ಅರಸೀಕೆರೆ: "ವಿಧಾನಸೌಧದಲ್ಲಿ ಅಬ್ಬರಿಸ್ತಾರೆ ಅಂತ ನಮ್ಮ ಮುಂದೆ ಅಬ್ಬರಿಸೋದಕ್ಕೆ ಆಗಲ್ಲ. ಜೆಡಿಎಸ್ ಬಿಟ್ಟು ಹೋಗೋ ಟೈಮಲ್ಲಿ ಕುಟುಂಬ ರಾಜಕಾರಣ ಅಂತ ಹೇಳ್ತಾರಲ್ಲಾ, ಇಷ್ಟು ದಿನ ಕುಟುಂಬ ರಾಜಕಾರಣ ಅಂತ ಗೊತ್ತಿರ್ಲಿಲ್ವಾ?" ಎಂದು ಹಾಲಿ ಶಾಸಕ ಕೆ.ಎಂ.ಶಿವಲಿಂಗೇಗೌಡರ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.
ಹಾಸನದ ಅರಸೀಕೆರೆ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಮಾತನಾಡಿದ ಅವರು, "ಜೆಡಿಎಸ್ ಪುರಾಣ ಬಿಚ್ಚಿಡ್ತೀನಿ ಅಂತಾರಲ್ಲ, ಏನಿದೆಯೋ ಬಿಚ್ಚಿಡ್ಲಿ. ಇವರ ಮಾತಿಗೆ ನಾವೇನ್ ಹೆದ್ರುಕೊಳಲ್ಲ. ವಿಧಾನಸೌಧದಲ್ಲಿ ಮಾತಾಡ್ತಾರೆ ಎಂದು ಅವರಿಗೆ ಯಾರೋ ಹೆದ್ರುಕೊಂಡ್ರೆ ನಾವ್ಯಾರೂ ಹೆದ್ರುಕೊಳಲ್ಲ. ನಾವೇನ್ ತಪ್ ಮಾಡಿದ್ದೇವೆ?, ಜೆಡಿಎಸ್ ಕಾರ್ಯಕ್ರಮಕ್ಕೆ ನಾವು ಬರಬೇಡಿ ಅಂತ ಹೇಳಿದ್ವಾ? ಅವರನ್ನು ಬೆಳೆಸಬೇಕಾದರೆ ಜೆಡಿಎಸ್ ಬೇಕು, ಅವಾಗ ಕುಟುಂಬ ರಾಜಕಾರಣ ಕಾಣಲಿಲ್ಲ. ಅವರ ಬೆಳವಣಿಗೆಯಾದಾಗ ಕುಟುಂಬ ರಾಜಕಾರಣ ಕಾಣಲಿಲ್ಲ. ಜೆಡಿಎಸ್ ಬಿಟ್ಟು ಹೊರಗೆ ಹೋಗಬೇಕಾದರೆ ಕುಟುಂಬ ರಾಜಕಾರಣ ಕಾಣಿಸ್ತಿದೆಯೇ?’" ಎಂದರು.
"ಪಕ್ಷದಲ್ಲಿಯೇ ಇದ್ದಾಗ ಕುಟುಂಬ ರಾಜಕಾರಣ ಎಂದು ಹೇಳಿದರೆ ಒಪ್ಪಿಕೊಳ್ಳಬಹುದಾಗಿತ್ತು. ಈಗ ಕುಟುಂಬ ರಾಜಕಾರಣದ ಬಗ್ಗೆ ಚರ್ಚೆ ಮಾಡಬೇಕಾದರೆ, ಅವತ್ತು ಯಾಕೆ ಸುಮ್ನಿದ್ರು? ಅವತ್ತು ಈ ಕುಟುಂಬ ರಾಜಕಾರಣದ ಕೈಯಿಂದಲೇ ಕೆಲಸ ಮಾಡಿಸಿಕೊಂಡರಲ್ಲ? ಈಗ ಅದು ನಿಮಗೆ ನೋವು ಎಂದು ಕಾಣಿಸ್ತಿದೆಯಾ" ಎಂದು ಪ್ರಶ್ನಿಸಿದರು.