ಕರ್ನಾಟಕ

karnataka

ETV Bharat / state

ಹುಡುಗಿ ವಿಚಾರಕ್ಕೆ ಕೊಲೆ ಪ್ರಕರಣ: ಹಾಸನದಲ್ಲಿ ಮತ್ತಿಬ್ಬರು ಅರೆಸ್ಟ್​​ - Hassan murder case update

ಹಾಸನ ಜಿಲ್ಲೆಯ ಚನ್ನರಾಯಪಟ್ಟಣದ ಬಾಗೂರು ರಸ್ತೆಯ ನೇತಾಜಿ ಸರ್ಕಲ್​​ನಲ್ಲಿ ನಡೆದಿದ್ದ ಕೊಲೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನ ಬಂಧಿಸಿದ್ದ ಪೊಲೀಸರು, ಈಗ ಮತ್ತೆ ಇನ್ನಿಬ್ಬರನ್ನ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಮತ್ತಿಬ್ಬರು ಕೊಲೆ ಆರೋಪಿಗಳು ಅರೆಸ್ಟ್​​

By

Published : Nov 4, 2019, 11:56 PM IST

ಹಾಸನ:ಹುಡುಗಿ ವಿಚಾರಕ್ಕೆ ನಡೆದಿದ್ದ ಕೊಲೆ ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನ ಬಂಧಿಸಿದ್ದ ಪೊಲೀಸರು, ಈಗ ಮತ್ತೆ ಇನ್ನಿಬ್ಬರನ್ನ ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ಮತ್ತಿಬ್ಬರು ಕೊಲೆ ಆರೋಪಿಗಳು ಅರೆಸ್ಟ್​​

ಚನ್ನರಾಯಪಟ್ಟಣದ ಬಾಗೂರು ರಸ್ತೆಯ ನೇತಾಜಿ ಸರ್ಕಲ್​​ನಲ್ಲಿ ಹಳೆಯ ದ್ವೇಷದ ಹಿನ್ನೆಲೆಯಲ್ಲಿ ಕೊಲೆ ಆರೋಪಿಯಾಗಿದ್ದ ಅಭಿಷೇಕ್ (26) ಎಂಬುವನನ್ನು ಮಂಟಿ ಹುಡುಗರು ಎನ್ನಲಾದ ನಾಲ್ಕು ಮಂದಿ ಅ. 29 ರಂದು ಬರ್ಬರವಾಗಿ ಕೊಲೆಗೈದು ಪರಾರಿಯಾಗಿದ್ದರು.

ಕೊಲೆ ಆರೋಪಿಗಳು

ಈ ಸಂಬಂಧ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮನಿವಾಸ್ ಸೆಪಟ್, ಡಿವೈಎಸ್ಪಿ ಲಕ್ಷ್ಮೇ ಗೌಡ ಮತ್ತು ಸಿಪಿಐ ಕಾಂತರಾಜು ನೇತೃತ್ವದಲ್ಲಿ ಎರಡು ವಿಶೇಷ ತಂಡಗಳನ್ನು ಆರೋಪಿಗಳ ಪತ್ತೆಗಾಗಿ ರಚನೆ ಮಾಡಿದ್ದರು. ನ. 2 ರಂದು ಪ್ರಮುಖ ಆರೋಪಿಗಳು ಎನ್ನಲಾದ ಶೇಖರ್ (23) ಮತ್ತು ವಿನೋದ್ ಅಲಿಯಾಸ್ ಕೋಳಿ ಮಂಜ (21) ಎಂಬುವರನ್ನ ಬಂಧಿಸಿದ್ದ ಪೊಲೀಸರು, ಇಂದು ಅವರ ಸಹಚರರಾದ ಶಿವಕುಮಾರ್(21) ಮತ್ತು ನಿಖಿಲ್ (21) ಎಂಬುವರನ್ನು ಮಂಡ್ಯ ಜಿಲ್ಲೆಯ ಕೆ ಆರ್ ಪೇಟೆ ಬಸ್ ನಿಲ್ದಾಣದ ಸಮೀಪ ಬಂಧಿಸಿದ್ದಾರೆ.

ಕೊಲೆ ಆರೋಪಿಗಳಿಂದ ಸ್ಥಳ ಮಹಜರು

ಇನ್ನು, ಕೊಲೆ ನಡೆದ ಸ್ಥಳಕ್ಕೆ ಆರೋಪಿಗಳನ್ನ ಕರೆತಂದು ಸ್ಥಳ ಮಹಜರು ಮಾಡಿಸಿದ ಬಳಿಕ ಆರೋಪಿಗಳನ್ನ ಚನ್ನರಾಯಪಟ್ಟಣದ ಜೆ.ಎಂ.ಎಫ್.ಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ ಹಾಸನದ ಉಪಕಾರಾಗೃಹಕ್ಕೆ ಕಳುಹಿಸಲಾಯಿತು.

ABOUT THE AUTHOR

...view details