ಹಾಸನ:ಬಿಜೆಪಿಯವರು ಕಾಂಗ್ರೆಸ್ ಅನ್ನು ತೆಗೆಯಬೇಕು ಅಂತಾ, ಕಾಂಗ್ರೆಸ್ ಅವರು ಬಿಜೆಪಿಯನ್ನು ತೆಗೆಯಬೇಕು ಅಂತ ಹೋರಾಟ ಮಾಡುತ್ತಿದ್ದಾರೆ. ಸೋನಿಯಾಗಾಂಧಿ ಮತ್ತು ರಾಹುಲ್ ಗಾಂಧಿ ಕರ್ನಾಟಕಕ್ಕೆ ಬಂದು ಪಕ್ಷದ ಪರಿಸ್ಥಿತಿಯನ್ನು ನೋಡಲಿ ಎಂದು ಮಾಜಿ ಸಚಿವ ಹೆಚ್.ಡಿ.ರೇವಣ್ಣ ಟೀಕಿಸಿದರು.
ಹಾಸನದ ಪ್ರವಾಸಿ ಮಂದಿರಲ್ಲಿ ಮಾತನಾಡಿದ ಅವರು, ಕೋಮುವಾದಿಗಳನ್ನು ದೂರವಿಡಬೇಕೆಂದು ಕಾಂಗ್ರೆಸ್ ಹೇಳುತ್ತೆ. ಆದರೆ ಇವತ್ತು ಕಾಂಗ್ರೆಸ್ ಪ್ರಾದೇಶಿಕ ಪಕ್ಷದ ಮನೆ ಬಾಗಿಲು ತಟ್ಟುತ್ತಿದೆ. ಇಂತಹ ಪರಿಸ್ಥಿತಿ ಬರಬಾರದಾಗಿತ್ತು ಎಂದರು. ಇದೇ ವೇಳೆ, ಗುಬ್ಬಿ ಶ್ರೀನಿವಾಸಗೌಡ 2023ಕ್ಕೆ ಕಾಂಗ್ರೆಸ್ ಪಕ್ಷದಿಂದ ಗೆದ್ದು ಮಂತ್ರಿಯಾಗಲಿ ಎಂದು ಶುಭಕೋರಿದರು.
ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಯವರು ಕರ್ನಾಟಕ ಕಾಂಗ್ರೆಸ್ ಪಕ್ಷವನ್ನು ಹೇಗಿದೆ ಎಂದು ಹುಡುಕುತ್ತಿದ್ದಾರೆ. ಎ-ಟೀಂ ಬಿ-ಟೀಂ ಯವರೇ ಜೆಡಿಎಸ್ ಮನೆ ಬಾಗಿಲಿಗೆ ಬಂದು ಕಟ್ಟುತ್ತಾರೆ. ಇಂತಹ ಕೆಟ್ಟ ಪರಿಸ್ಥಿತಿಯ ಕಾಂಗ್ರೆಸ್ಗೆ ಬರಬಾರದಾಗಿತ್ತು. 2018ರಲ್ಲಿ ರಾಹುಲ್ ಗಾಂಧಿಯವರು ಹಾಸನಕ್ಕೆ ಬಂದು ಯಾರದ್ದೋ ಮಾತುಕೇಳಿ ನಮ್ಮ ಪಕ್ಷವನ್ನು ಬಿ-ಟೀಂ ಎಂದರು. ಹೀಗಾಗಿ ಬಿಜೆಪಿ ಅಧಿಕಾರಕ್ಕೆ ಬಂತು. 60 ವರ್ಷ ರಾಜಕೀಯ ಮಾಡಿದ ಕಾಂಗ್ರೆಸ್ ಗ್ರಾಮೀಣ ಭಾಗದಲ್ಲೂ ಕುಸಿದಿದೆ. ಅವರುಗಳ ಕಷ್ಟಗಳನ್ನು ಕೇಳಲು ಕುಮಾರಣ್ಣ ಬರಬೇಕಾಯಿತು ಎಂದರು.