ್ರಾರಂಭವಾಗುವ ಪುಷ್ಯ ಮಳೆ ಆ.2ಕ್ಕೆ ಕೊನೆಯಾಗುತ್ತದೆ. ಹೊಳೆನರಸೀಪುರದಲ್ಲಿ ಸುರಿದ ಮಳೆಯಿಂದ ಕೆಲ ಕಾಲ ಜನ ಜೀವನ ಅಸ್ತವ್ಯಸ್ತವಾಯಿತು. ಬಿರುಗಾಳಿ ಮತ್ತು ಭಾರೀ ಮಳೆ ಬಂದಿದ್ದರಿಂದ ವಾಹನಗಳು ಹಗಲಿನ ವೇಳೆಯೇ ಲೈಟ್ ಹಾಕಿಕೊಂಡು ಹೋಗುವ ಸ್ಥಿತಿ ಉಂಟಾಯಿತು. ಇನ್ನು ಹೊಸ ಬಸ್ ನಿಲ್ದಾಣದ ಅಂಬೇಡ್ಕರ್ ವೃತ್ತದ ಚರಂಡಿಗಳಲ್ಲಿ ನೀರು ತುಂಬಿ ರಸ್ತೆಯ ಮೇಲೆ ಹರಿಯುತ್ತಿದ್ದ ದೃಶ್ಯ ಕಂಡುಬಂತು.
ಹೊಳೆನರಸೀಪುರದಲ್ಲಿ ಭಾರಿ ಮಳೆ: ಹರ್ಷ ಚಿತ್ತರಾದ ಜನತೆ.. ಇನ್ನು ಹೊಳೆನರಸೀಪುರ ತಾಲೂಕು ಸೇರಿದಂತೆ, ಹಾಸನ ತಾಲೂಕು ಕಟ್ಟಾಯ ಹೋಬಳಿ ಭಾಗದಲ್ಲಿ ವಾಡಿಕೆಗಿಂತ ಈ ವರ್ಷ ಮುಂಗಾರು ಮಳೆ ಕಡಿಮೆಯಾಗಿತ್ತು. ಈ ವರ್ಷ ತೀರಾ ಕಡಿಮೆ ಮಳೆಯಾಗಿ ರೈತರಿಗೆ ವ್ಯವಸಾಯ ಮಾಡಲು ತುಂಬಾ ತೊಂದರೆಯಾಗಿತ್ತು. ಜಿಲ್ಲೆಯ ವಾಣಿಜ್ಯ ಬೆಳೆಗಳಾದ ಆಲೂಗೆಡ್ಡೆ, ಶುಂಠಿ, ಜೋಳ, ಮುಂತಾದ ಬೆಳೆಗಳಿಗೆ ಮಳೆಯಿಲ್ಲದೆ ಒಣಗುತ್ತಿದ್ದವು. ಮಳೆ ಬಿದ್ದರೂ ಕಡಿಮೆ ಪ್ರಮಾಣದ ಮಳೆ ಬಿದ್ದಿದೆ. ಆದ್ದರಿಂದ ಸದರಿ ಬೆಳೆಗಳ ಇಳುವರಿ ಮೇಲೆ ಬಾರಿ ಪರಿಣಾಮ ಬೀರುತ್ತಿತ್ತು.
ಹೀಗಾಗಿ ಇಂದು ಸುರಿದ ಪುಷ್ಯ ಮಳೆ ತಾಲೂಕಿನ ಜನರಿಗೆ ಸಂತಸವನ್ನುಂಟು ಮಾಡಿದೆ. ಮೂನ್ನಾಲ್ಕು ದಿನ ಹೀಗೆ ಮಳೆಯಾದ್ರೆ ಉತ್ತಮ ಫಸಲನ್ನು ನಿರೀಕ್ಷಿಸಬಹುದು.