ಹಾಸನ: ಪ್ರಪಂಚವೇ ಕೊರೊನಾ ಭೀತಿಯಲ್ಲಿರುವಾಗ ನಗರದ ಪೆನ್ಷನ್ ಮೊಹಲ್ಲಾ ರಸ್ತಯೆಲ್ಲಿ ಜೆಡಿಎಸ್ ಸ್ಥಳೀಯ ನಾಯಕರು ಸಾಮಾಜಿಕ ಅಂತರ ಪಾಲಿಸದೆ ಉಳುಮೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು.
ಕೊರೊನಾ ಭೀತಿ ನಡುವೆಯೂ ಹಾಸನದಲ್ಲಿ ಜೆಡಿಎಸ್ ಮುಖಂಡರಿಂದ ಪ್ರತಿಭಟನೆ - ಅಗಿಲೆ ಯೋಗೇಶ್ ಪ್ರತಿಭಟನೆ
ಕೊರೊನಾ ಭೀತಿ ನಡುವೆಯೂ ಹಾಸನ ಜೆಡಿಎಸ್ ನಾಯಕರು ಶಾಸಕ ಪ್ರೀತಮ್ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆ ವೇಳೆ ಸಾಮಾಜಿಕ ಅಂತರ ಪಾಲನೆ ಆಗದಿರುವುದು ಕಂಡು ಬಂತು.
ಹಾಸನ ಜೆಡಿಎಸ್ ಪ್ರತಿಭಟನೆ
ಜೆಡಿಎಸ್ ಮುಖಂಡ ಅಗಿಲೆ ಯೋಗೇಶ್, ಶಾಸಕ ಪ್ರೀತಮ್ ಗೌಡ ವಿರುದ್ಧ ಪ್ರತಿಭಟನೆ ನಡೆಸುವ ಭರದಲ್ಲಿ 144 ಸೆಕ್ಷನ್ ಉಲ್ಲಂಘಸಿದರು. ಈ ಹಿಂದೆ ಮಾರ್ಕೆಟ್ ಅಂಗಡಿ ಹಂಚಿಕೆ ವಿಚಾರದಲ್ಲಿ ಪ್ರೀತಮ್ ಗೌಡ ನಿರೂದ್ಯೋಗಿ ರಾಜಕೀಯ ಮಂದಿ ಟೀಕೆ ಮಾಡ್ತಾರೆ ಎಂದು ಹೇಳಿಕೆ ನೀಡಿದ್ದರು.
ಈ ಹಿನ್ನೆಲೆಯಲ್ಲಿ ಅಗಿಲೆ ಯೋಗೇಶ್ ಹಾಗೂ ತಾಲೂಕು ಜೆಡಿಎಸ್ ಅಧ್ಯಕ್ಷ ಎಸ್.ದೇವೇಗೌಡ ಮತ್ತು ಕಾರ್ಯಕರ್ತರು ಕೊರೊನಾ ಭೀತಿ ನಡುವೆಯೂ ಜೋಳ ಬಿತ್ತನೆ ಮಾಡುವ ಮೂಲಕ ಪ್ರತಿಭಟನೆ ನಡೆಸಿದರು. ಮಧ್ಯಪ್ರವೇಶಿಸಿದ ಪೊಲೀಸರು, ಪ್ರತಿಭಟನೆ ನಿಲ್ಲಿಸಿ ರೈತರು ಮತ್ತು ಎತ್ತುಗಳನ್ನು ವಶಕ್ಕೆ ಪಡೆದರು.