ಕರ್ನಾಟಕ

karnataka

ETV Bharat / state

150 ವರ್ಷ ಇತಿಹಾಸವಿರೋ ಕಾಂಗ್ರೆಸ್ ಕೋಮುವಾದಿ ಬಿಜೆಪಿ ಜೊತೆ ಸೇರಿದೆ: ರೇವಣ್ಣ ಆರೋಪ - ಕಾಂಗ್ರೆಸ್​- ಬಿಜೆಪಿ ವಿರುದ್ಧ ರೇವಣ್ಣ ಆಕ್ರೋಶ

ಹಾಸನದ ಜಿಲ್ಲಾಧಿಕಾರಿ ಕಚೇರಿ 24x7 ಮಾದರಿಯಲ್ಲಿ ತೆರೆದಿರುತ್ತದೆ. ಬಿಜೆಪಿ ಮುಖಂಡರ ಅಧೀನದಲ್ಲಿ ಜಿಲ್ಲೆಯ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.

HD Revanna outrage
HD Revanna outrage

By

Published : Oct 12, 2020, 3:44 PM IST

ಹಾಸನ: ರಾಜ್ಯದೆಲ್ಲೆಡೆ ಬೆಳಗ್ಗೆಯಿಂದ ಸಂಜೆವರೆಗೆ ಮಾತ್ರ ಸರ್ಕಾರಿ ಕಚೇರಿಗಳು ತೆರೆದಿರುತ್ತವೆ. ಆದ್ರೆ ಹಾಸನದ ಜಿಲ್ಲಾಧಿಕಾರಿ ಕಚೇರಿ ಮಧ್ಯರಾತ್ರಿವರೆಗೂ ತೆರೆದಿರುತ್ತದೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಆರೋಪಿಸಿದರು.

ಅಧಿಕಾರಿಗಳು ಬಿಜೆಪಿ ಕೈಗೊಂಬೆಗಳಾಗಿದ್ದಾರೆ: ರೇವಣ್ಣ ಕಿಡಿ

ಪ್ರವಾಸಿ‌ಮಂದಿರದಲ್ಲಿ ಮಾತನಾಡಿದ ಅವರು, 24x7 ಮಾದರಿಯಲ್ಲಿ ಹಾಸನ ಜಿಲ್ಲಾಧಿಕಾರಿ ಕಚೇರಿ ತೆರೆದಿರುತ್ತದೆ. ಬಿಜೆಪಿ ಮುಖಂಡರ ಅಧೀನದಲ್ಲಿ ಜಿಲ್ಲೆಯ ಅಧಿಕಾರಿಗಳು ಕೆಲಸ ಮಾಡುತ್ತಿದ್ದಾರೆಂದು ದೂರಿದರು.

ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನ ತರಾತುರಿಯಲ್ಲಿ ಮಾಡಲಾಗುತ್ತಿದೆ. ಹಾಸನದಲ್ಲಿ ಕಾನೂನು ನಿಯಮ ಗಾಳಿಗೆ ತೂರಿ ಕೆಲಸ ನಡೆಯುತ್ತಿದೆ ಎಂದು ಆರೋಪಿಸಿದ ರೇವಣ್ಣ ನಗರಸಭೆ ಅಧ್ಯಕ್ಷ ಸ್ಥಾನದ ಮೀಸಲಾತಿ 18ನೇ ಸ್ಥಾನದಲ್ಲಿತ್ತು. 52 ನೇ ಸ್ಥಾನದಲ್ಲಿದ್ದ ಹಾಸನ ಜಿಲ್ಲೆಗೆ ಕಾನೂನು ಬಾಹಿರವಾಗಿ ನಿಗದಿ ಮಾಡಿದ್ದಾರೆ ಎಂದರು. ಹಾಸನ ಜಿಲ್ಲಾಧಿಕಾರಿ ಮತ್ತು ಉಪವಿಭಾಗಾಧಿಕಾರಿ ಒಂದು ಪಕ್ಷದ ಏಜೆಂಟ್​ರಂತೆ ಕೆಲಸ ಮಾಡುತ್ತಿದ್ದಾರೆ‌. ಜಿಲ್ಲೆಯ ಅಧಿಕಾರಿಗಳು ಬಿಜೆಪಿ ಮುಖಂಡರ ಅಧೀನದಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ಸಿಎಂ ಈ ಬಗ್ಗೆ ಕ್ರಮ ಕೈಗೊಳ್ಳಬೇಕು. ಅಡ್ವೋಕೇಟ್ ಜನರಲ್ ಅವರು ಹಾಸನ ನಗರಸಭೆ ಸಾಮಾನ್ಯ ವರ್ಗಕ್ಕೆ ನಿಗದಿಯಾಗುತ್ತೆ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದರು. ಆ ಅಡ್ವೋಕೇಟ್ ಜನರಲ್ ಕೊರೊನಾ ಬಂತು ಅಂತಾ ಮನೆಗೆ ಹೋದರು. ಆದರೆ ಈಗ ಹಾಸನ ಮತ್ತು ಅರಸೀಕೆರೆ ನಗರಸಭೆಗೆ ಎಸ್ ಟಿ ಮೀಸಲಾತಿ ನಿಗದಿ ಮಾಡಿದ್ದಾರೆಂದು ಆರೋಪಿಸಿದರು‌‌. ಈ ಮೀಸಲಾತಿ ನಿಗದಿ ಮಾಡಿರುವುದು ಕಾನೂನು ಬಾಹಿರವಾಗಿದ್ದು, ನಾವು ಮೀಸಲಾತಿ ವಿರೋಧಿಸಿ ನ್ಯಾಯಾಲಯದ ಮೊರೆ ಹೋಗುತ್ತೇವೆ. ಸರ್ಕಾರಿ ಅಧಿಕಾರಿಗಳು ಬಿಜೆಪಿ ಕೈಗೊಂಬೆಯಾಗಿದ್ದಾರೆ. ಹಾಸನ ಜಿಲ್ಲೆಯಲ್ಲಿ ಬಾಲಮುರುಕ ಅಧಿಕಾರಿಗಳಿದ್ದಾರೆ ಎಂದು ರೇವಣ್ಣ ಕಿಡಿಕಾರಿದರು.

150 ವರ್ಷ ಇತಿಹಾಸ ಇರುವ ಕಾಂಗ್ರೆಸ್ ಪಕ್ಷದ ಮುಖಂಡರು ಕೋಮುವಾದಿಗಳ ಜೊತೆ ಸೇರಿದ್ದಾರೆ. ಮಂಡ್ಯ ಮತ್ತು ತುಮಕೂರು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರು. ಹೆಚ್​ ಡಿ ಕುಮಾರಸ್ವಾಮಿ ಮಗನಿಗೆ ಮಂಡ್ಯದಲ್ಲಿ ಜೆಡಿಎಸ್ ಮತಗಳು ಸರಿಯಾಗಿ ಬಂದಿವೆ. ಆದ್ರೆ ಕಾಂಗ್ರೆಸ್ ಪಕ್ಷ ಬಿಜೆಪಿ ಜೊತೆ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ವಾಗ್ದಾಳಿಯನ್ನು ರೇವಣ್ಣ ಮುಂದುವರಿಸಿದರು.

ABOUT THE AUTHOR

...view details