ಕರ್ನಾಟಕ

karnataka

ETV Bharat / state

ಸೋಂಕಿತ ಓಡಾಡಿದ್ದ ಹಾಸನದ ಗ್ರಾಮಗಳು ಸೀಲ್​ಡೌನ್​... ನಿಟ್ಟುಸಿರು ಬಿಟ್ಟ ಜನ - Corona News

ಕೊರೊನಾ ಸೋಂಕಿತನೊಬ್ಬ ಹಾಸನ ಜಿಲ್ಲೆಯ ಕೆಲವೆಡೆ ಓಡಾಡಿ ಆತಂಕ ಸೃಷ್ಟಿಸಿದ್ದ ಬೆನ್ನಲ್ಲಿಯೇ ಆ ಪ್ರದೇಶಗಳನ್ನು ಸೀಲ್​ಡೌನ್​ ಮಾಡಿ, ಕೆಲವರನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಎಲ್ಲರ ವರದಿ ನೆಗೆಟಿವ್​ ಬಂದಿದ್ದು ಜನ ನಿಟ್ಟುಸಿರು ಬಿಟ್ಟಿದ್ದಾರೆ.

Hassan: infected areas sealed down, people safe
ಹಾಸನ: P-505ಸೋಂಕಿತ ಓಡಾಡಿದ್ದ ಜಾಗ ಸೀಲ್​ಡೌನ್​, ಜನರು ಸೇಫ್​

By

Published : Apr 29, 2020, 8:34 AM IST

ಶ್ರವಣಬೆಳಗೊಳ:ಕೊರೊನಾಸೋಂಕಿತನೊಬ್ಬ (P-505) ಹಾಸನ ಜಿಲ್ಲೆಯ ಕೆಲವೆಡೆ ಓಡಾಡಿ ಆತಂಕ ಸೃಷ್ಟಿಸಿದ್ದ ಬೆನ್ನಲ್ಲಿಯೇ ಕೆಲವು ಪ್ರದೇಶಗಳನ್ನು ಸೀಲ್​ಡೌನ್​ ಮಾಡಲಾಗಿದ್ದು, ಜಿಲ್ಲೆಯ ಜನ ನಿಟ್ಟುಸಿರು ಬಿಟ್ಟಿದ್ದಾರೆ.

ಹಾಸನ: P-505ಸೋಂಕಿತ ಓಡಾಡಿದ್ದ ಜಾಗ ಸೀಲ್​ಡೌನ್​, ಜನರು ಸೇಫ್​

ಮಂಡ್ಯ ಜಿಲ್ಲೆಯ ಡಿ. ಸಾತೇನಹಳ್ಳಿಯ P-505 ಸೋಂಕಿತ ವ್ಯಕ್ತಿ ಹಾಸನ ಜಿಲ್ಲೆಯ ಹಲವು ಭಾಗಗಳಲ್ಲಿ ಓಡಾಡಿದ್ದು, ನಿನ್ನೆಯಿಂದ ಜಿಲ್ಲೆಯಲ್ಲಿ ಆತಂಕ ಮನೆ ಮಾಡಿತ್ತು. ಗ್ರೀನ್ ಜೋನ್ ನಲ್ಲಿದ್ದ ಹಾಸನ ಜಿಲ್ಲೆಗೆ ಮುಂಬೈನಿಂದ ಅಕ್ರಮವಾಗಿ ಬಂದ ವ್ಯಕ್ತಿಯಿಂದ ಕೊರೊನಾ ಸೋಂಕು ಹರಡಲಿದೆ ಎಂಬ ಭೀತಿ ಶುರುವಾಗಿತ್ತು. ಆದರೆ, ಸದ್ಯ ಆತ ಓಡಾಡಿರುವ 6 ಗ್ರಾಮಗಳ ಜನರನ್ನು ಪರೀಕ್ಷೆಗೆ ಒಳಪಡಿಸಿದ್ದು, ಎಲ್ಲರ ವರದಿ ನೆಗೆಟಿವ್ ಬಂದಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಜನರನ್ನೆಲ್ಲಾ ಹೋಂ ಕ್ವಾರೆಟೈನ್ ಮಾಡಲಾಗಿದೆ.

ಹಾಸನ ಜಿಲ್ಲೆಯ ಹೊಳೆನರಸೀಪುರ ತಾಲೂಕಿನ ಉಲಿವಾಲ ಮತ್ತು ಚನ್ನರಾಯಪಟ್ಚಣ ತಾಲೂಕಿನ ಹಿರೀಸಾವೆಯ ಹೆಗ್ಗಡಿಹಳ್ಳಿ, ಬೂಕನಬೆಟ್ಟ, ಶಿವಪುರ, ಶ್ರವಣಬೆಳಗೂಳ ಹೋಬಳಿಯ ದೇವರಹಳ್ಳಿ, ಮತ್ತು ನುಗ್ಗೇಹಳ್ಳಿ ಹೋಬಳಿಯ ಕಗ್ಗೆರೆ ಗ್ರಾಮವನ್ನು ಮುನ್ನೆಚ್ಚರಿಕಾ ಕ್ರಮವಾಗಿ ಸೀಲ್ ಡೌನ್ ಮಾಡಿಲಾಗಿದೆ. ಊರಿನ ಎಲ್ಲರಿಗೂ ಸೀಲ್​ ಒತ್ತುವ ಮೂಲಕ ಗೃಹಬಂಧನಕ್ಕೆ ಒಳಪಡಿಸಲಾಗಿದೆ.

ABOUT THE AUTHOR

...view details