ಹಾಸನ: ಮಳೆ ಹಾನಿ ಬಗ್ಗೆ ಅಧಿಕಾರಿಗಳು ನಿಖರ ವರದಿ ನೀಡುತ್ತಿಲ್ಲ. ಜಿಲ್ಲಾ ಉಸ್ತುವಾರಿ ಸಚಿವರು ಯಾವುದಕ್ಕೂ ಗಮನ ಕೊಡದೇ ಕೇವಲ ಬ್ರ್ಯಾಂಡಿ ಶಾಪ್ ಕಡೆ ಹೆಚ್ಚಿನ ಗಮನ ಕೊಡುತ್ತಿದ್ದಾರೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ವ್ಯಂಗ್ಯವಾಡಿದರು.
ನಗರದ ಸಂಸದರ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಳೆ ಹಿನ್ನೆಲೆ, ಬಹುತೇಕ ರಸ್ತೆಗಳು ಹದಗೆಟ್ಟಿವೆ, ಬೆಳೆ ನಾಶವಾಗಿದೆ, ಹೊಗೆ ಸೊಪ್ಪು ಹೊಲದಲ್ಲಿ ನೀರು ನಿಂತಿದೆ ಮತ್ತು ಶುಂಠಿ ಹೊಲದಲ್ಲೂ ನೀರು ನಿಂತು ಸಾಕಷ್ಟು ಹಾನಿಯಾಗಿದೆ.
ಆದರೆ, ಅಧಿಕಾರಿಗಳು ಸರಿಯಾದ ವರದಿ ನೀಡುತ್ತಿಲ್ಲ. ಜಿಲ್ಲೆಯಲ್ಲಿ ಕೇವಲ 100 ಎಕರೆ ಬೆಳೆ ನಷ್ಟವಾಗಿದೆ ಎಂದು ಕೃಷಿ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಜಿಲ್ಲೆಯಲ್ಲಿ ಸುಮಾರು 100 ಮನೆ ಹಾನಿಯಾಗಿದೆ. ಆದರೆ, ತಾಲೂಕು ಮಟ್ಟದ ಅಧಿಕಾರಿಗಳು ಸರಿಯಾಗಿ ಸಮೀಕ್ಷೆ ಮಾಡದೇ ಹಾನಿ ಬಗ್ಗೆ ಸರಿಯಾಗಿ ವರದಿ ನೀಡಿಲ್ಲ ಎಂದು ಆರೋಪಿಸಿದರು.
ಬೆಳೆ ಹಾನಿ ಕುರಿತಂತೆ ಮಾಜಿ ಸಚಿವ ಹೆಚ್ ಡಿ ರೇವಣ್ಣ ಪ್ರತಿಕ್ರಿಯೆ ನೀಡಿರುವುದು.. ಕಳೆದ ಬಾರಿ ಸಕಲೇಶಪುರ, ಹೊಳೆನರಸೀಪುರ, ಚನ್ನರಾಯಪಟ್ಟಣಕ್ಕೆ ಅಗತ್ಯ ಪರಿಹಾರ ನೀಡಿಲ್ಲ. ಪರಿಹಾರ ನೀಡುವಲ್ಲಿ ತಾರತಮ್ಯ ಮಾಡಲಾಗುತ್ತಿದೆ. ನಾನಾ ಕಾಮಗಾರಿಗಳ ನೂರಾರು ಕೋಟಿ ಹಣ ಬರಬೇಕಾಗಿದೆ.
ಇನ್ನೂ ಆಸ್ತಿ, ಬೆಳೆ ಹಾನಿ ಸಮೀಕ್ಷೆಗೆ ಜಿಲ್ಲಾಧಿಕಾರಿ ಪ್ರತಿ ತಾಲೂಕಿನ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಬೇಕು. ಎಲ್ಲಾ ಅಧಿಕಾರಿಗಳು ಬಡವರ ಮನೆಗೆ ತೆರಳಿ ಆಗಿರುವ ಹಾನಿ ಸಮೀಕ್ಷೆ ಮಾಡಬೇಕು. ರೈತರಿಗೆ ಅನ್ಯಾಯವಾಗದಂತೆ ಕ್ರಮವಹಿಸಲು ಆಗ್ರಹಿಸಿದರು.
ಇದನ್ನೂ ಓದಿ:ಕುಡಿದ ಅಮಲಿನಲ್ಲಿ ತಂದೆಯನ್ನೇ ಕೊಲೆಗೈದ ಮಗ
ವೈನ್ ಶಾಪ್ ನಡೆಸುತ್ತಿದ್ದ ಮಾಲೀಕರೋರ್ವರು ಸಾವನಪ್ಪಿದರೆ ನಂತರದಲ್ಲಿ ಲೈಸೆನ್ಸ್ ಕೊಡಲು ವಿಧವೆ ಬಳಿಯಿಂದಲೇ 30 ಲಕ್ಷ ರೂ.ಗಳ ಹಣ ವಸೂಲಿ ಮಾಡಿದ್ದಾರೆ. ಇಂತಹ ಹೀನಾಯ ಸ್ಥಿತಿಯಲ್ಲಿ ಸರ್ಕಾರ ನಡೆಯುತ್ತಿದೆ. ಅಬಕಾರಿ ಡಿಸಿ ಲಕ್ಷಾಂತರ ರೂ. ಹಣ ಕೊಟ್ಟು ಬಂದಿದ್ದೇನೆಂದು ಹೇಳಿಕೊಂಡಿದ್ದಾರೆ ಎಂದು ಗಂಭೀರವಾಗಿ ಆರೋಪಿಸಿದರು.