ಕರ್ನಾಟಕ

karnataka

ETV Bharat / state

ಹಾಸನದಲ್ಲಿ 327 ಕೋವಿಡ್‌ ಪ್ರಕರಣಗಳು ಪತ್ತೆ: ಆರೋಗ್ಯಾಧಿಕಾರಿ ಸತೀಶ್ ಸ್ಪಷ್ಟನೆ

ಹಾಸನದಲ್ಲಿಂದು ಕೋವಿಡ್​ ಸೆಂಟರ್​ನಿಂದ ಬಿಡುಗಡೆಯಾದ 128 ಜನರು ಸೇರಿ ಈವರೆಗೆ 12,627 ಮಂದಿ ಗುಣಮುಖರಾಗಿದ್ದಾರೆ. 2,934 ಸಕ್ರೀಯ ಪ್ರಕರಣಗಳಿದ್ದು, ಜಿಲ್ಲಾ ಕೋವಿಡ್‌ ಆಸ್ಪತ್ರೆ, ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

Health officer Dr.Sathish
ಆರೋಗ್ಯಾಧಿಕಾರಿ ಸತೀಶ್

By

Published : Sep 28, 2020, 7:13 PM IST

ಹಾಸನ: ಜಿಲ್ಲೆಯಲ್ಲಿ ಇಂದು ಹೊಸದಾಗಿ 327 ಕೋವಿಡ್‌ ಪ್ರಕರಣಗಳು ವರದಿಯಾಗಿದ್ದು, ಸೋಂಕಿತರ ಸಂಖ್ಯೆ 15,872 ಕ್ಕೆ ಏರಿಕೆಯಾಗಿದೆ. 5 ಸಾವಿನೊಂದಿಗೆ ಮೃತರ ಸಂಖ್ಯೆ 311 ತಲುಪಿದೆ ಎಂದು ಆರೋಗ್ಯಾಧಿಕಾರಿ ಸತೀಶ್ ತಿಳಿಸಿದ್ದಾರೆ.

ಆರೋಗ್ಯಾಧಿಕಾರಿ ಸತೀಶ್

ನಗರದಲ್ಲಿ ಮಾತನಾಡಿದ ಅವರು, ಇಂದು ಕೋವಿಡ್​ ಸೆಂಟರ್​ನಿಂದ ಬಿಡುಗಡೆಯಾದ 128 ಜನರು ಸೇರಿ ಈವರೆಗೆ 12,627 ಮಂದಿ ಗುಣಮುಖರಾಗಿದ್ದಾರೆ. 2,934 ಸಕ್ರಿಯ ಪ್ರಕರಣಗಳಿದ್ದು, ಜಿಲ್ಲಾ ಕೋವಿಡ್‌ ಆಸ್ಪತ್ರೆ, ಕೋವಿಡ್‌ ಆರೈಕೆ ಕೇಂದ್ರಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ತೀವ್ರ ನಿಗಾ ಘಟಕದಲ್ಲಿ 52 ಜನ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದರು.

ಇಂದು ದಾಖಲಾಗಿರುವ ಕೊರೊನಾ ಪ್ರಕರಣದಲ್ಲಿ ಆಲೂರು-11, ಅರಕಲಗೂಡು-58, ಅರಸೀಕೆರೆ-39, ಬೇಲೂರು-26, ಚನ್ನರಾಯಪಟ್ಟಣ - 51, ಹಾಸನ - 93, ಹೊಳೆನರಸೀಪುರ - 32, ಸಕಲೇಶಪುರ-14, ಇತರ- 3 ಒಟ್ಟು 327 ಪಾಸಿಟಿವ್ ಪ್ರಕರಣ ದಾಖಲಾಗಿದೆ ಎಂದು ತಿಳಿಸಿದರು.

ಕೊರೊನಾ ಉಲ್ಬಣವಾಗುತ್ತಿರುವ ಹಿನ್ನೆಲೆ ಯಾರಿಗಾದರೂ ಉಸಿರಾಟದಲ್ಲಿ ತೊಂದರೆ, ಜ್ವರ, ಶೀತ, ಕೆಮ್ಮು ಏನಾದರೂ ಇದ್ದರೆ ಹಿಮ್ಸ್, ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ತಪಾಸಣೆಗೆ ಒಳಪಡಬೇಕು. ಸಾರ್ವಜನಿಕರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಮೂಲಕ ಮತ್ತು ಉತ್ತಮ ದರ್ಜೆಯ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಕೆ ಮಾಡಿ, ಸಭೆ ಸಮಾರಂಭವನ್ನು ಆದಷ್ಟು ಕಡಿಮೆ ಮಾಡುವ ಮೂಲಕ ಕೊರೊನಾ ಸೋಂಕು ತಡೆಗಟ್ಟುವಲ್ಲಿ ಸಹಕರಿಸಬೇಕೆಂದು ಮನವಿ ಮಾಡಿದರು.

ಜಿಲ್ಲೆಯ ತಾಲೂಕುವಾರು ಕೋವಿಡ್ ಪ್ರಕರಣಗಳು:

1. ಆಲೂರು - 574

2. ಅರಕಲಗೂಡು- 1,523

3. ಅರಸೀಕೆರೆ - 2,000.

4. ಬೇಲೂರು - 1111

5. ಚನ್ನರಾಯಪಟ್ಟಣ 2,228

7. ಹಾಸನ - 6,611

8. ಹೊಳೆನರಸೀಪುರ -1,161

9. ಸಕಲೇಶಪುರ 575

10. ಇತರ 89 ಪ್ರಕರಣಗಳು ಈವರೆಗೆ ವರದಿಯಾಗಿದ್ದು, ಒಟ್ಟು 15,872 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details