ಹಾಸನ: ಸಾಕಷ್ಟು ಬಾರಿ ಎಚ್ಚರಿಕೆ ನೀಡಿದರೂ ಅದನ್ನು ನಿರ್ಲಕ್ಷಿಸಿ ರಸ್ತೆಗೆ ಕಸ ಎಸೆಯುತ್ತಿದ್ದ ರಜತ ಕಾಂಪ್ಲೆಕ್ಸ್ನ ವರ್ತಕರಿಗೆ ನಗರಸಭೆ ಸಿಬ್ಬಂದಿ ಹೊಸ ರೀತಿಯಲ್ಲಿ ಪಾಠ ಕಲಿಸಿದ್ದಾರೆ.
ದಿನವೂ ರಸ್ತೆಗೆ ಕಸ... ನಗರಸಭೆ ಸಿಬ್ಬಂದಿ ಮಾಡಿದ ಈ ಕೆಲಸಕ್ಕೆ ಕಾಂಪ್ಲೆಕ್ಸ್ ವರ್ತಕರು ಕಕ್ಕಾಬಿಕ್ಕಿ! - ಹಾಸನದಲ್ಲಿ ಕಸ ವಿಲೇವಾರಿ ಸಮಸ್ಯೆ ಸುದ್ದಿ
ರಸ್ತೆಗೆ ಕಸ ಎಸೆಯುತ್ತಿದ್ದ ಹಾಸನದ ಕಾಂಪ್ಲೆಕ್ಸ್ವೊಂದರ ವರ್ತಕರಿಗೆ ನಗರಸಭೆ ಸಿಬ್ಬಂದಿ ಹೊಸ ರೀತಿಯಲ್ಲಿ ಪಾಠ ಕಲಿಸಿದ್ದಾರೆ.

ನಗರದ ಹಳೇ ಮುನ್ಸಿಪಲ್ ರಸ್ತೆಯಲ್ಲಿರುವ ರಜತ ಕಾಂಪ್ಲೆಕ್ಸ್ನ ವರ್ತಕರು ನಿತ್ಯವೂ ಬೆಳಗ್ಗೆ ತ್ಯಾಜ್ಯ ವಸ್ತುಗಳನ್ನು ಎದುರಿನ ರಸ್ತೆಗೆ ಸುರಿಯುತ್ತಿದ್ದರು. ಹೀಗೆ ಮಾಡದಂತೆ ನಗರಸಭೆ ಸ್ವಚ್ಛತಾ ಸಿಬ್ಬಂದಿ ಹಲವು ಬಾರಿ ಎಚ್ಚರಿಕೆ ನೀಡಿದ್ದರು. ಒಂದು ಡ್ರಮ್ ಬಳಸಿ ತ್ಯಾಜ್ಯ ಸಂಗ್ರಹಿಸಿ ಕೊಡುವಂತೆ ಹಲವಾರು ಬಾರಿ ಸೂಚಿಸಿದ್ದರು.
ಹೀಗಿದ್ದರೂ ವರ್ತಕರು ತಮ್ಮ ಚಾಳಿ ಬಿಟ್ಟಿರಲಿಲ್ಲ. ಶನಿವಾರ ಬೆಳಗ್ಗೆಯೂ ವರ್ತಕರು ತ್ಯಾಜ್ಯಗಳನ್ನು ರಸ್ತೆಗೆ ಸುರಿದಿದ್ದರು. ಅದನ್ನು ಕಂಡು ಸ್ಥಳಕ್ಕೆ ಬಂದ ನಗರಸಭೆ ಸ್ವಚ್ಛತಾ ಸಿಬ್ಬಂದಿ, ತ್ಯಾಜ್ಯ ಗುಡಿಸಿ ಒಂದೆಡೆ ಸಂಗ್ರಹಿಸಿ ಪುನಃ ರಜತ ಕಾಂಪ್ಲೆಕ್ಸ್ನ ಅಂಗಡಿಗಳ ಎದುರಿಗೆ ಸುರಿದಿದ್ದಾರೆ. ಇದರಿಂದ ತ್ಯಾಜ್ಯ ಉತ್ಪಾದಿಸಿ ಬೇಕಾಬಿಟ್ಟಿಯಾಗಿ ಎಸೆಯುತ್ತಿದ್ದ ವರ್ತಕರು ಕಕ್ಕಾಬಿಕ್ಕಿಯಾಗಿದ್ದಾರೆ.