ಹಾಸನ:ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು ಜಮೀರ್, ಗುಬ್ಬಿ ಶ್ರೀನಿವಾಸ್ ಹಾಗೂ ವಿಶ್ವನಾಥ್ ವಿರುದ್ಧ ಹಾಸನದಲ್ಲಿ ವಾಗ್ದಾಳಿ ನಡೆಸಿದರು.
ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಸನ ಮತ್ತು ಮಂಡ್ಯ ಗಡಿಭಾಗದ ಹಿರೀಸಾವೆಯಲ್ಲಿ ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಏನ್ ಬಿಚ್ಚಿದುತ್ತಾರೋ ಬಿಚ್ಚಿಡಲಿ, ಅವರ ಬಗ್ಗೆ ಚರ್ಚೆ ಮಾಡುವುದು ಅನಾವಶ್ಯಕ. ಕೆಸರ ಮೇಲೆ ಕಲ್ಲು ಎಸೆದರೆ ನಮ್ಮ ಮುಖವೇ ಗಲಿಜಾಗುತ್ತದೆ. ಆವೇಶದಿಂದ ಮಾತನಾಡುವುದು ಆತನ ಹುಟ್ಟು ಗುಣ. ನಾವೇನು ಮಾಡಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದರು.
ಅವರು ನಮ್ಮ ಪಕ್ಷದ ಚಟುವಟಿಕೆಯಲ್ಲೇ ಇಲ್ಲ
ಇನ್ನು ಗುಬ್ಬಿಯಲ್ಲಿ ಪರ್ಯಾಯ ನಾಯಕನ ಸಮಾವೇಶ ವಿಚಾರವಾಗಿ ಪ್ರತಿಕ್ರಿಯಿಸಿ, ಗುಬ್ಬಿ ವಿಧಾನಸಭಾ ಕ್ಷೇತ್ರ ಒಂದೇ ಅಲ್ಲ, ರಾಜ್ಯದಲ್ಲಿ ಮುಂದಿನ 2023 ಕ್ಕೆ ಸ್ವತಂತ್ರವಾದ ರೈತ ಪರವಾದ ಸರ್ಕಾರ ತರಬೇಕಿದೆ. ಅದಕ್ಕಾಗಿ ಹೋರಾಟ ಮಾಡುತ್ತಿದ್ದೇವೆ ಎಂದರು.
ಜೆಡಿಎಸ್‌ಗೆ ಜನ ಬುದ್ಧಿ ಕಲಿಸ್ತಾರೆ ಎಂಬ ಶಾಸಕ ಗುಬ್ಬಿ ಶ್ರೀನಿವಾಸ್ ಹೇಳಿಕೆಗೆ ಬಗ್ಗೆ ಮಾತನಾಡಿ, ಶ್ರೀನಿವಾಸ್ ನಮ್ಮ ಪಕ್ಷದಲ್ಲಿ ಕಳೆದ ಮೂರು ವರ್ಷದಿಂದ ಯಾವುದೇ ಚಟುವಟಕೆಯಲ್ಲಿಲ್ಲ. ವೈಯಕ್ತಿಕ ರೀತಿಯಲ್ಲಿ ಅವರು ಕೆಲಸ ಮಾಡಿಕೊಂಡು ಹೋಗುತ್ತಿದ್ದಾರೆ. ಬಹಳ ಜನ ಬುದ್ಧ ಕಲಿಸಿ, ಬಹಳ ಜನ ಮನೆಗೂ ಹೋಗಿದ್ದಾರೆ ಎಂದು ವ್ಯಂಗ್ಯ ಮಾಡಿದರು.
ನಮ್ಮ ಪಕ್ಷದ ಎಂಎಲ್ಎ ಅರೆಸ್ಟ್ ಮಾಡಿದ್ದಾರೆ
ಬೆಂಗಳೂರಿನ ಶಿವರಾಮ ಕಾರಂತ ಬಡಾವಣೆಯ ಕಟ್ಟಡ ಹೊಡೆಯುವ ವಿಚಾರವಾಗಿ ಪ್ರತಿಕ್ರಿಯಿಸಿ, ಬಡಾವಣೆಯ ಮನೆಗಳ ವಿಚಾರವಾಗಿ ನಾನು ಸಿಎಂ ಬಳಿ ಎರಡ್ಮೂರು ಸಲ ಮಾತನಾಡಿದ್ದೆ. ಅಲ್ಲಿನ ನಿವಾಸಿಗಳನ್ನು ಕರೆದು ಸಭೆ ಮಾಡಿ ಆಗ ನಾನು ಬರುತ್ತೇನೆ ಎಂದು ಹೇಳಿದ್ದೆ. ಆದರೆ, ಸಮಯ ಕೊಡದೆ ಇಂದು ಏಕಾಏಕಿ ಮನೆಗಳನ್ನು ಹೊಡೆಯಲು ಶುರು ಮಾಡಿದ್ದಾರೆ. ಅದನ್ನು ನಿಲ್ಲಿಸಲು ಹೋದಾಗ ನಮ್ಮ ಪಕ್ಷದ ಶಾಸಕ ಮಂಜುನಾಥ್ ಅವರನ್ನು ಅರೆಸ್ಟ್ ಮಾಡಿರುವುದು ಗಮನಕ್ಕೆ ಬಂದಿದೆ ಎಂದರು.
ಜನರು ಲಕ್ಷಾಂತರ, ಕೋಟ್ಯಂತರ ಹಣ ವ್ಯಯ ಮಾಡಿ ಮನೆ ಕಟ್ಟಿರುತ್ತಾರೆ. ಬಡಾವಣೆಯನ್ನು ನಿರ್ಮಾಣ ಮಾಡಬೇಕಾದರೆ ಪ್ರಾಥಮಿಕ ಭೂ-ಸ್ವಾಧೀನ ಕಾರ್ಯಕ್ರಮ ಪ್ರಾರಂಭ ಮಾಡ್ತಾರೆ. ನೋಟಿಫಿಕೇಷನ್ ಆದ್ಮೇಲೆ ಮತ್ತೆ ಡಿನೋಟಿಫಿಕೇಷನ್ ಮಾಡಿದ್ದಾರೆ. ಮತ್ತೆ ಇವರೆ ಎನ್ಓಸಿಗಳನ್ನು ಕೊಟ್ಟು ದುಡ್ಡು ಹೊಡೆಯುವ ಕೆಲಸ ಮಾಡಿಕೊಂಡು ಬಂದಿದ್ದಾರೆ. ಸರ್ಕಾರದ ಮುಖ್ಯಮಂತ್ರಿಗಳ ಡೈರೆಕ್ಷನ್ ಮೇಲೆ ಬಿಡಿಎನಲ್ಲಿರುವ ಅಧಿಕಾರಿಗಳು ಕಮಿಷನರ್ಗಳು ಮಾಡಿಕೊಂಡು ಬರ್ತಿದ್ದಾರೆ ಎಂದರು.
ಸಿಎಂಗೆ ಜವಾಬ್ದಾರಿ ಇದೆಯಾ?
ಈ ಮುಖ್ಯಮಂತ್ರಿ ಈ ಸರ್ಕಾರಕ್ಕೆ ಏನಾದರೂ ಜವಾಬ್ದಾರಿ ಇದಿಯಾ, ಇದೆ ವಿಶ್ವನಾಥ್ ಹಿಂದೆ ಜನರ ಪರವಾಗಿ ಮಾತಾನಾಡಿದ್ದರು. ನಾನು 14 ತಿಂಗಳ ಅಧಿಕಾರವಧಿಯಲ್ಲಿ ಮನೆ ಹೊಡೆಯುವುದಕ್ಕೆ ಅವಕಾಶ ಕೊಟ್ಟಿರಲಿಲ್ಲ. ವಿಶ್ವನಾಥ್ ಅವರು ಅವತ್ತು ಏನ್ ಮಾತನಾಡಿದ್ದಾರೆ. ಇವತ್ತು ಬಿಡಿಎ ಚೇರ್ಮನ್ ಆಗಿ ಮಾಡಬಾರದ ಇಂತಹ ಕೆಲಸ ಮಾಡಿ, ಜನರನ್ನು ಬೀದಿಗೆ ಹಾಕ್ತಿದ್ದಾರೆ.
ಒಂದ್ಕಡೆ ಇವರೇ ದುಡ್ಡು ಹೊಡೆಯೋದು, ಮತ್ತೆ ಕೆಲವರು ಇವರೇ ಕಟ್ಟಡ ಹೊಡೆಸೋದು ಸರ್ಕಾರಕ್ಕೆ ಹಾಗೂ ಮುಖ್ಯಮಂತ್ರಿಗೆ ಮರ್ಯಾದೆ ಇದ್ದರೆ ಅಮಾಯಕರ ಜೀವದ ಜೊತೆ ಚೆಲ್ಲಾಟವಾಡಬೇಡಿ. ಕೂತು ಚರ್ಚೆ ಮಾಡಿ ಕಾನೂನು ರೀತಿಯಲ್ಲಿ ರಕ್ಷಣೆ ಕೊಡಬೇಕು ಎಂದು ವಿಶ್ವನಾಥ್, ಜಮೀರ್ ಮತ್ತು ಗುಬ್ಬಿ ಶ್ರೀನಿವಾಸ್ ಮೇಲೆ ವಾಗ್ದಾಳಿ ನಡೆಸಿದರು.
ಇದನ್ನೂ ಓದಿ: ಕೆಸರಿನ ಮೇಲೆ ಕಲ್ಲೆಸೆದರೆ ನಮ್ಮ ಮುಖವೇ ಗಲೀಜಾಗುತ್ತದೆ: ಹೆಚ್ಡಿಕೆ