ಕರ್ನಾಟಕ

karnataka

ETV Bharat / state

ಹಾಸನ: ಚಿರತೆ ಮರಿ ಅನುಮಾನಾಸ್ಪದ ಸಾವು - ಹಾಸನ, ಹೆಬ್ಬಾಳ್ ರಸ್ತೆಯ ಸಮುದ್ರವಳ್ಳಿ ಮುನಿಯಪ್ಪನ ದೇವಾಲಯ , ಚಿರತೆ ಮರಿ ಸಾವು, ಅನುಮಾನಾಸ್ಪದ ಸಾವು, ವಿಷಾಹಾರ ಸೇವಿಸಿ ಸಾವು, ಅರಣ್ಯ ಇಲಾಖೆ ಸಿಬ್ಬಂದಿಗಳು , ಕನ್ನಡ ವಾರ್ತೆ, ಈಟಿವಿ ಭಾರತ

ಸುಮಾರು ಒಂದು ವರ್ಷ ವಯಸ್ಸಿನ ಚಿರತೆ ಮರಿಯೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾಸನ ಜಿಲ್ಲೆಯ ಸಮುದ್ರವಳ್ಳಿ ಬಳಿ ನಡೆದಿದೆ.

ಚಿರತೆ ಮರಿ ಅನುಮಾನಾಸ್ಪದ ಸಾವು

By

Published : Jul 31, 2019, 2:20 AM IST

ಹಾಸನ: ಚಿರತೆ ಮರಿಯೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹೆಬ್ಬಾಳ್ ರಸ್ತೆಯ ಸಮುದ್ರವಳ್ಳಿ ಮುನಿಯಪ್ಪನ ದೇವಾಲಯ ಸಮೀಪ ನಡೆದಿದೆ.

ಸುಮಾರು ಒಂದು ವರ್ಷ ವಯಸ್ಸಿನ ಚಿರತೆ ಮರಿ ಇದಾಗಿದ್ದು, ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ವಿಷಾಹಾರ ಸೇವನೆಯಿಂದ ಸಾವನ್ನಿಪ್ಪಿರಬಹುದು ಎಂದು ಅರಣ್ಯ ಇಲಾಖೆ ಅಧಿಕಾರಿಗಳು ಶಂಕೆ ವ್ಯಕ್ತಪಡಿಸಿದ್ದಾರೆ.

ಸಮುದ್ರವಳ್ಳಿ ಭಾಗದಲ್ಲಿ ಈ ರೀತಿಯಾಗಿ ಚಿರತೆ ಸಾವಿಗೀಡಾಗಿರುವುದು ಇದೇ ಮೊದಲಲ್ಲ. ಈ ಹಿಂದೆ ಸಂತೆ ಶಿವರದಲ್ಲಿ ತೋಟದಲ್ಲಿ ಜೋಳದ ಮಧ್ಯೆ ರೈತರು ವಿಷ ಆಹಾರವನ್ನಿಟ್ಟಿದ್ದನ್ನು ಸೇವಿಸಿ ಚಿರತೆಯೊಂದು ಸಾವನ್ನಪ್ಪಿತ್ತು. ಇದೀಗ ಮತ್ತೊಂದು ಚಿರತೆ ನಿಗೂಢವಾಗಿ ಸಾವನ್ನಪ್ಪಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.

ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಆಗಮಿಸಿ ಚಿರತೆ ಮರಿಯ ಕಳೆ ಬರಹವನ್ನು ಮರಣೋತ್ತರ ಪರೀಕ್ಷೆ ನಡೆಸಿದರು. ಬಳಿಕ ಸ್ಥಳದಲ್ಲಿಯೇ ಅಗ್ನಿಸ್ಪರ್ಶ ಮಾಡುವ ಮೂಲಕ ಅಂತ್ಯಸಂಸ್ಕಾರ ನೆರವೇರಿಸಿದರು.

For All Latest Updates

TAGGED:

ABOUT THE AUTHOR

...view details