ಹಾಸನ :ದಲಿತ ಮಹಿಳೆ ಎಂಬ ಪದ ಪ್ರಯೋಗಿಸಿದ್ದಕ್ಕಾಗಿ ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್ ವಿರುದ್ಧ ಜೆಡಿಎಸ್ ಸದಸ್ಯರು ಆಕ್ಷೇಪಿಸಿ ಸಾಮಾನ್ಯ ಸಭೆಯಲ್ಲಿ ವಾಗ್ವಾದಕ್ಕಿಳಿದರು.
ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ.. ಜೆಡಿಎಸ್- ಕಾಂಗ್ರೆಸ್ ಸದಸ್ಯರ ನಡುವೆ ವಾಗ್ವಾದ - ಜಿಲ್ಲಾ ಪಂಚಾಯತ್ ಸಾಮಾನ್ಯ ಸಭೆ
ಅನುದಾನ ಹಂಚಿಕೆ, ಅಧಿಕಾರ ದುರುಪಯೋಗ ಸೇರಿ ಇನ್ನಿತರ ವಿಷಯಗಳ ಸಂಬಂಧ ಎರಡೂ ಪಕ್ಷಗಳ ನಡುವೆ ಒಂದು ಗಂಟೆಗೂ ಹೆಚ್ಚು ಕಾಲ ಪರಸ್ಪರ ಆರೋಪ-ಪ್ರತ್ಯಾರೋಪ ನಡೆಯಿತು. ಇತ್ತ ತಾರಕಕ್ಕೇರಿದ ಜೆಡಿಎಸ್-ಕಾಂಗ್ರೆಸ್ ಸದಸ್ಯರ ನಡುವೆ ಜಟಾಪಟಿ ನಡೆಯುತ್ತಿದ್ರೆ, ಮಾಜಿ ಸಚಿವ ಹೆಚ್ ಡಿ ರೇವಣ್ಣ ಮೌನವಾಗಿದ್ದರು.
ಜಿಲ್ಲಾ ಪಂಚಾಯತ್ ಹೊಯ್ಸಳ ಸಭಾಂಗಣದಲ್ಲಿ ಶನಿವಾರ ನಡೆದ ಸಾಮಾನ್ಯ ಸಭೆಯಲ್ಲಿ ನಾನೂ ದಲಿತನೇ ಆಗಿದ್ದೇನೆ.. ನೀವು ಏಕೆ ದಲಿತರು ಎಂಬ ಪದ ಬಳಸುತ್ತಿದ್ದೀರಿ ಎಂದು ಲೋಕೇಶ್ ಅವರು ಜಿಪಂ ಅಧ್ಯಕ್ಷೆ ಶ್ವೇತಾ ಅವರನ್ನು ತರಾಟೆ ತೆಗೆದುಕೊಂಡರು. ಪರಸ್ಪರ ವಾಗ್ವಾದದಿಂದಾಗಿ ಇಡೀ ಸಭೆ ಗೊಂದಲಕ್ಕೀಡಾದಾಗ ಮದ್ಯೆ ಪ್ರವೇಶಿಸಿದ ಅರಸೀಕೆರೆ ಶಾಸಕ ಕೆ ಎಂ ಶಿವಲಿಂಗೇಗೌಡ ಅವರು, ಜೆಡಿಎಸ್ ಸದಸ್ಯರಿಗೆ ಬುದ್ಧಿ ಹೇಳಿ ಗಲಾಟೆ ತಿಳಿಗೊಳಿಸಲು ಮುಂದಾದರು.
ಅನುದಾನ ಹಂಚಿಕೆ, ಅಧಿಕಾರ ದುರುಪಯೋಗ ಸೇರಿ ಇನ್ನಿತರ ವಿಷಯಗಳ ಸಂಬಂಧ ಎರಡೂ ಪಕ್ಷಗಳ ನಡುವೆ ಒಂದು ಗಂಟೆಗೂ ಹೆಚ್ಚು ಕಾಲ ಪರಸ್ಪರ ಆರೋಪ-ಪ್ರತ್ಯಾರೋಪ ನಡೆಯಿತು. ಇತ್ತ ತಾರಕಕ್ಕೇರಿದ ಜೆಡಿಎಸ್-ಕಾಂಗ್ರೆಸ್ ಸದಸ್ಯರ ನಡುವೆ ಜಟಾಪಟಿ ನಡೆಯುತ್ತಿದ್ರೆ, ಮಾಜಿ ಸಚಿವ ಹೆಚ್ ಡಿ ರೇವಣ್ಣ ಮೌನವಾಗಿದ್ದರು. ಈ ಸಂದರ್ಭದಲ್ಲಿ ಜಿಪಂ ಅಧ್ಯಕ್ಷೆ ಶ್ವೇತಾ ದೇವರಾಜ್ ಸಹ ಮೌನ ತಾಳಿದರು. 112 ಕೋಟಿ ರೂ. ಎಲ್ಲಿಗೆ ಬಂದಿದೆ? ಯಾವಾಗ ಅನುದಾನ ಬಂದಿದೆ ತೋರಿಸಿ. ಆ ಹಣ ಏಕೆ ಸರ್ಕಾರಕ್ಕೆ ವಾಪಸ್ ಹೋಗುತ್ತಿದೆ ತಿಳಿಸಿ ಎಂದು ಸದಸ್ಯರು ಸವಾಲು ಹಾಕಿದರು. ಜಿಲ್ಲಾ ಪಂಚಾಯತ್ ಸಭೆಯಲ್ಲಿ ಆರೋಗ್ಯಕರ ಚರ್ಚೆ ಬದಲು ಕೇವಲ ಪ್ರತಿಷ್ಠೆಗೆ ವೇದಿಕೆಯಾಗಿ ಮಾರ್ಪಟ್ಟಿತು.