ಹಾಸನ: ಬೆಂಗಳೂರಿನ ಡಿ.ಜೆ.ಹಳ್ಳಿ ಮತ್ತು ಕೆ.ಜಿ.ಹಳ್ಳಿಗೆ ಸಂಬಂಧಿಸಿದ ಪ್ರಕರಣದಲ್ಲಿ ತಪ್ಪಿತಸ್ಥರು ಯಾರೇ ಇರಲಿ ಅವರನ್ನು ಯಾವ ಮುಲಾಜಿಲ್ಲದೇ ಬಂಧಿಸಬೇಕು ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ತಿಳಿಸಿದರು.
ಸುದ್ದಿಗಾರರೊಂದದಿಗೆ ಮಾತನಾಡಿದ ಅವರು, ಈಗಾಗಲೇ 280 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಕೆಲವರನ್ನು ಊಹಾಪೋಹದ ಮೇಲೆ ಬಂಧಿಸಿರಬಹುದು, ಎಲ್ಲರನ್ನೂ ಅಪರಾಧಿಗಳು ಎಂದು ಹೇಳಲಾಗಲ್ಲ. ಸುಳ್ಳು ವದಂತಿಗಳ ಮೇಲೆ ನಿರಪರಾಧಿಗಳಿಗೆ ಶಿಕ್ಷೆ ಆಗಬಾರದು. ಅದು ಹಿಂದೂ ಆಗಿರಲಿ ಅಥವಾ ಯಾರೇ ಆಗಿರಲಿ ಇದು ನನ್ನ ಮನವಿ ಎಂದರು.
ಇದೊಂದು ದೊಡ್ಡ ವಿಚಾರ, ಈ ಬಗ್ಗೆ ಸೂಕ್ತ ತನಿಖೆ ಆಗಬೇಕಿದೆ. ಮನೆಗೆ ಬೆಂಕಿ ಹಚ್ಚಿದ್ದಾರೆ, ಲೂಟಿ ಮಾಡಿದ್ದಾರೆ. ಬಿಜೆಪಿ ಬಂದಾಗಿನಿಂದಲೂ ಮುಸ್ಲಿಂರನ್ನ ಐದನೇ ದರ್ಜೆ ನಾಗರಿಕರಂತೆ ನಡೆಸಿಕೊಂಡಿದೆ ಎಂದರು. ಅಲ್ಲದೆ ಗಲಭೆಯನ್ನು ಹಾಲಿ ಹೈಕೋರ್ಟ್ ನ್ಯಾಯಾಧೀಶರು ಅಥವಾ ಸಿಸಿಬಿಯಿಂದ ತನಿಖೆ ಮಾಡುವಂತೆ ಆಗ್ರಹಿಸಿದರು.