ಹಾಸನ: ಅಧಿ ದೇವತೆ ಹಾಸನಾಂಬೆಯ ದರ್ಶನ ಪಡೆಯಲು ಭಕ್ತರು ಮಳೆ ಲೆಕ್ಕಿಸದೆ ಸರದಿಯಲ್ಲಿ ನಿಂತು ದೇವಿಯ ದರ್ಶನ ಪಡೆದು ಪುನೀತರಾದರು.
ಹಾಸನಾಂಬೆಯ ವೀಕ್ಷಣೆಗೆ ವರುಣನ ಅಡ್ಡಿ: ಮಳೆ ಲೆಕ್ಕಿಸದೆ ದರ್ಶನ ಪಡೆದ ಭಕ್ತರು
ಮಳೆ ಬಂದರೂ ಲೆಕ್ಕಿಸದ ಭಕ್ತರು ಸರದಿ ಸಾಲಿನಲ್ಲಿ ನಿಂತು ಹಾಸನದ ಅಧಿ ದೇವತೆ ಹಾಸನಾಂಬೆಯ ದರ್ಶನ ಪಡೆದರು.
ಭಕ್ತರು
ಉಚಿತವಾಗಿ ದೇವಿಯ ದರ್ಶನ ಮಾಡಲು ಬಂದವರಿಗೆ ರಕ್ಷಣೆಯ ಸೀಟುಗಳನ್ನು ಹಾಕಲಾಗಿದೆ. ಆದರೆ, 1 ಸಾವಿರ ರೂ. ಟಿಕೆಟ್ ಪಡೆದು ಮತ್ತು ಪಾಸ್‌ನಲ್ಲಿ ನೇರ ದೇವಿ ದರ್ಶನ ಮಾಡುವ ಸಾಲಿಗೆ ಮಾತ್ರ ಯಾವುದೆ ರಕ್ಷಣೆಯ ಸೌಲಭ್ಯ ಕಲ್ಪಿಸದ ಕಾರಣ, ಭಕ್ತರು ಮಳೆಯಲ್ಲಿಯೇ ನೆನೆದು ದೇವರ ದರ್ಶನ ಮಾಡಬೇಕಾಯಿತು.
ಚಿಕ್ಕಮಕ್ಕಳು ಮತ್ತು ವೃದ್ಧರು ಮಳೆ ಚಳಿಗೆ ನಡುಗುತ್ತಿದ್ದರು. ದೇವಿ ದರ್ಶನ ನಂತರ ಇತ್ತ ಕಡೆ ಹೊರಗೂ ಹೋಗಲು ಸಾಧ್ಯವಾಗದೇ ಶ್ರೀ ಸಿದ್ದೇಶ್ವರ ದೇವಾಲಯದ ಆವರಣದಲ್ಲಿ ಭಕ್ತರು ಆಶ್ರಯ ಪಡೆದರು.
Last Updated : Oct 23, 2019, 7:02 AM IST