ಕರ್ನಾಟಕ

karnataka

ETV Bharat / state

ದಶಕಗಳ ಹೋರಾಟಕ್ಕೆ ಫಲ ಸಿಕ್ಕರೂ ಸಾರ್ವಜನಿಕರಿಗೆ ತಪ್ಪದ ತೊಂದರೆ - ಹಾಸನ ರೈಲ್ವೆ ಮೇಲ್ಸೇತುವೆ ನಿರ್ಮಾಣ ಸುದ್ದಿ

ದಶಕಗಳ ಹೋರಾಟದ ಫಲವಾಗಿ ನಗರದ ರೈಲ್ವೆ ಮೇಲ್ಸೇತುವೆ ಕೆಲಸ ಈಗಷ್ಟೇ ಪ್ರಾರಂಭವಾಗಿದೆ. 44 ಕೋಟಿ ರೂ. ವೆಚ್ಚದ ಕಾಮಗಾರಿ ಮುಂದಿನ ಒಂದೂವರೆ ವರ್ಷಗಳ ನಂತರ ಲೋಕಾರ್ಪಣೆ ಆಗುವ ನಿರೀಕ್ಷೆಯಿದೆ. ವೇಗದ ಕೆಲಸಕ್ಕೆ ಎನ್‌. ಆರ್ ವೃತ್ತದಿಂದ ಹೊಸ ಬಸ್ ನಿಲ್ದಾಣ ವರೆಗಿನ ಮುಖ್ಯ ರಸ್ತೆ ಸಂಚಾರವನ್ನು ಜಿಲ್ಲಾಡಳಿತ ಸ್ಥಗಿತಗೊಳಿಸಿದೆ.

hassan-road-routs-change-for-railway-overhead-works
ಹಾಸನ ರೈಲ್ವೆ ಮೇಲ್ಸೇತುವೆ ಕಾಮಗಾರಿ

By

Published : Jan 23, 2020, 11:57 AM IST

ಹಾಸನ : ದಶಕಗಳ ಹೋರಾಟದ ಫಲವಾಗಿ ನಗರದ ರೈಲ್ವೆ ಮೇಲ್ಸೇತುವೆ ಕೆಲಸ ಈಗಷ್ಟೇ ಪ್ರಾರಂಭವಾಗಿದೆ. 44 ಕೋಟಿ ರೂ. ವೆಚ್ಚದ ಕಾಮಗಾರಿ ಮುಂದಿನ ಒಂದೂವರೆ ವರ್ಷಗಳ ನಂತರ ಲೋಕಾರ್ಪಣೆ ಆಗುವ ನಿರೀಕ್ಷೆಯಿದೆ. ವೇಗದ ಕೆಲಸಕ್ಕೆ ಎನ್‌. ಆರ್ ವೃತ್ತದಿಂದ ಹೊಸ ಬಸ್ ನಿಲ್ದಾಣ ವರೆಗಿನ ಮುಖ್ಯ ರಸ್ತೆ ಸಂಚಾರವನ್ನು ಜಿಲ್ಲಾಡಳಿತ ಸ್ಥಗಿತಗೊಳಿಸಿದೆ.

ತಾಲೂಕು ಕಚೇರಿಗೆ ಹೊಂದಿಕೊಂಡಿರುವ ಕಾಂಕ್ರಿಟ್ ರಸ್ತೆಯನ್ನು ದ್ವಿಮುಖ ರಸ್ತೆಯಾಗಿ ಪರಿವರ್ತಿಸಿದ್ದು, ಬಸ್ ನಿಲ್ದಾಣಕ್ಕೆ ತೆರಳುವ ಪ್ರಯಾಣಿಕರು ಈ ಮಾರ್ಗದಲ್ಲಿ ಸಾಗಬೇಕು. ಎನ್‌ಡಿಆರ್‌ಕೆ ಕಾಲೇಜು ಹತ್ತಿರ ಇರುವ ರೈಲ್ವೆ ಕೆಳ ಸೇತುವೆಯಿಂದ ಹೊಸ ಬಸ್ ನಿಲ್ದಾಣಕ್ಕೆ ಸಂಪರ್ಕಿಸುವ ರಸ್ತೆಯನ್ನು ಏಕ ಮುಖ ಸಂಚಾರ ರಸ್ತೆಯನ್ನಾಗಿ, ಪರಿವರ್ತಿಸಲಾಗಿದೆ.

ರೈಲ್ವೆ ಮೇಲ್ಸೇತುವೆ ಕಾಮಗಾರಿ

ರೈಲ್ವೆ ಕೆಳ ಸೇತುವೆ ಮಾರ್ಗ ಬಳಸಿ ಹೊಸ ಬಸ್ ನಿಲ್ದಾಣಕ್ಕೆ ಹೋಗಬೇಕು. ಆದ್ರೆ ಅಲ್ಲಿ ಸಂಪರ್ಕವಾದ ವ್ಯವಸ್ಥೆಗಳೇ ಇಲ್ಲವಾಗಿದೆ. ರಾತ್ರಿ ಮದ್ಯ ವ್ಯಸನಿಗಳ ಕಾಟ ಹಾಗೂ ಸಮರ್ಪಕ ಬೀದಿ ದೀಪಗಳ ವ್ಯವಸ್ಥೆ ಇಲ್ಲದೆ ಬೈಕ್ ಸವಾರರಿಗೆ ಹಾಗೂ ಪಾದಾಚಾರಿಗಳು ಸಮಸ್ಯೆ ಅನುಭವಿಸಬೇಕಾಗಿದೆ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಒಟ್ಟಿನಲ್ಲಿ ಜಿಲ್ಲಾಡಳಿತ ಅಭಿವೃದ್ಧಿಎಂದು ಹೇಳಿಕೊಂಡು ವಾಹನ ಸವಾರರಿಗೆ ತೊಂದರೆ ನೀಡುತ್ತಿದ್ದು, ಇನ್ನೂ ಒಂದೂವರೆ ವರ್ಷಗಳ ಕಾಲ ಪರ್ಯಾಯ ಮಾರ್ಗದಲ್ಲಿ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದೆ. ಆದರೆ ಆ ದಾರಿಯಲ್ಲಿ ನಮಗೆ ಓಡಾಡುವುದೇ ಕಷ್ಟವಾಗುತ್ತಿದೆ ಸೂಕ್ತ ಸೌಕರ್ಯಗಳನ್ನು ಒದಗಿಸಿ ಕೊಡಿ ಅನ್ನೋದು ಸಾರ್ವಜನಿಕರ ಅಳಲು.

ABOUT THE AUTHOR

...view details