ಕರ್ನಾಟಕ

karnataka

ETV Bharat / state

ಉಪ ಚುನಾವಣೆಯಲ್ಲಿ ನಾವು ಯಾರ ಬಳಿಯೂ ಅಡ್ಜೆಸ್ಟ್​ ಮಾಡಿಕೊಳ್ಳುವುದಿಲ್ಲ: ಎಚ್​.ಡಿ ರೇವಣ್ಣ - ಡಿಕೆ ಶಿವಕುಮಾರ್

ಡಿಕೆಶಿ ಶಿರಾದಲ್ಲಿ ಪ್ರಚಾರ ವೇಳೆ ಮಾಡಿದ ಭಾಷಣದ ಬಗ್ಗೆ ಎಚ್​.ಡಿ ರೇವಣ್ಣ ಪ್ರತಿಕ್ರಿಯಿಸಿ, ಕಳೆದ ಅಧಿವೇಶನದಲ್ಲಿ ಮಾಧುಸ್ವಾಮಿ ಕೇಳಿದ ಪ್ರಶ್ನೆಗಳಿಗೆ ಇದೇ ಡಿಕೆಶಿ ಉತ್ತರ ಕೊಡಲಾಗದೇ ಏನಾದರೂ ಎಂಬುದು ರಾಜ್ಯದ ಜನತೆಗೆ ಗೊತ್ತು. ಇಂತಹ ಪೊಳ್ಳು ಮಾತುಗಳಿಗೆ ಜನರು ಕೆಲವೇ ದಿನಗಳಲ್ಲಿ ತಕ್ಕ ಉತ್ತರ ಕೊಡುತ್ತಾರೆ ಎಂದರು.

HD Revanna press meet
ಎಚ್​ಡಿ ರೇವಣ್ಣ

By

Published : Oct 29, 2020, 3:51 PM IST

ಹಾಸನ: ವಿಧಾನಸಭೆಯಲ್ಲಿ ಮಾಧುಸ್ವಾಮಿಗೆ ಉತ್ತರ ಕೊಡುವುದಕ್ಕೆ ಆಗದ ಡಿಕೆಶಿಗೆ ನಮ್ಮ ಪಕ್ಷದ ಹೆಣ್ಣು ಮಗಳ ಬಗ್ಗೆ ಮಾತನಾಡುವ ನೈತಿಕತೆ ಎಲ್ಲಿದೆ ಎಂದು ರೇವಣ್ಣ ಪತ್ರಿಕಾಗೋಷ್ಠಿಯಲ್ಲಿ ಕಿಡಿಕಾರಿದರು.

ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಸಚಿವ ಎಚ್​.ಡಿ ರೇವಣ್ಣ ತುಮಕೂರು ಜಿಲ್ಲೆಯ ಶಿರಾ ಉಪಚುನಾವಣೆಯಲ್ಲಿ ರೆಡಿಮೇಡ್ ಗಂಡಿನಂತೆ ಇರುವ ಟಿ.ಬಿ ಜಯಚಂದ್ರಗೆ ವಿಧಾನಸಭೆಯಲ್ಲಿ ಮಾತನಾಡುವ ಶಕ್ತಿ ಇದೆ. ಜೆಡಿಎಸ್ ಪಕ್ಷದ ಅಭ್ಯರ್ಥಿಗೆ ಮತ ಹಾಕಿದ್ರೆ ವಿಧಾನಸಭೆಯಲ್ಲಿ ಮಾತನಾಡುವ ಶಕ್ತಿ ಇಲ್ಲ ನೀವು ಮತ ಹಾಕಿದರೆ ಅದು ವ್ಯರ್ಥವಾಗುವುದು ಹಾಗಾಗಿ ಮತ ಹಾಕುವ ಮುನ್ನ ಯೋಚಿಸಿ ಅಭ್ಯರ್ಥಿಯನ್ನು ಆಯ್ಕೆ ಮಾಡಿ ಎಂದು ಭಾಷಣ ಮಾಡಿದ್ದ ಡಿಕೆಶಿಗೆ ಪತ್ರಿಕಾಗೋಷ್ಠಿಯಲ್ಲಿ ಪ್ರತ್ಯುತ್ತರ ನೀಡಿದರು.

ಮಾಜಿ ಸಚಿವ ಎಚ್​ಡಿ ರೇವಣ್ಣ

ಕಳೆದ ಅಧಿವೇಶನದಲ್ಲಿ ಮಾಧುಸ್ವಾಮಿ ಕೇಳುವಂತಹ 1,2,3,4 ಎಂಬ ಪ್ರಶ್ನೆಗಳಿಗೆ ಇದೇ ಡಿಕೆಶಿ ಉತ್ತರ ಕೊಡಲಾಗದೇ ಏನಾದರೂ ಎಂಬುದು ರಾಜ್ಯದ ಜನತೆಗೆ ಗೊತ್ತು. ಇಂತಹ ಪೊಳ್ಳು ಮಾತುಗಳಿಗೆ ಜನರು ಕೆಲವೇ ದಿನಗಳಲ್ಲಿ ತಕ್ಕ ಉತ್ತರ ಕೊಡುತ್ತಾರೆ ಡಿಕೆಶಿ ಅವರು ದೊಡ್ಡವರು ಅವರ ಬಗ್ಗೆ ನಾನು ಈಗ ಮಾತನಾಡಲು ಸಾಧ್ಯವೇ ಮುಂದಿನ ದಿನಗಳಲ್ಲಿ ಯಾರು ಏನೆಂಬುದು ಗೊತ್ತಾಗುತ್ತದೆ ಕಾದುನೋಡಿ ಎಂದರು.

ಇನ್ನು ಉಪಚುನಾವಣೆಯಲ್ಲಿ ನಾವು ಯಾರೊಂದಿಗೂ ಹೊಂದಾಣಿಕೆ ಮಾಡಿಕೊಂಡಿಲ್ಲ. ಇವತ್ತು ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂದರೆ ಅದಕ್ಕೆ ನೇರವಾಗಿ ಕಾಂಗ್ರೆಸ್ ಪಕ್ಷದವರು ಕಾರಣ. ಅವರಿಬ್ಬರೂ ಉಪಚುನಾವಣೆಯಲ್ಲಿ ಹೊಂದಾಣಿಕೆ ಮಾಡಿಕೊಳ್ಳಬಹುದು ನಾವು ಯಾರ ಮನೆಗೂ ಹೋಗುವುದಿಲ್ಲ ಯಾರ ಬಳಿಯು ಅಡ್ಜಸ್ಟ್ಮೆಂಟ್ ಮಾಡಿಕೊಳ್ಳುವುದಿಲ್ಲ ಎಂದರು.

ABOUT THE AUTHOR

...view details