ಕರ್ನಾಟಕ

karnataka

ETV Bharat / state

ಸಿಎಂ ಬದಲಾವಣೆ ವಿಚಾರ ಗೊತ್ತಿಲ್ಲ; ನನ್ನ ಜನ್ರ ಜೀವ ಉಳಿಸಿಕೊಳ್ಳಬೇಕಿದೆ ಎಂದ ರೇವಣ್ಣ - ಸಿಎಂ ಬದಲಾವಣೆ

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ. ಸದ್ಯ ನಮ್ಮ ಜನರನ್ನ ಕೋವಿಡ್​ನಿಂದ ಉಳಿಸಿಕೊಳ್ಳಬೇಕಿದೆ ಎಂದು ಮಾಜಿ ಸಚಿವ ಹೆಚ್​.ಡಿ. ರೇವಣ್ಣ ಹೇಳಿದರು.

HD Revanna
HD Revanna

By

Published : May 28, 2021, 1:50 AM IST

ಹಾಸನ:ಅಯ್ಯೋ, ಯಾರು ಏನಾದ್ರೂ ಮಾಡ್ಕಂಡ್ ಹಾಳ್ ಬಿದ್ದೊಗ್ಲಿ . ನನಗೆ ಟಿಕೆಟ್ ತಕ್ಕೋಡಿ ರಷ್ಯಾಕ್ಕೋಗಿ ಅದೇನೋ ಅವ್ರ ಲಸಿಕೆ ತಗೊಂಡ ಬರ್ತಿನಿ. ನಾನು ನನ್ನ ಜನ್ರ ಜೀವ ಉಳಿಸಿಕೊಳ್ಳಬೇಕಿದೆ ಎಂದು ಮಾಜಿ ಸಚಿವ ಎಚ್.ಡಿ.ರೇವಣ್ಣ ಸಿಎಂ ಬದಲಾವಣೆ ವಿಚಾರವಾಗಿ ಹೇಳಿಕೆ ನೀಡಿದ್ರು.

2 ಲಕ್ಷ ಜನರಿಗೆ ಮಾತ್ರ ಲಸಿಕೆ

ಹಾಸನದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ಬದಲಾವಣೆ ಕೂಗು ವಿಚಾರ ನನಗೆ ಗೊತ್ತಿಲ್ಲ. ಇವತ್ತು ನನ್ನ ಜನರ ಜೀವ ಉಳಿಸಿಕೊಳ್ಳಬೇಕಿದೆ. ನಮ್ಮ ಜಿಲ್ಲೆಯಲ್ಲಿ 16 ಲಕ್ಷ ಜನರಿದ್ದು, ಕೇವಲ 2 ಲಕ್ಷ ಮಂದಿಗೆ ಕೋವಿಡ್ ಲಸಿಕೆ ನೀಡಲಾಗಿದೆ. ನಿನ್ನೆ ಸಚಿವ ಸುಧಾಕರ್​ ಫೋನ್ ಮಾಡಿದ್ರು. ವೈದ್ಯರನ್ನ ನೇಮಕ ಮಾಡಲು ಆದೇಶ ಮಾಡಿದ್ದೀನಿ ಅಂದ್ರು. ಆಯ್ತು ದೇವ್ರು ನಿಮಗೆ ಆಯಸ್ಸು ಕೊಟ್ಟು ಒಳ್ಳೆದಾಗ್ಲಿ ಅಂದೆ ಎಂದು ಹೇಳಿದ್ರು.

ಸಿಎಂ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ ಎಂದ ರೇವಣ್ಣ

ಜಿಲ್ಲೆಯಲ್ಲಿ ಎರಡು ಲಕ್ಷ ಜನರಿಗೆ ಲಸಿಕೆ ಕೊಟ್ರೆ ಎಲ್ಲಿ ಸಾಲುತ್ತೆ. ನಮ್ಮ ಜಿಲ್ಲೆಗೆ ಮಲತಾಯಿ ಧೋರಣೆ ತೋರಬಾರದು. ಕೆಲವು ಕೂಲಿ ಮಾಡುವ ಬಡವರ ಬಿಪಿಎಲ್ ಕಾರ್ಡ್ ರದ್ದು ಮಾಡಿದ್ದಾರೆ. ಈ ರಾಜ್ಯ ಲೂಟಿಕೋರರ ಕೈ ಸೇರಿದೆ. ಎರಡು ರಾಷ್ಟ್ರೀಯ ಪಕ್ಷಗಳು ಚುನಾವಣೆ ಮಾಡುವ ಬದಲು 2ನೇ ಅಲೆಗೆ ಸಿದ್ಧತೆ ಮಾಡಬಹುದಿತ್ತು. ಹೀಗಾಗಿ ಜನರಿಗೆ ಇಂತಹ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಭಿಕ್ಷೆ ಹಾಕುವ ರೀತಿ ಪ್ಯಾಕೇಜ್ ಘೋಷಣೆ

ಇವತ್ತು ಕೂಲಿ ಕಾರ್ಮಿಕರಿಗೆ ಭಿಕ್ಷೆ ಹಾಕುವ ರೀತಿ ಪ್ಯಾಕೇಜ್​ ಘೋಷಣೆ ಮಾಡುವ ಬದಲಿಗೆ ಕನಿಷ್ಠ 5-10 ಸಾವಿರ ರೂ. ನೀಡಿ. ದ್ವೇಷದ ರಾಜಕಾರಣದಿಂದಲೇ ಜಿಲ್ಲೆಯನ್ನು ಕಡೆಗಣಿಸಿದ್ದು, ಹೀಗಾಗಿ ಕೊರೊನಾ ಹೆಚ್ಚಾಗಲು ಕಾರಣವಾಗಿದೆ. ಈಗಾಗಲೇ 2ನೇ ಅಲೆಯಿಂದ 486 ಜನರು ಸಾವನ್ನಪ್ಪಿದ್ದಾರೆ. ಖಾಸಗಿ ಆಸ್ಪತ್ರೆಗೆ ಸಾಮಾನ್ಯ ಜನರು ಹೋದರೆ ಹಣ ಕಟ್ಟಲು ಸಾಧ್ಯವಾಗದೇ ಮನೆ, ಜಮೀನು, ಒಡವೆ ಮಾರಿ ದುಡ್ಡು ಕಟ್ಟಬೇಕಾದ ಪರಿಸ್ಥಿತಿ ನಿರ್ಮಾಣಗೊಂಡಿದೆ.

ಕೆಲವರು ವಿಷ ಕುಡಿದು ಸಾಯುತ್ತಿದ್ರೂ ಸರಕಾರ ಮಾತ್ರ ಕಣ್ಣು ಮುಚ್ಚಿ ಕುಳಿತಿದೆ. ಇಲ್ಲಿನ ಶಾಸಕರು ಒತ್ತಾಯ ಮಾಡಿದ ಕಾರಣ ಮೂರು ತಿಂಗಳ ನಂತರ ಜಿಲ್ಲೆಗೆ 10 ಕೋಟಿ ರೂ ನೀಡಿದ್ದಾರೆ. ಎಲ್ಲ ವಿಚಾರದಲ್ಲೂ ಜಿಲ್ಲಾಧಿಕಾರಿಗಳನ್ನು ದೂರಲಾಗುವುದಿಲ್ಲ. ಹೊಳೆನರಸೀಪುರ ತಾಲೂಕಿನ ಒಂದೊಂದು ಹಳ್ಳಿಗಳಲ್ಲಿ 10 ರಿಂದ 15 ಕೊರೊನಾ ಪಾಸಿಟಿವ್ ಪ್ರಕರಣ ದಾಖಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಸಿಎಂ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ

ಮುಖ್ಯಮಂತ್ರಿ ಬದಲಾವಣೆ ವಿಚಾರ ನಮಗೆ ಗೊತ್ತಿಲ್ಲ. ಮೊದಲು ನಮ್ಮ ಜನರನ್ನು ಉಳಿಸಿಕೊಳ್ಳಬೇಕು. ಏನಾದರೂ ಲೂಟಿ ಮಾಡಿಕೊಂಡು ಹೋಗಲಿ ಬಿಡಿ. ನಮಗೆ ಈಗ ಅವೆಲ್ಲ ಅವಶ್ಯಕತೆ ಇರುವುದಿಲ್ಲ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಇದನ್ನೂ ಓದಿ: COVID 19 Vaccination: ಅಚ್ಚರಿಯಾದ್ರೂ ನಿಜ.. ಲಸಿಕೆ ಅಭಿಯಾನದಲ್ಲಿ ಈ ರಾಜ್ಯವೇ ನಂಬರ್ 1!

ಹಾಸನ ಜಿಲ್ಲೆಗೆ ನಮ್ಮ ಕ್ಯಾಪ್ಟನ್ ರೇವಣ್ಣನವರು. ನಾನು ತಂಡದ ಸದಸ್ಯನಾಗಿ ಕೆಲಸ ಮಾಡುತ್ತೆನೆಂಬ ಶಾಸಕ ಪ್ರೀತಮ್ ಜೆ. ಗೌಡ ಮಾತಿಗೆ, ಕ್ಯಾಪ್ಟನ್ ಎಂದು ನನ್ನನ್ನು ಕರೆದಿರುವುದು ವ್ಯಂಗ್ಯವಾಗಿಯೂ ಏನು ನನಗೆ ಗೊತ್ತಿಲ್ಲ. ಇವೆಲ್ಲ ನನಗೆ ಮುಖ್ಯವಲ್ಲ. ಬಡ ರೈತರ ಬೆಳೆ ನಾಶವಾಗಿದ್ದು, ಬೆಲೆಯಿಲ್ಲದೆ ಹಳ್ಳಿಗಳಲ್ಲಿ ರೈತರು ಬೆಳೆದ ತರಕಾರಿಗಳನ್ನು ಎಸೆಯುತ್ತಿದ್ದಾರೆ. ಸರಕಾರ ಪ್ರತಿ ಎಕರೆಗೆ ಪರಿಹಾರವಾಗಿ 2 ಸಾವಿರ ರೂ. ಕೊಟ್ಟರೆ ಏನು ಪ್ರಯೋಜನಕ್ಕೆ ಬರುವುದಿಲ್ಲ. ಎಕರೆಗೆ ಕನಿಷ್ಟ 10 ಸಾವಿರ ರೂ. ಕೊಡಬೇಕು ಎಂದರು.

ABOUT THE AUTHOR

...view details