ಹಾಸನ: ಸರ್ಕಾರ ಏನಾದರೂ ದಿವಾಳಿಯಾಗಿದ್ದರೆ ಹೇಳಲಿ, ಸಾರ್ವಜನಿಕರಿಂದ ನಾವು ಹಾಗೂ ಶಾಸಕರು ಚಂದಾ ಎತ್ತಿ ಕೊರೊನಾ ರೋಗವನ್ನು ನಿಭಾಯಿಸುತ್ತೇವೆ. ಮನುಷ್ಯನ ಪ್ರಾಣಕ್ಕಿಂತ ಸರ್ಕಾರಕ್ಕೆ ಹಣವೇ ಹೆಚ್ಚಾಗಬಾರದು ಎಂದು ಮಾಜಿ ಸಚಿವ ಹೆಚ್. ಡಿ. ರೇವಣ್ಣ, ಸಿಎಂ ಬಿ. ಎಸ್. ಯಡಿಯೂರಪ್ಪ ವಿರುದ್ಧ ವಾಗ್ದಾಳಿ ನಡೆಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, ಸರ್ಕಾರ ಜಾರಿಗೆ ತಂದಿರುವ ಭೂಸುಧಾರಣಾ ತಿದ್ದುಪಡಿ ಕಾಯ್ದೆ, ಕಾರ್ಮಿಕ ಕಾಯ್ದೆ ಹಾಗೂ ಎಪಿಎಂಸಿ ಕಾಯ್ದೆಗಳ ವಿರುದ್ಧ ಹಾಸನ ಜಿಲ್ಲಾಧಿಕಾರಿ ಕಚೇರಿ ಎದುರು ಜೆಡಿಎಸ್ ವತಿಯಿಂದ ಪ್ರತಿಭಟನೆ ಹಮ್ಮಿಕೊಂಡಿರುವುದಾಗಿ ಪ್ರಕಟಿಸಿದರು.
ಕೊರೊನಾ ನಿಧಿಗೆ ಸಾರ್ವಜನಿಕರಿಂದ 378 ಕೋಟಿ ರೂ. ಹಣ ದೇಣಿಗೆಯಾಗಿ ಸರ್ಕಾರಕ್ಕೆ ಬಂದಿದೆ. ಈ ಹಣದಲ್ಲಿ ಒಂದು ರೂ. ಸಹ ಖರ್ಚು ಮಾಡಿಲ್ಲ ಎಂದು ಹೇಳಲಾಗಿದೆ. ಇದರಲ್ಲೇ 60 ಕೋಟಿ ರೂ. ಬಳಸಲು ಜಿಲ್ಲಾ ಮಂತ್ರಿಗಳು ಜಿಲ್ಲಾಧಿಕಾರಿಗಳ ನಿಯಂತ್ರಣಕ್ಕೆ ಕೊಡಲಿ ಎಂದು ಸಲಹೆ ನೀಡಿ, ಎಲ್ಲಾ ತಾಲೂಕುಗಳಿಗೂ ಹಣ ನೀಡುವಂತೆ ಅವರು ಒತ್ತಾಯಿಸಿದರು.
'ಜಿಲ್ಲಾ ಉಸ್ತುವಾರಿ ಸಚಿವರ ಕ್ಯಾಂಪ್ ಮಾಡಿಸಿ'
ರಾಜ್ಯದ 30 ಜಿಲ್ಲೆಯ ಉಸ್ತುವಾರಿ ಸಚಿವರು ಆಯಾ ಕ್ಷೇತ್ರದಲ್ಲಿ ಕ್ಯಾಂಪ್ ಮಾಡಬೇಕು. ಈ ವೇಳೆ ಜಿಲ್ಲಾ ಮಟ್ಟದ ಆರೋಗ್ಯ ಇಲಾಖೆ ಮತ್ತು ಇತರೆ ಇಲಾಖೆಗಳ ಅಧಿಕಾರಿಗಳೊಂದಿಗೆ ಚರ್ಚಿಸಿ ಟೀಮ್ ಮಾಡಬೇಕು. ಇದರಲ್ಲಿ ವೈದ್ಯರು, ತಾಲೂಕು ಅಧಿಕಾರಿಗಳನ್ನು ಹಾಗೂ ವಿಲೇಜ್ ಅಕೌಂಟೆಂಟರನ್ನು ನಿಯೋಜಿಸಬೇಕು ಎಂದು ಆಗ್ರಹಿಸಿದರು.
'10 ಅಡಿ ಸಾಮಾಜಿಕ ಅಂತರ ಕಾಪಾಡಿ'