ಸಕಲೇಶಪುರ:ಲಾಕ್ಡೌನ್ ನಿಯಮದಲ್ಲಿ ಕೆಲವು ಬದಲಾವಣೆಗಳನ್ನು ತಾಲೂಕು ಆಡಳಿತ ಕೈಗೊಂಡಿದ್ದರಿಂದ, ಪಟ್ಟಣದ ಕೆಲವೆಡೆ ಜನಜಂಗುಳಿ ಉಂಟಾಗಿ ಜನ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ, ಅಗತ್ಯ ವಸ್ತುಗಳನ್ನು ಖರೀದಿಸಲು ಮುಗಿಬಿದ್ದ ಘಟನೆ ಹಾಸನದ ಸಕಲೇಶಪುರದಲ್ಲಿ ನಡೆದಿದೆ.
ಹಾಸನ: ಎಪಿಎಂಸಿ ಆವರಣದಲ್ಲಿ ತರಕಾರಿ ಕೊಳ್ಳಲು ಮುಗಿಬಿದ್ದ ಜನತೆ - ಹಾಸನದಲ್ಲಿ ಲಾಕ್ಡೌನ್ನನ್ನು ಕೊಂಚ ಸಡಿಲ
ಹಾಸನದಲ್ಲಿ ಲಾಕ್ಡೌನ್ ಕೊಂಚ ಸಡಿಲಗೊಳಿಸಿದ ಪರಿಣಾಮ, ಜನ ಸಾಮಾಜಿಕ ಅಂತರವನ್ನು ಕಾಪಾಡಿಕೊಳ್ಳದೇ, ಅಗತ್ಯ ವಸ್ತುಗಳನ್ನು ಖರೀದಿಸಲು ಮುಗಿಬಿದ್ದರು.
ಪಟ್ಟಣದ ಕೆಲವು ಅಂಗಡಿ ಮಳಿಗೆಗಳಲ್ಲಿ, ರಸ್ತೆ ಬದಿಯಲ್ಲಿ ಮಾರಾಟ ಮಾಡಲಾಗುತ್ತಿದ್ದ ಹಣ್ಣು, ತರಕಾರಿ ಮಾರುಕಟ್ಟೆಯನ್ನು ಎಪಿಎಂಸಿ ಮಾರುಕಟ್ಟೆಗೆ ತಾಲೂಕು ಆಡಳಿತ ಸ್ಥಳಾಂತರಿಸಿತ್ತು. ಜೆಎಸ್‌ಎಸ್ ಶಾಲೆಯ ಆವರಣದಲ್ಲಿ ಟಿಎಪಿಸಿಎಮ್‌ಎಸ್ ವತಿಯಿಂದ ರೈತರಿಗೆ ತರಕಾರಿಗಳ ಮಾರಾಟಕ್ಕೆ ಅವಕಾಶ ಕಲ್ಪಿಸಲಾದರೆ, ಎಪಿಎಂಸಿ ಆವರಣದಲ್ಲಿ ಈ ಹಿಂದಿನಂತೆ ತರಕಾರಿ ಮಾರಾಟ ಮಾಡಲು ಅವಕಾಶ ನೀಡಲಾಗಿತ್ತು.
ಜನ ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮಾರ್ಕಿಂಗ್ ಮಾಡಿದ್ದರೂ, ಜನ ಈ ಬಗ್ಗೆ ತಲೆಕೆಡಿಸಿಕೊಳ್ಳದೇ ತರಕಾರಿಯನ್ನು ಕೊಳ್ಳಲು ಮುಗಿಬಿದ್ದರು. ಇದೇ ರೀತಿ ಪಟ್ಟಣದ ಹಳೆ ಬಸ್ ನಿಲ್ದಾಣದಲ್ಲಿರುವ ಸೂಪರ್ ಮಾರ್ಕೆಟ್ ಸೇರಿದಂತೆ ಕೆಲವು ದಿನಸಿ ಅಂಗಡಿಗಳಿಗೆ ಸಹ ಜನ ಅಗತ್ಯ ವಸ್ತುಗಳನ್ನು ಖರೀದಿಸಲು ಮುಗಿಬಿದ್ದರು.