ಹಾಸನ: ಲಾಕ್‌ಡೌನ್ ಸಡಿಲಗೊಳಿಸಿ ರಾಜ್ಯ ಸರ್ಕಾರ ಮದ್ಯ ಮಾರಾಟಕ್ಕೆ ಅನುವು ಮಾಡಿಕೊಟ್ಟ ಬೆನ್ನಲ್ಲೇ ಸೋಮವಾರ ಒಂದೇ ದಿನ ಜಿಲ್ಲೆಯಲ್ಲಿ ದಾಖಲೆಯ ಮದ್ಯ ಮಾರಾಟವಾಗಿದೆ. ಜಿಲ್ಲೆಯ ವೈನ್ ಶಾಪ್ಗಳು ಹಾಗೂ ಎಂಎಸ್‌ಐಎಲ್ ಮಳಿಗೆಗಳಿಂದ 1,27,143 ಲೀಟರ್ ಮದ್ಯ ಹಾಗೂ 29,188 ಲೀಟರ್ ಬಿಯರ್ ಬಿಕರಿಯಾಗಿದ್ದು, 1.5 ಕೋಟಿ ಆದಾಯ ಸಂಗ್ರಹವಾಗಿದೆ.
ಜಿಲ್ಲಾ ವ್ಯಾಪ್ತಿಯಲ್ಲಿ 125 ವೈನ್ ಶಾಪ್ (ಸಿಎಲ್-2) ಹಾಗೂ 33 ಎಂಎಸ್‌ಐಎಲ್ (ಸಿಎಲ್- ಸಿ)ಗಳಲ್ಲಿ ಮದ್ಯ ಮಾರಾಟಕ್ಕೆ ಅವಕಾಶ ನೀಡಲಾಗಿದೆ. ಮದ್ಯ ಮಾರಾಟಕ್ಕೆ ಅವಕಾಶ ಮಾಡಿಕೊಟ್ಟಿದ್ದರ ಲಾಭ ಪಡೆದ ಕೆಲವು ಅಂಗಡಿಗಳ ಮಾಲೀಕರು ಎಂಆರ್‌ಪಿ ದರದ ಮೇಲೆ ಶೇ. 14ರಿಂದ ಶೇ. 30ರಷ್ಟು ದುಪ್ಪಟ್ಟು ದರ ಪಡೆದು ಮದ್ಯ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ. 350 ರೂ. ಮದ್ಯವನ್ನು 400 ರೂ.ಗೆ, 145 ರೂ. ಬಿಯರ್ ಬಾಟಲ್‌ಅನ್ನು 175 ರೂ.ಗೆ, 180 ರೂ. ದರದ ಮದ್ಯವನ್ನು 220 ರೂ. ಮತ್ತು 50 ರೂ. ಮದ್ಯವನ್ನು 70 ರೂ.ಗೆ ಮಾರಾಟ ಮಾಡಲಾಗಿದೆ ಎನ್ನಲಾಗಿದೆ.