ಹಾಸನ: ತಾಲೂಕಿನ ದುದ್ದ ಹೋಬಳಿ ಎಚ್.ಭೈರಾಪುರ ಗ್ರಾಮದ ಸಮೀಪ ಚಿರತೆಯ ಶವವೊಂದು ಪತ್ತೆಯಾಗಿದ್ದು, ಹಲವು ಅನುಮಾನಗಳಿಗೆ ಕಾರಣವಾಗಿದೆ.
ಹಾಸನ: ಅನುಮಾನಾಸ್ಪದ ರೀತಿಯಲ್ಲಿ ಚಿರತೆ ಶವ ಪತ್ತೆ - ದುದ್ದ ಹೋಬಳಿ ಎಚ್.ಭೈರಾಪುರ ಗ್ರಾಮ
ಸುಮಾರು ಆರು ವರ್ಷದ ಗಂಡು ಚಿರತೆ ಸಾವನ್ನಪ್ಪಿದ್ದು, ಎಚ್.ಭೈರಾಪುರ ಗ್ರಾಮದ ಜಮೀನಿನಲ್ಲಿ ಪತ್ತೆಯಾಗಿದೆ. ನಿನ್ನೆಯಷ್ಟೇ ಗ್ರಾಮದಲ್ಲಿ ಚಿರತೆಯೊಂದು ಎಮ್ಮೆ ಕರು ತಿಂದು ಹಾಕಿತ್ತು. ಚಿರತೆ ಹಾವಳಿಯಿಂದ ಗ್ರಾಮಸ್ಥರು ಆತಂಕಗೊಂಡಿದ್ದರು.
![ಹಾಸನ: ಅನುಮಾನಾಸ್ಪದ ರೀತಿಯಲ್ಲಿ ಚಿರತೆ ಶವ ಪತ್ತೆ Hassan Leopard corpse](https://etvbharatimages.akamaized.net/etvbharat/prod-images/768-512-11936789-701-11936789-1622220215041.jpg)
ಚಿರತೆ ಶವ ಪತ್ತೆ
ಸುಮಾರು ಆರು ವರ್ಷದ ಗಂಡು ಚಿರತೆ ಸಾವನ್ನಪ್ಪಿದ್ದು, ಎಚ್.ಭೈರಾಪುರ ಗ್ರಾಮದ ಜಮೀನಿನಲ್ಲಿ ಪತ್ತೆಯಾಗಿದೆ. ನಿನ್ನೆಯಷ್ಟೇ ಗ್ರಾಮದಲ್ಲಿ ಚಿರತೆಯೊಂದು ಎಮ್ಮೆ ಕರು ತಿಂದು ಹಾಕಿತ್ತು. ಚಿರತೆ ಹಾವಳಿಯಿಂದ ಗ್ರಾಮಸ್ಥರು ಆತಂಕಗೊಂಡಿದ್ದರು.
ಇದೀಗ ಸಾವನ್ನಪ್ಪಿರುವ ಚಿರತೆ, ಎಮ್ಮೆ ಕರುವನ್ನು ಕೊಂದು ತಿಂದ ಚಿರತೆಯೇ ಇರಬಹುದೆಂಬ ಅನುಮಾನ ವ್ಯಕ್ತವಾಗುತ್ತಿದೆ. ಚಿರತೆಯ ಸಾವಿಗೆ ಕಾರಣವೇನು ಅದನ್ನು ಯಾರಾದರೂ ಕೊಂದು ಹಾಕಿದ್ದಾರೆಯೇ ಎಂಬ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿರುವ ಅರಣ್ಯಾಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.