ಕರ್ನಾಟಕ

karnataka

ETV Bharat / state

ಸರ್ಕಾರಗಳು ಕೆಂಪೇಗೌಡರ ಆಡಳಿತದ ಮಾದರಿ ಅನುಕರಿಸಲಿ.. ಜೆಡಿಎಸ್‌ ಸಾರಥಿ ಹೆಚ್ ಕೆ ಕುಮಾರಸ್ವಾಮಿ - Mla h.k.kumaraswamy

ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಕೆಂಪೇಗೌಡರ ಜಯಂತಿಯನ್ನ ಸರಳವಾಗಿ ಆಚರಿಸಲಾಗುತ್ತಿದೆ..

hassan kempegowda birthday celebration
ಸರ್ಕಾರಗಳು ಕೆಂಪೇಗೌಡರ ಆಡಳಿತದ ಮಾದರಿಯನ್ನ ಅನುಕರಿಸಬೇಕು: ಶಾಸಕ ಹೆಚ್.ಕೆ ಕುಮಾರಸ್ವಾಮಿ

By

Published : Jun 27, 2020, 7:17 PM IST

ಸಕಲೇಶಪುರ(ಹಾಸನ):ಪಟ್ಟಣದ ಮಿನಿ ವಿಧಾನನಸೌಧದಲ್ಲಿ ತಾಲೂಕು ಆಡಳಿತದ ವತಿಯಿಂದ ಕೆಂಪೇಗೌಡರ ಜಯಂತಿ ಆಚರಿಸಲಾಯಿತು.

ಈ ವೇಳೆ ಮಾತನಾಡಿದ ಶಾಸಕ ಹೆಚ್ ಕೆ ಕುಮಾರಸ್ವಾಮಿ, ಕೆಂಪೇಗೌಡರಷ್ಟು ದೂರದೃಷ್ಠಿಯನ್ನ ಬೇರೆ ಯಾವ ರಾಜರು ಹೊಂದಿರಲಿಲ್ಲ. ಇವರ ದೂರದೃಷ್ಟಿಯಿಂದ ಬೆಂಗಳೂರಿನ ಹಲವು ಕೆರೆಗಳು ಅಭಿವೃದ್ದಿಗೊಂಡವು ಹಾಗೂ ಬೆಂಗಳೂರು ಸಹ ವ್ಯಾಪಕ ಅಭಿವೃದ್ದಿಗೊಂಡಿತು. ಈ ಹಿನ್ನೆಲೆಯಲ್ಲಿ ಪ್ರತಿ ಸರ್ಕಾರ ಕೆಂಪೇಗೌಡರ ಆಡಳಿತದ ಮಾದರಿ ಅನುಕರಿಸಬೇಕು ಎಂದರು.

ಪಟ್ಟಣದ ಒಕ್ಕಲಿಗರ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ತಾಲೂಕು ಒಕ್ಕಲಿಗ ಸಂಘದ ಅಧ್ಯಕ್ಷ ಮಾಜಿ ಶಾಸಕ ಹೆಚ್ ಎಂ ವಿಶ್ವನಾಥ್ ಮಾತನಾಡಿ, ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿ ಕೆಂಪೇಗೌಡರ ಜಯಂತಿಯನ್ನ ಸರಳವಾಗಿ ಆಚರಿಸಲಾಗುತ್ತಿದೆ. ಚೈನಾ ಜೊತೆಗೆ ಇತ್ತೀಚೆಗೆ ನಡೆದ ಹೋರಾಟದಲ್ಲಿ ಹುತಾತ್ಮರಾದ ಸೈನಿಕರಿಗೆ ಹಾಗೂ ಇತ್ತೀಚೆಗೆ ಮೃತಪಟ್ಟ ಒಕ್ಕಲಿಗ ಮುಖಂಡ ಮಲ್ಲೇಶ್ ಗೌಡ ಅವರಿಗೆ ಸಂಘದ ವತಿಯಿಂದ ಶ್ರದ್ಧಾಂಜಲಿ ಅರ್ಪಿಸಲಾಗುತ್ತಿದೆ ಎಂದರು.

ABOUT THE AUTHOR

...view details