ಹಾಸನ: ಕೇವಲ ಮೌಖಿಕ ಆದೇಶಕ್ಕೆ ಹೇಮಾವತಿ ಅಣೆಕಟ್ಟೆಯಿಂದ ನೀರು ಹರಿಸುವುದು ಎಷ್ಟು ಸರಿಯಾಗಿದೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು.
ಹೇಮಾವತಿ ಯೋಜನೆ: ನೀರಾವರಿ ಸಲಹಾ ಸಮಿತಿ ಸಭೆ ಕರೆಯಲು ರೇವಣ್ಣ ಮನವಿ - ಹೆಚ್.ಡಿ. ರೇವಣ್ಣ
ಕಳೆದ 3 ತಿಂಗಳಿಂದ ನಾವು ಜಿಲ್ಲೆಯ ಜೆಡಿಎಸ್ ಶಾಸಕರು ಹೇಮಾವತಿ ಅಣೆಕಟ್ಟೆಯಿಂದ ಕೆರೆಗಳಿಗೆ ನೀರು ಹರಿಸುವಂತೆ ಅನೇಕ ಬಾರಿ ಮನವಿಗಳನ್ನ ಮಾಡಿದರೂ ವಿವಿಧ ಕಾರಣಗಳನ್ನ ಮುಂದಿಟ್ಟುಕೊಂಡು ನೀರು ಹರಿಸಿರಲಿಲ್ಲ ಎಂದು ಹೆಚ್.ಡಿ. ರೇವಣ್ಣ ದೂರಿದರು.
ಕಳೆದ 3 ತಿಂಗಳಿಂದ ನಾವು ಜಿಲ್ಲೆಯ ಜೆಡಿಎಸ್ ಶಾಸಕರು ಹೇಮಾವತಿ ಅಣೆಕಟ್ಟೆಯಿಂದ ಕೆರೆಗಳಿಗೆ ನೀರು ಹರಿಸುವಂತೆ ಅನೇಕ ಬಾರಿ ಮನವಿಗಳನ್ನ ಮಾಡಿದ್ರೂ ವಿವಿಧ ಕಾರಣಗಳನ್ನ ಮುಂದಿಟ್ಟುಕೊಂಡು ನೀರು ಹರಿಸಿರಲಿಲ್ಲ ಎಂದು ದೂರಿದರು. ಇದಕ್ಕೆ ವಿವಿಧ ಕಾರಣಗಳನ್ನ ಮುಂದಿಟ್ಟುಕೊಂಡು ಯಾವುದೇ ಕಾರಣಕ್ಕೂ ಕುಡಿಯುವ ನೀರಿಗಾಗಿ ನೀರನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದಿದ್ದರು. ಕೆಲ ದಿನಗಳ ಹಿಂದೆ ಹಾಸನದ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವರ ಸಮ್ಮುಖದಲ್ಲಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಸಭೆ ನಡೆಸಲಾಗಿತ್ತು. ಆದರೆ, ಈಗ ಈ ವಿಷಯವನ್ನು ಮರೆಮಾಚಿ, ಕೇವಲ ಮೌಖಿಕ ಆದೇಶದ ಮೇರೆಗೆ ನಿನ್ನೆಯಿಂದ ಜಲಾಶಯದಿಂದ ನೀರನ್ನು ಹರಿಸಲು ಮುಂದಾಗಿರುವ ಅಧಿಕಾರಿಗಳು ಸರ್ಕಾರವನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಹೇಮಾವತಿ ಯೋಜನೆ ಅಚ್ಚುಕಟ್ಟು ವ್ಯಾಪ್ತಿಯ ಶಾಸಕರುಗಳು ನೀರಾವರಿ ಸಲಹಾ ಸಮಿತಿ ಸಭೆಯನ್ನು ಕರೆಯಲು ಮನವಿ ಸಲ್ಲಿಸಿದರು. ಇದುವರೆಗೂ ನೀರಾವರಿ ಸಲಹಾ ಸಮಿತಿ ಸಭೆಯನ್ನು ನಡೆಸದೇ ಯಾವುದೇ ಸರ್ಕಾರಿ ಆದೇಶವಿಲ್ಲದೇ ಕೆಲವೇ ಕೆಲ ಬಿಜೆಪಿ ಶಾಸಕರು ಹೇಳಿದ್ದಾರೆಂಬ ಕಾರಣಕ್ಕೆ ಕಾನೂನು ಬಾಹಿರವಾಗಿ ಕೇವಲ ಮೌಖಿಕ ಆದೇಶದನ್ವಯ ನೀರು ಹರಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನೆ ಮಾಡಿದರು. ತುಮಕೂರು, ಹಾಸನ, ಮಂಡ್ಯದ ರೈತರು ನಾವೆಲ್ಲ ಅಣ್ಣ ತಮ್ಮಂದಿರಂತೆ ಇದ್ದೇವೆ. ಜನರಲ್ಲಿ ದ್ವೇಷ ಹುಟ್ಟಿಸುವ ಕೆಲಸವನ್ನು ಮಾಡಬಾರದು ಎಂದು ಹೇಳಿದರು. ಇದೆ ವೇಳೆ, ಬಿಜೆಪಿ ಶಾಸಕರ ಈ ನಡಿಗೆಗೆ ತಿರುಗೇಟು ನೀಡಿದರು.