ಹಾಸನ:ಹೆಚ್.ಡಿ. ಕುಮಾರಸ್ವಾಮಿವರು ಮುಖ್ಯಮಂತ್ರಿಯಾಗಿದ್ದಾಗ ಮಾಡಿದ್ದ ಅಭಿವೃದ್ಧಿ ಕಾಮಗಾರಿಗಳನ್ನೆಲ್ಲಾ ಇಂದಿನ ಸರಕಾರ ಸ್ಥಗಿತ ಮಾಡುವುದರ ಮೂಲಕ ದ್ವೇಷದ ರಾಜಕಾರಣ ಮಾಡುತ್ತಿದೆ ಎಂದು ಮಾಜಿ ಸಚಿವ ಎಚ್.ಡಿ. ರೇವಣ್ಣ ಅಸಮಾಧಾನ ವ್ಯಕ್ತಪಡಿಸಿದರು.
ಹೆಚ್ಡಿಕೆ ಅವಧಿಯಲ್ಲಿ ಆರಂಭಿಸಿದ್ದ ಕಾಮಗಾರಿಗಳು ಸ್ಥಗಿತ: ರೇವಣ್ಣ ಆರೋಪ - ಅಭಿವೃದ್ಧಿ ಕಾಮಗಾರಿ ಸ್ಥಗಿತ
ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಅಧಿಕಾರಾವಧಿಯಲ್ಲಿ ನಡೆಯುತ್ತಿದ್ದ ಎಲ್ಲಾ ಕಾಮಗಾರಿಗಳನ್ನು ಬಿಜೆಪಿ ಸರ್ಕಾರ ಸ್ಥಗಿತಗೊಳಿಸಿದೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಗಂಭೀರ ಆರೋಪ ಮಾಡಿದ್ದಾರೆ.
ಜಿಲ್ಲೆಯಲ್ಲಿ ಎರಡು ಜಾಗಗಳು ಕೋಟ್ಯಂತರ ರೂ. ಬೆಲೆ ಬಾಳುತ್ತವೆ. ಕೆಲವರು ಸುಳ್ಳು ದಾಖಲೆ ಸೃಷ್ಠಿಸಿ ನಮ್ಮ ಆಸ್ತಿ ಎನ್ನುತ್ತಿದ್ದಾರೆ. ನಗರದ ಗಣಪತಿ ಪೆಂಡಲ್ ಬಳಿಯ ಜನತಾ ಬಜಾರ್ ಪಕ್ಕ ಇರುವ ಜಾಗ 20 ರಿಂದ 30 ಕೋಟಿ ರೂ ಮೌಲ್ಯದ ಆಸ್ತಿಯಾಗಿದೆ. ಅದೆ ರೀತಿ ಅರಸೀಕೆರೆಯ ಬಸ್ ನಿಲ್ದಾಣ ಬಳಿ ಸೊಸೈಟಿಯ 20 ಕೋಟಿ ರೂ. ಆಸ್ತಿಯಾಗಿದ್ದು, ಈಗ ಮಧ್ಯವರ್ತಿಗಳ ಕೈ ಸೇರಿದೆ. ಆದರೆ ಸಹಕಾರ ಇಲಾಖೆಯಿಂದ ಇಲ್ಲಿವರೆಗೂ ಯಾವ ಅಪೀಲು ಹಾಕಿರುವುದಿಲ್ಲ. ಕೂಡಲೆ ಇಲಾಖೆ ಅಧಿಕಾರಿಗಳು ಈ ಬಗ್ಗೆ ಅಪೀಲ್ ಹಾಕಿ ಸರಕಾರಕ್ಕೆ ಸರಿಯಾದ ದಾಖಲೆ ಕೊಡಬೇಕು. ದಾಖಲೆ ಕೊಡದೆ ಸರಕಾರಿ ವಕೀಲರ ಜೊತೆ ಸೇರಿದ್ದಾರೆ ಎಂದರು.
ಪತ್ರಿಕೆಯವರು ಯಾವುದಕ್ಕೂ ಹೆದರಬಾರದು ಏನೆ ತಪ್ಪು ಇದ್ದರೂ ಬರೆಯಬೇಕು. ಅದು ಏನೇ ವಿಚಾರ ಇರಲಿ ಹಿಂದೆ ಸರಿಯದೆ ಸುದ್ದಿ ಮಾಡಬೇಕು. ಪತ್ರಿಕಾ ಸ್ವಾತಂತ್ರ್ಯಕ್ಕೆ ನಾವ್ಯಾರು ಧಕ್ಕೆ ತರಬಾರದು. ವಿಧಾನಸೌಧದಲ್ಲಿ ಬಾಗಿಲು ಏಕೆ ತೆಗೆಯುತ್ತಿದ್ದಾರೆ ಯಾವ ಕಛೇರಿ ನಡೆಯುತ್ತಿದೆ. ಕಚೇರಿ ಏನಿದ್ದರೂ ರಾತ್ರಿ 8 ಗಂಟೆ ಮೇಲೆ ನಡೆಯುತ್ತದೆ. ಅದು ಎಲ್ಲಿ ನಡೆಯುತ್ತದೆ ಮುಂದೆ ಹೇಳುತ್ತೇನೆ ಎಂದರು.
ಮಂತ್ರಿಗಳ ಕಛೇರಿ ವಿಧಾನಸೌಧದಲ್ಲಿ ನಡೆಯುತ್ತಿಲ್ಲ. ಸಂಜೆ 6 ರಿಂದ ಬೆಳಿಗ್ಗೆ12 ಗಂಟೆಯವರೆಗೂ ಕಚೇರಿ ನಡೆಯುತ್ತಿದೆ. ಆಮೇಲೆ ಅವರು ಹೇಳುವುದು ಮಧ್ಯಾಹ್ನ 3 ಗಂಟೆಗೆ ಎಂದು ಪತ್ರಿಕೆ ಒಂದಕ್ಕೆ ನೋಟಿಸ್ ನೀಡಿರುವ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ರೇವಣ್ಣ ಉತ್ತರಿಸಿದರು.
ಸರಕಾರವು ಪತ್ರಕರ್ತರಿಗೆ ಪೂರ್ಣ ಸಹಕಾರ ಕೊಡುವ ಮೂಲಕ ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು ಎಂದು ಎಚ್ಚರಿಸಿದರು. ಬೆಂಗಳೂರಿನಲ್ಲಿ ಶಾಸಕರ ಮನೆಗೆ ಬೆಂಕಿ ಹಾಕಿ ದಾಂಧಲೆ ಮಾಡಿದ ವಿಚಾರವಾಗಿ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಓಟಿಗಾಗಿ ಎರಡು ರಾಜಕೀಯ ಪಕ್ಷದವರು ಅವರು ಇವರ ಮೇಲೆ ಆರೋಪ ಮಾಡಿಕೊಳ್ಳುತ್ತಿರುವುದಾಗಿ ಹೇಳಿದರು.