ಹಾಸನ: ಕಿಡಿಗೇಡಿಗಳ ಕೃತ್ಯದಿಂದ ಫಸಲು ಬಿಡಲು ಮುಂದಾಗಿದ್ದ ತೆಂಗಿನಮರಗಳು ಬೆಂಕಿಗಾಹುತಿಯಾದ ಘಟನೆ ಜಿಲ್ಲೆಯ ಅರಸೀಕೆರೆ ತಾಲೂಕಿನಲ್ಲಿ ನಡೆದಿದೆ.
ಹಾಸನ: ಕಿಡಿಗೇಡಿಗಳ ಕೃತ್ಯಕ್ಕೆ ತೆಂಗಿನ ಮರಗಳು ನಾಶ - ತೊಂಡೇನಾಳು ಗ್ರಾಮದ ಪಾಪಣ್ಣ
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ತೊಂಡೇನಾಳು ಗ್ರಾಮದ ಪಾಪಣ್ಣ ಎಂಬುವರ ತೋಟದಲ್ಲಿದ್ದ ಮೂರು ವರ್ಷದ ತೆಂಗಿನಮರಗಳು ಬೆಂಗಿಗಾಹುತಿಯಾಗಿವೆ.

ತಾಲೂಕಿನ ತೊಂಡೇನಾಳು ಗ್ರಾಮದ ಪಾಪಣ್ಣ ಎಂಬುವರ ತೋಟದಲ್ಲಿದ್ದ 3 ವರ್ಷದ ತೆಂಗಿನ ಮರಗಳು, ಮಾವಿನ ಗಿಡಗಳು, ಸಪೋಟಾ, ದಾಳಿಂಬೆ ಗಿಡಗಳು ಬೆಂಕಿಗಾಹುತಿಯಾಗಿದ್ದು, ಅಪಾರ ಪ್ರಮಾಣದ ನಷ್ಟ ಸಂಭವಿಸಿದೆ.
ಗ್ರಾಮಸ್ಥರು ಮತ್ತು ಅಗ್ನಿಶಾಮಕದಳದ ಸಿಬ್ಬಂದಿ ಸಹಾಯದಿಂದ ಬೆಂಕಿ ನಂದಿಸುವ ಕಾರ್ಯ ಮಾಡಿದ್ರೂ ಪ್ರಯೋಜನವಾಗಿಲ್ಲ. ಬೆಂಕಿನ ರುದ್ರನರ್ತನಕ್ಕೆ ಫಸಲೆಲ್ಲಾ ನಾಶವಾಗಿತ್ತು. ದಿನದಿಂದ ದಿನಕ್ಕೆ ಬಿಸಿಲಿನ ತಾಪ ಹೆಚ್ಚಾಗುತ್ತಿದ್ದು, ಈಗಾಗಲೇ ಜಿಲ್ಲೆಯಲ್ಲಿ 35ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಆದ್ರೆ ಈ ಪ್ರಕರಣ ಮಾತ್ರ ಕಿಡಿಗೇಡಿಗಳ ಕೃತ್ಯ ಎನ್ನುವುದು ಮಾಲೀಕರ ಆರೋಪ. ಬಹುಶಃ ತೋಟದ ಸಮೀಪ ಸ್ಥಳೀಯರೇ ಬೀಡಿ, ಸಿಗರೇಟು ಸೇದು ಎಸೆದ ಕಿಡಿಯಿಂದ ಇಂತಹ ಅವಘಡ ಸಂಭವಿಸಿರಬಹುದು ಎಂಬುದು ಸ್ಥಳೀಯರ ಆರೋಪ. ಈ ಸಂಬಂಧ ಅರಸೀಕೆರೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.