ಹಾಸನ: ನಗರದ ಸಬ್ ರಿಜಿಸ್ಟ್ರಾರ್ ಕಚೇರಿಗೆ ದಿಢೀರ್ ಭೇಟಿ ನೀಡಿದ್ದ ಮಾಜಿ ಸಚಿವ ಹೆಚ್.ಡಿ. ರೇವಣ್ಣ ಅವರು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಹಣದ ದಂಧೆ ನಡೆಯುತ್ತಿರುವ ಬಗ್ಗೆ ಹಲವು ದಿನಗಳಿಂದ ಆರೋಪ ಮಾಡುತ್ತಿರುವ ಮಾಜಿ ಸಚಿವರು ಈ ರೀತಿ ಬಡವರನ್ನು ಸುಲಿದು ತಿನ್ನುವ ದಂಧೆ ಮಾಡಬಾರದು. ಎಲ್ಲವನ್ನೂ ಕಾನೂನು ರೀತಿ ಮಾಡಬೇಕು. ಅಧಿಕಾರಿಗಳು ಬಿಟ್ಟು ಬೇರೆ ಏಜೆಂಟ್ ಇರಬಾರದು ಎಂದು ಎಚ್ಚರಿಕೆ ನೀಡಿದ್ರು.
ಅಧಿಕಾರಿಗಳ ವಿರುದ್ಧ ರೇವಣ್ಣ ಕಿಡಿ ಇನ್ಮುಂದೆ ನಾನು ಬಂದಾಗ ಏಜೆಂಟ್‌ಗಳು ಇದ್ದರೆ ಜನರಿಂದ ಅಟ್ಟಾಡಿಸಿಕೊಂಡು ಹೊಡಿಸುತ್ತೇನೆ. ಆಗ ಯಾರು ನನ್ನ ಮೇಲೆ ಎಫ್ಐಆರ್ ಹಾಕಿಸುತ್ತಾರೋ ಹಾಕಿಸಲಿ. ನಾನು ಏನು ಕೇರ್ ಮಾಡುವುದಿಲ್ಲ ಎಂದು ಖಡಕ್ ವಾರ್ನಿಂಗ್ ನೀಡಿದ್ದಾರೆ.
ಅಧಿಕಾರಿಗಳ ವಿರುದ್ಧ ಕಿಡಿಕಾರಿದ ರೇವಣ್ಣ ಹತ್ತು ಲಕ್ಷಕ್ಕೆ, ಹತ್ತು ಸಾವಿರ. 20 ಲಕ್ಷಕ್ಕೆ 20 ಸಾವಿರ ಹಣ ಪಡೆಯುತ್ತಿದ್ದೀರಿ. ಯಾರಿಗೆ ಕೊಡಲು ಈ ಹಣ ಪಡೆಯುತ್ತಿದ್ದಿರಿ. ಎಂಎಲ್‌ಎಗೆ ಕೊಡೋದಕ್ಕಾ ಎಂದು ಪ್ರಶ್ನಿಸಿದರು. ಈ ಕಚೇರಿ ವ್ಯಾಪ್ತಿಗೆ ನನ್ನ ವಿಧಾನಸಭಾ ಕ್ಷೇತ್ರದ ಎರಡು ಹೋಬಳಿ ಬರುತ್ತವೆ. ಅವರಿಗೆ ಯಾಕೆ ನೀವು ಕೆಲಸ ಮಾಡಿ ಕೊಡುತ್ತಿಲ್ಲ ಎಂದು ಅಧಿಕಾರಿಗಳ ರೇವಣ್ಣ ಗರಂ ಆದ್ರು.
ಸರ್ಕಾರಕ್ಕೆ ಹಣ ಕೊಡಲು ವಸೂಲಿ ಮಾಡುತ್ತ ಕುಳಿತರೆ ಏನು ಮಾಡೋಣ. ನಿಮ್ಮ ಡ್ರಾಯರ್ ಎಲ್ಲ ತೆಗೆಯಿರಿ, ಎಷ್ಟು ಹಣ ಇದೆ ನೋಡೋಣ. ದಿನ ಬೆಳಗ್ಗೆ ವ್ಯಾಪಾರ ಮಾಡುತ್ತಿದ್ದಿರಾ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗದುಕೊಂಡರು.