ಅರಕಲಗೂಡು (ಹಾಸನ) :ತಾಲೂಕಿನಲ್ಲಿ ವರುಣಾರ್ಭಟಕ್ಕೆ ಬಾಳೆ ಗಿಡಗಳು ಹಾನಿಗೊಳಗಾಗಿವೆ.
ಅರಕಲಗೂಡಿನಲ್ಲಿ ಧಾರಾಕಾರ ಮಳೆ: ಬಾಳೆ ಗಿಡಗಳಿಗೆ ಹಾನಿ - Heavy rain in Arakalagudu
ಹಾಸನದಲ್ಲಿ ಧಾರಾಕಾರ ಮಳೆಯಿಂದಾಗಿ ಫಸಲಿಗೆ ಬಂದಿದ್ದ ಬಾಳೆ ಗಿಡಗಳು ಹಾನಿಗೊಂಡಿವೆ.
ಅರಕಲಗೂಡಿನಲ್ಲಿ ಧಾರಾಕಾರ ಮಳೆ
ತಾಲೂಕಿನಲ್ಲಿ ವರುಣನ ಅಬ್ಬರ ಮುಂದುವರೆದಿದ್ದು, ಶನಿವಾರವೂ ಧಾರಾಕಾರ ಮಳೆ ಸುರಿಯಿತು. ತಾಲೂಕಿನ ದೊಡ್ಡಮಗ್ಗೆ, ಕಸಬಾ, ರಾಮನಾಥಪುರ ಹೋಬಳಿ ಸೇರಿದಂತೆ ಹಲವು ಭಾಗದಲ್ಲಿ ಶನಿವಾರ ಸಂಜೆ ವೇಳೆಗೆ ಗುಡುಗು ಸಹಿತ ಶುರುವಾದ ಮಳೆ ಕೆಲಹೊತ್ತು ಅಬ್ಬರಿಸಿತು.
ಶುಕ್ರವಾರವೂ ತಾಲೂಕಿನ ಕೆಲವು ಕಡೆ ಗಾಳಿ ಸಹಿತ ಮಳೆಯಾಯಿತು. ಗಾಳಿ ಸಹಿತ ಮಳೆಯಿಂದಾಗಿ ಫಸಲಿಗೆ ಬಂದಿದ್ದ ಬಾಳೆ ಗಿಡಗಳು ನೆಲಕ್ಕುರುಳಿ ನಷ್ಟವುಂಟಾಗಿದೆ.