ಕರ್ನಾಟಕ

karnataka

ETV Bharat / state

ಹಾಸನ: ಜುಲೈ 25ರವರೆಗೆ ಸ್ವಯಂ ಪ್ರೇರಿತವಾಗಿ ಕ್ಷೌರಿಕ ಅಂಗಡಿಗಳು ಬಂದ್​ - barber shops bandh till July 25th

ಜುಲೈ 25ರವರೆಗೂ ಹಾಸನ ತಾಲೂಕಿನ ಸಾಲಗಾಮೆ ಹೋಬಳಿ, ನಿಟ್ಟೂರು ಮತ್ತು ದುದ್ದ ಹೋಬಳಿ ವ್ಯಾಪ್ತಿಯಲ್ಲಿ ಸವಿತಾ ಸಮಾಜದಿಂದ ಸ್ವಯಂ ಪ್ರೇರಿತವಾಗಿ ಕ್ಷೌರಿಕ ಅಂಗಡಿಗಳನ್ನ ಬಂದ್ ಮಾಡಲು ತೀರ್ಮಾನಿಸಲಾಗಿದೆ.

Hassan: Self-motivated barber shops bandh till July 25th
ಹಾಸನ: ಜುಲೈ 25ರವರೆಗೆ ಸ್ವಯಂ ಪ್ರೇರಿತವಾಗಿ ಕ್ಷೌರಿಕ ಅಂಗಡಿಗಳು ಬಂದ್​

By

Published : Jul 2, 2020, 7:22 PM IST

ಹಾಸನ:ಕೊರೊನಾ ದಿನೇ ದಿನೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ, ಮುನ್ನೆಚ್ಚರಿಕಾ ಕ್ರಮವಾಗಿ ಜುಲೈ 25ರವರೆಗೂ ತಾಲೂಕಿನ ಸಾಲಗಾಮೆ ಹೋಬಳಿ, ನಿಟ್ಟೂರು ಮತ್ತು ದುದ್ದ ಹೋಬಳಿ ವ್ಯಾಪ್ತಿಯಲ್ಲಿ ಸವಿತಾ ಸಮಾಜದಿಂದ ಸ್ವಯಂ ಪ್ರೇರಿತವಾಗಿ ಕ್ಷೌರಿಕ ಅಂಗಡಿಗಳನ್ನ ಬಂದ್ ಮಾಡಲು ತೀರ್ಮಾನಿಸಲಾಗಿದೆ.

​ಕ್ಷೌರಿಕ ಅಂಗಡಿಗೆ ಬರುವ ಗ್ರಾಹಕರು ಆರೋಗ್ಯವಂತರಾ, ಅನಾರೋಗ್ಯ ಪೀಡಿತರಾ ಎಂಬುದನ್ನು ಕಂಡು ಹಿಡಿಯುವುದು ತುಂಬ ಕಷ್ಟ. ಅಂಗಡಿಗೆ ಬರುವವರನ್ನು ಸ್ಪರ್ಶಿಸದೆ ಕ್ಷೌರ ಮಾಡುವುದು ಸಹ ಕಷ್ಟಸಾಧ್ಯ. ಸುರಕ್ಷಿತ ಕ್ರಮ ಅನುಸರಿಸುವ ವೈದ್ಯರಿಗೆ, ಪೊಲೀಸರಿಗೆ ಕೊರೊನಾ ವೈರಸ್ ಹರಡಿರುವುದು ನಮ್ಮ ಕಣ್ಣ ಮುಂದೆಯೇ ಇದೆ ಎಂದರು.

ಹಾಸನ: ಜುಲೈ 25ರವರೆಗೆ ಸ್ವಯಂ ಪ್ರೇರಿತವಾಗಿ ಕ್ಷೌರಿಕ ಅಂಗಡಿಗಳು ಬಂದ್​

ಕ್ಷೌರಿಕರು ತಮ್ಮ ಜೀವನ ನಿರ್ವಹಣೆಗೆ ಕ್ಷೌರಿಕ ವೃತ್ತಿಯನ್ನೇ ಅವಲಂಬಿಸಿದ್ದರೂ ಸಹ ಬೇರೆ ದಾರಿ ಕಾಣದೆ, ನಮ್ಮ ಕುಟುಂಬದವರು ಮತ್ತು ಗ್ರಾಹಕರ ಹಿತದೃಷ್ಠಿಯಿಂದ ಕ್ಷೌರಿಕ ಅಂಗಡಿಗಳನ್ನು ಬಂದ್ ಮಾಡಲಾಗುತ್ತಿದೆ. ಸರ್ಕಾರದ ವತಿಯಿಂದ ಕ್ಷೌರಿಕರಿಗೆ ಜೀವ ವಿಮೆ ಘೋಷಿಸಬೇಕೆಂದು ಒತ್ತಾಯಿಸಿದರು.

ABOUT THE AUTHOR

...view details