ಹಾಸನ:ಹೊಳೆನರಸೀಪುರ ಕ್ಷೇತ್ರವನ್ನೆ ಟಾರ್ಗೆಟ್ ಮಾಡಿ ಅಭಿವೃದ್ಧಿ ಕೆಲಸಗಳು ಏಕೆ ವಿಳಂಬವಾಗುತ್ತಿದೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಆರೋಪಿಸಿ ಜಿಲ್ಲಾಧಿಕಾರಿ ಆರ್. ಗಿರೀಶ್‌ರವರಿಗೆ ಪ್ರಶ್ನೆ ಮಾಡಿರುವ ಘಟನೆ ನಡೆದಿದೆ.
ಅಭಿವೃದ್ಧಿ ಕೆಲಸಗಳಲ್ಲಿ ವಿಳಂಬ: ಹಾಸನ ಡಿಸಿ ವಿರುದ್ದ ರೇವಣ್ಣ ಅಸಮಾಧಾನ - ಮಾಜಿ ಸಚಿವ ಹೆಚ್.ಡಿ. ರೇವಣ್ಣ ಆರೋಪಿಸಿ ಜಿಲ್ಲಾಧಿಕಾರಿ ಆರ್. ಗಿರೀಶ್‌ರವರಿಗೆ ಪ್ರಶ್ನೆ
ಹೊಳೆನರಸೀಪುರ ಕ್ಷೇತ್ರವನ್ನೇ ಟಾರ್ಗೆಟ್ ಮಾಡಿ ಅಭಿವೃದ್ಧಿ ಕೆಲಸಗಳು ಏಕೆ ವಿಳಂಬವಾಗುತ್ತಿದೆ ಎಂದು ಮಾಜಿ ಸಚಿವ ಹೆಚ್.ಡಿ. ರೇವಣ್ಣ ಆರೋಪಿಸಿ ಜಿಲ್ಲಾಧಿಕಾರಿ ಆರ್. ಗಿರೀಶ್‌ರವರಿಗೆ ಪ್ರಶ್ನೆ ಮಾಡಿರುವ ಘಟನೆ ನಡೆದಿದೆ.
ಅಭಿವೃದ್ದಿ ಕೆಲಸಗಳಲ್ಲಿ ವಿಳಂಬ: ಹಾಸನ ಡಿಸಿ ವಿರುದ್ದ ಅಸಮಧಾನ ಹೊರ ಹಾಕಿದ ಹೆಚ್.ಡಿ. ರೇವಣ್ಣ
ಹೊಳೆನರಸೀಪುರದ 12 ಪುರಸಭೆ ಸದಸ್ಯರು ಕೂಡ ಸ್ಥಳದಲ್ಲಿದ್ದು, ನಾನು ಪೌರಕಾರ್ಮಿಕರ ಕೆಲಸಕ್ಕೆ ಬಂದಿರುವುದು, ದೊಡ್ಡವರ ಕೆಲಸಕ್ಕೆ ಬಂದಿಲ್ಲ ಸ್ವಾಮಿ ಎಂದರು. ಅದೇನು ಒಳಗೆ ಕುಳಿತು ಚರ್ಚೆ ಮಾಡುವ ಬನ್ನಿ ಸಾರ್ ಎಂದು ಡಿಸಿ ಕರೆದರೂ ಒಳಗೆ ಹೋಗದ ರೇವಣ್ಣ, ಹೊರಗೆ ನಿಂತು ಕಿಡಿಕಾರಿದರು. ನನ್ನ ಕ್ಷೇತ್ರವನ್ನು ಟಾರ್ಗೆಟ್ ಮಾಡಲಾಗುತ್ತಿದೆ ಎಂದು ದೂರಿದರು. ಈಗಾಗಲೇ ಸ್ಲಂ ಜಾಗ ಎಂದು ಡಿಕ್ಲೇರ್ ಮಾಡಿದ್ದಾರೆ ಎಂದು ಜಿಲ್ಲಾಧಿಕಾರಿಗಳ ವಿರುದ್ದ ಅಸಮಾಧಾನ ಹೊರಹಾಕಿದರು.