ವಿದ್ಯುತ್ ದರ ಏರಿಕೆ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ರೇವಣ್ಣ ಆಕ್ರೋಶ - ವಿದ್ಯುತ್ ಬಿಲ್ ಹೆಚ್ಚಳ ಲೇಟೆಸ್ಟ್ ನ್ಯೂಸ್
ಸರ್ಕಾರ ವಿದ್ಯುತ್ ದರ ಹೆಚ್ಚಳ ಮಾಡಿರುವುದಕ್ಕೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಆಕ್ರೋಶ ವ್ಯಕ್ತಡಿಸಿದ್ದಾರೆ. ಕೆಇಬಿಗೆ ಉಂಟಾದ ನಷ್ಟ ಸರಿದೂಗಿಸಲು ಸರ್ಕಾರ ರೈತರನ್ನು ಸಂಕಷ್ಟಕ್ಕೆ ದೂಡಿದೆ ಎಂದು ಕಿಡಿಕಾರಿದ್ದಾರೆ.

ಮಾಜಿ ಸಚಿವ ಎಚ್.ಡಿ. ರೇವಣ್ಣ ಆಕ್ರೋಶ
ಹಾಸನ: ರಾಜ್ಯದಲ್ಲಿ ಎರಡು ಉಪ ಚುನಾವಣೆ ಮುಗಿದ ಬಳಿಕ ಕೆಇಬಿ ಬಿಲ್ ಹೆಚ್ಚು ಮಾಡಿದೆ ಎಂದು ಸರ್ಕಾರದ ವಿರುದ್ಧ ಮಾಜಿ ಸಚಿವ ಹೆಚ್.ಡಿ.ರೇವಣ್ಣ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಮಾಜಿ ಸಚಿವ ಹೆಚ್.ಡಿ.ರೇವಣ್ಣ
48 ಸಾವಿರ ಕುಟುಂಬಕ್ಕೆ ವೃದ್ಧಾಪ್ಯ ವೇತನ ಬಂದಿಲ್ಲ: ಈ ಸರ್ಕಾರ ಲೂಟಿಕೋರರ ಸರ್ಕಾರವಾಗಿದೆ. ಕೆಲ ಗುತ್ತಿಗೆದಾರರು ತಮ್ಮ ಪತ್ನಿಯರ ತಾಳಿ ಮಾರಾಟ ಮಾಡ್ತಿದ್ದಾರೆ. ಪ್ರಧಾನಿ ಮೋದಿಯವರೇ ನಮ್ಮದು 10 ಪರ್ಸೆಂಟ್ ಸರ್ಕಾರ ಅಂತಾ ಹೇಳ್ತಿದ್ರು. ಆದರೆ ಈಗ ರಾಜ್ಯದಲ್ಲಿರುವ ನಿಮ್ಮದು ಯಾವ ಸರ್ಕಾರ ಹೇಳಿ ಎಂದು ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದರು.