ಹಾಸನ:ಆಗಸ್ಟ್ 31ರಂದು ಆರಂಭವಾದ ಪುಬ್ಬ ಮಳೆ ಹಾಸನದಲ್ಲಿ ಎರಡು ದಿನಗಳಿಂದ ಭರ್ಜರಿಯಾಗಿ ಸುರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಹಾಸನದಲ್ಲಿ ಭಾರೀ ಮಳೆ: ಜನಜೀವನ ಅಸ್ತವ್ಯಸ್ತ
ಆಗಸ್ಟ್ 31ರಂದು ಆರಂಭವಾದ ಪುಬ್ಬ ಮಳೆ ಹಾಸನದಲ್ಲಿ ಎರಡು ದಿನಗಳಿಂದ ಭರ್ಜರಿಯಾಗಿ ಸುರಿದಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಸೆಪ್ಟಂಬರ್ 1ರ ಸಂಜೆ 6 ಗಂಟೆಯಿಂದ ಪ್ರಾರಂಭವಾದ ಮಳೆ ಮಧ್ಯರಾತ್ರಿ 2 ಗಂಟೆಯ ತನಕ ಸರಿದಿದೆ. ಈಗಾಗಲೇ ಜಿಲ್ಲೆಯ ಜೀವನದಿ ತುಂಬಿ ಹರಿದಿದ್ದು, ಹೆಚ್ಚುವರಿ ನೀರನ್ನು ತುಮಕೂರು ಮತ್ತು ಮಂಡ್ಯ ಜಿಲ್ಲೆಗಳಿಗೆ ಬಿಡಲಾಗುತ್ತಿದೆ. ವಾರದಿಂದ ಬಿಡುವು ಕೊಟ್ಟಿದ್ದ ಮಳೆ ಬಳಿಕ ಆ. 31ರಿಂದ ಪ್ರಾರಂಭವಾದ ಹೊಸ ಮಳೆ ಪುಬ್ಬ ಎರಡು ದಿನಗಳಿಂದ ಸುರಿಯುತ್ತಿರುವುದರಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ಮೂರು ವರ್ಷಗಳಿಂದ ಸತತವಾಗಿ ಸಮಯಕ್ಕೆ ಸರಿಯಾಗಿ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ರೈತರು ಖುಷಿಯಾಗಿದ್ದಾರೆ. ಕೆರೆ-ಕಟ್ಟೆಗಳು ಕೂಡ ತುಂಬಿ ಹರಿಯುತ್ತಿವೆ. ಕಳೆದ ಎರಡು ವರ್ಷ ಸುರಿದ ಭಾರೀ ಮಳೆಯಿಂದ ಜಿಲ್ಲೆಯಲ್ಲಿ ಸಾಕಷ್ಟು ಹಾನಿಯಾಗಿತ್ತು. ಆದರೆ ಈ ಬಾರಿ ಅಂತಹ ಹೆಚ್ಚು ಹಾನಿ ಆಗದಿದ್ದರೂ ಮಲೆನಾಡು ಭಾಗದಲ್ಲಿ ಮಾತ್ರ ಸ್ವಲ್ಪ ಪ್ರಮಾಣದ ಹಾನಿ ಉಂಟಾಗಿದೆ.