ಕರ್ನಾಟಕ

karnataka

ETV Bharat / state

ಹಾಸನದಲ್ಲಿ ನೆಲೆಸಿದ್ದ ನಿರಾಶ್ರಿತರನ್ನು ಸ್ವಗ್ರಾಮಕ್ಕೆ ಕಳಿಸಿಕೊಟ್ಟ ಅಧಿಕಾರಿಗಳು - Hassan officers sent Refugees to their home town

ಲಾಕ್​​ಡೌನ್ ಘೊಷಣೆಯಾದಾಗಿನಿಂದ ಹಾಸನ ಜಿಲ್ಲೆ ರಾಮನಾಥಪುರದ ನಿರಾಶ್ರಿತರ ಕೇಂದ್ರದಲ್ಲಿ ನೆಲೆಸಿದ್ದ ಬೀದರ್ ಜನರನ್ನು ಇಂದು ಬಸ್​​ ವ್ಯವಸ್ಥೆ ಮಾಡಿ ತಮ್ಮ ಸ್ವಗ್ರಾಮಗಳಿಗೆ ಕಳಿಸಿಕೊಡಲಾಯ್ತು.

Refugees
ಹಾಸನ ನಿರಾಶ್ರಿತರು

By

Published : Apr 25, 2020, 7:58 PM IST

ಅರಕಲಗೂಡು ( ಹಾಸನ):ಕೊರೊನಾ ಲಾಕ್​​​​​​ಡೌನ್​​​ನಿಂದಾಗಿ ಪಟ್ಟಣದ ನಿರಾಶ್ರಿತರ ಕೇಂದ್ರದಲ್ಲಿ ಆಶ್ರಯ ಪಡೆದಿದ್ದ ಬೀದರ್ ಜಿಲ್ಲೆಯ 10 ಮಂದಿ ನಿರಾಶ್ರಿತರನ್ನು ತಾಲೂಕು‌ ಆಡಳಿತದ ವತಿಯಿಂದ ಶನಿವಾರ ಸಂಜೆ ತಮ್ಮ ಊರಿಗೆ ಕೆಎಸ್​​​ಆರ್​ಟಿಸಿ ಬಸ್ ವ್ಯವಸ್ಥೆ ಮಾಡಿ ಕಳಿಸಿಕೊಡಲಾಯ್ತು.

ಮಾಧ್ಯಮಗಳೊಂದಿಗೆ ಮಾತನಾಡಿದ ತಹಶಿಲ್ದಾರ್ ವೈ.ಎಂ. ರೇಣುಕುಮಾರ್, ಹಳ್ಳಿ ಹಳ್ಳಿಗಳಿಗೆ ತೆರಳಿ ಡ್ರಂಗಳು, ಮತ್ತಿತರ ಪಾತ್ರೆ ವಸ್ತುಗಳನ್ನು ಮಾರಾಟ ಮಾಡುತ್ತಾ ತಾಲೂಕಿನಾದ್ಯಂತ ಅಲ್ಲಲ್ಲಿ ಟೆಂಟ್ ಹಾಕಿಕೊಂಡು ಜೀವನ ಸಾಗಿಸುತ್ತಿದ್ದ ಬೀದರ್ ಜಿಲ್ಲೆ ಹುಮ್ನಾಬಾದ್​​​​​​​​​​​​​​​​​​ ತಾಲೂಕು ಮಂಗಲಗಿ ಗ್ರಾಮದ 10 ಮಂದಿ ಲಾಕ್​​ಡೌನ್ ಪರಿಣಾಮ ರಾಮನಾಥಪುರದಲ್ಲೇ ನೆಲೆಸಿದ್ದರು. ಎಲ್ಲರ ಆರೋಗ್ಯ ತಪಾಸಣೆ ನಡೆಸಿ ಅರಕಲಗೂಡು ನಿರಾಶ್ರಿತರ ಕೇಂದ್ರದಲ್ಲಿ‌ ತಂಗಲು ವ್ಯವಸ್ಥೆ ಕಲ್ಪಿಸಲಾಗಿತ್ತು. ಊಟ, ತಿಂಡಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿ ನಿರಾಶ್ರಿತರಿಗೆ ಯಾವುದೇ ಕೊರತೆ ಎದುರಾಗದಂತೆ ನಿಗಾ ವಹಿಸಲಾಗಿತ್ತು. ಆರೋಗ್ಯ ಇಲಾಖೆ ವತಿಯಿಂದ ಆರೋಗ್ಯ ಸೌಲಭ್ಯ ಕೂಡಾ ಒದಗಿಸಲಾಗಿತ್ತು. ಇಂದು‌ ಸರ್ಕಾರದ ಆದೇಶದ ಮೇರೆಗೆ ನಿರಾಶ್ರಿತರಿಗೆ ಉಚಿತವಾಗಿ ಬಸ್ ವ್ಯವಸ್ಥೆ ಮಾಡಿ ಸ್ವಗ್ರಾಮಕ್ಕೆ ಕಳಿಸಿಕೊಡಲಾಯ್ತು. ನಿರಾಶ್ರಿತರು ಬಸ್​​​​ನಲ್ಲೂ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕೆಂಬ ಉದ್ದೇಶದಿಂದ 10 ಮಂದಿಗೆ ಸೇರಿ ಒಂದು ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ತಾಲೂಕು ಆರೋಗ್ಯಾಧಿಕಾರಿ ಡಾ. ಸ್ವಾಮಿಗೌಡ, ಸರ್ಕಾರಿ‌ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ಡಾ.‌ ದೀಪಕ್, ಸಮಾಜ ಕಲ್ಯಾಣಾಧಿಕಾರಿ ಭಾಗೀರಥಿ, ಸಿಪಿಐ ದೀಪಕ್, ಸಬ್ ಇನ್ಸ್​​​ಪೆಕ್ಟರ್​​​​​​​​​​ ವಿಜಯಕೃಷ್ಣ ಹಾಗೂ ಇನ್ನಿತರರು ಈ ವೇಳೆ ಉಪಸ್ಥಿತರಿದ್ದರು.

For All Latest Updates

TAGGED:

ABOUT THE AUTHOR

...view details