ಕರ್ನಾಟಕ

karnataka

By

Published : Sep 24, 2019, 7:08 PM IST

Updated : Sep 24, 2019, 7:48 PM IST

ETV Bharat / state

ಹಾಸನದ ಹಿಮ್ಸ್​ ಆಸ್ಪತ್ರೆಗೆ ಕೇಂದ್ರ ಸರ್ಕಾರದಿಂದ ನ್ಯಾಷನಲ್ ಕ್ವಾಲಿಟಿ ಪುರಸ್ಕಾರ...!

ಹಾಸನ ಜಿಲ್ಲೆಯ ಹಿಮ್ಸ್ ಸರ್ಕಾರಿ ಆಸ್ಪತ್ರೆಯ ಸೇವೆಗೆ ಒಟ್ಟು 10 ವಿಭಾಗಗಳಲ್ಲಿ ಕೇಂದ್ರ ಸರ್ಕಾರದಿಂದ ನ್ಯಾಷನಲ್ ಕ್ವಾಲಿಟಿ ಪುರಸ್ಕಾರ ದೊರೆತಿದೆ

ಹಾಸನದ ಹಿಮ್ಸ್​ ಆಸ್ಪತ್ರೆಗೆ ನ್ಯಾಷನಲ್ ಕ್ವಾಲಿಟಿ ಪುರಸ್ಕಾರ

ಹಾಸನ: ಜಿಲ್ಲೆಯ ಹಿಮ್ಸ್ ಸರ್ಕಾರಿ ಆಸ್ಪತ್ರೆಯ ಸೇವೆಗೆ ಒಟ್ಟು 10 ವಿಭಾಗಗಳಲ್ಲಿ ಕೇಂದ್ರ ಸರ್ಕಾರದಿಂದ ನ್ಯಾಷನಲ್ ಕ್ವಾಲಿಟಿ ಪುರಸ್ಕಾರ ದೊರೆತಿದೆ.

10 ವಿಭಾಗಗಳಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಸರ್ಟಿಫಿಕೇಟ್ ಪಡೆದ ರಾಜ್ಯದ ಏಕೈಕ ಸರ್ಕಾರಿ ವೈದ್ಯಕೀಯ ಆಸ್ಪತ್ರೆ ಎಂಬ ಹೆಗ್ಗಳಿಕೆಗೆ ಹಾಸನದ ಹಿಮ್ಸ್​ ಆಸ್ಪತ್ರೆ ಪಾತ್ರವಾಗಿದೆ. ಒಂದು ಸಾವಿರ ಹಾಸಿಗೆ ಸೌಲಭ್ಯ ಇರುವ ಈ ಆಸ್ಪತ್ರೆ ಸದಾ ಜನರಿಂದ ತುಂಬಿ ಹೋಗಿರುತ್ತದೆ. ಆಸ್ಪತ್ರೆಗೆ ಒಂದು ದಿನಕ್ಕೆ 1600 ಹೊರ ರೋಗಿಗಳು ಭೇಟಿ ನೀಡುತ್ತಾರೆ, ಹಾಗೆ ದಿನವೊಂದಕ್ಕೆ 200 ಮಂದಿ ಒಳ ರೋಗಿಗಳು ದಾಖಲಾಗುತ್ತಾರೆ. ಸರ್ಕಾರ ನೀಡುವ ವ್ಯವಸ್ಥೆಯಲ್ಲಿ ಮತ್ತು ಸರ್ಕಾರದ ಚೌಕಟ್ಟಿನಲ್ಲಿ ಸಾಧನೆ ಮಾಡುವುದು ಕಷ್ಟಸಾಧ್ಯ. ಅಂತದರಲ್ಲಿ ನ್ಯಾಷನಲ್ ಕ್ವಾಲಿಟಿ ಪುರಸ್ಕಾರ ಸಿಕ್ಕಿರುವುದು ಗಮನಾರ್ಹವಾಗಿದೆ. ಖಾಸಗಿ ಆಸ್ಪತ್ರೆಗಳ ಅಬ್ಬರ ಹಾಗೂ ಸಿಬ್ಬಂದಿ ಕೊರೆತೆಯ ಓರೆ ಕೋರೆ ವ್ಯವಸ್ಥೆಯನ್ನು ಮೀರಿ ಕೇಂದ್ರ ಸರ್ಕಾರದಿಂದ ನ್ಯಾಷನಲ್ ಕ್ವಾಲಿಟಿ ಸರ್ಟಿಫಿಕೇಟ್ ಗೌರವಕ್ಕೆ ಪಾತ್ರವಾಗಿದೆ. ಅಷ್ಟೇ ಅಲ್ಲ ರೇಡಿಯೋಲಜಿ, ಸರ್ಜರಿ ಸೇವೆ, ಹೊರರೋಗಿ ಸೇವೆ ಸೇರಿದಂತೆ ಒಟ್ಟು 10 ವಿಭಾಗದಲ್ಲಿ ನ್ಯಾಷನಲ್ ಕ್ವಾಲಿಟಿ ಅಸ್ಯೂರೆನ್ಸ್ ಸರ್ಟಿಫಿಕೇಟ್ ಗೆ ಹಿಮ್ಸ್​ ಭಾಜನವಾಗಿದೆ.

ಹಾಸನದ ಹಿಮ್ಸ್​ ಆಸ್ಪತ್ರೆಗೆ ನ್ಯಾಷನಲ್ ಕ್ವಾಲಿಟಿ ಪುರಸ್ಕಾರ

ಸರ್ಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ನೀಡುವ ಈ ನ್ಯಾಷನಲ್ ಕ್ವಾಲಿಟಿ ಅಸ್ಯೂರೆನ್ಸ್ ಸರ್ಟಿಫಿಕೇಟ್ ಪಡೆಯುವುದು ಅಷ್ಟು ಸುಲಭವಲ್ಲ. ಒಂದು ಸರಕಾರಿ ಆಸ್ಪತ್ರೆಯ ಗುಣಮಟ್ಟ, ಸೇವೆ, ಸ್ವಚ್ಛತೆ ಹೀಗೆ ಹಲವು ಆಧಾರದ ಮೇಲೆ ರಾಷ್ಟ್ರಮಟ್ಟದ ಕಮಿಟಿ ಹಲವು ಆಸ್ಪತ್ರೆಗಳೊಂದಿಗೆ ಈ ಮಾಪನ ನಡೆಸುತ್ತದೆ. ಹೀಗೆ ಜಿಲ್ಲೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಮಾಪನ ನಡೆದು ಅದರಲ್ಲಿ ಜಾಗ ಪಡೆದ ಆಸ್ಪತ್ರೆಗೆ ಮಾತ್ರ ಈ ಸರ್ಟಿಫಿಕೇಟ್ ದೊರೆಯುತ್ತದೆ. ಅದರಲ್ಲೂ ಹತ್ತು ವಿಭಾಗಗಳಲ್ಲಿ ನ್ಯಾಷನಲ್ ಪಾಲಿಟಿ ಸರ್ಟಿಫಿಕೇಟ್ ಪಡೆದಿರುವುದು ಹಾಸನ ಹಿಮ್ಸ್ ಹೆಗ್ಗಳಿಕೆಗೆ ಸಾಕ್ಷಿಯಾಗಿದೆ. ಈ ಮನ್ನಣೆಯಿಂದ ಆಸ್ಪತ್ರೆಗೆ ಪ್ರತಿವರ್ಷ 22 ಲಕ್ಷ ಅನುದಾನ ಹೆಚ್ಚಿಗೆ ಬರಲಿದ್ದು, ಹೆಚ್ಚಿನ ಜನತೆ ಸೇವೆಗೆ ಅನುಕೂಲವಾಗಲಿದೆ ಎಂಬುದು ಹರ್ಷದ ಸಂಗತಿ. ಈ ಸಾಧನೆಗೆ ನಮ್ಮ ಸಿಬ್ಬಂದಿಗಳ ಶ್ರಮವೇ ಕಾರಣ ಎಂದು ಹಿಮ್ಸ್​ ವೈದ್ಯರು ಸಂತೋಷ ವ್ಯಕ್ತಪಡಿಸಿದ್ದಾರೆ. ಜೊತೆಗೆ ಸರ್ಕಾರ ಹಿಮ್ಸ್​ ಆಸ್ಪತ್ರೆಗೆ ಇನ್ನಷ್ಟು ಸಿಬ್ಬಂದಿಗಳನ್ನು ಒದಗಿಸಿಕೊಟ್ಟರೆ ಮತ್ತಷ್ಟು ಗುಣಮಟ್ಟದ ವೈದ್ಯಕೀಯ ಸೇವೆ ನೀಡಲು ಸಾಧ್ಯ ಹಾಗೂ ಇನ್ನಷ್ಟು ಬಡರೋಗಿಗಳಿಗೆ ಅನುಕೂಲವಾಗಲಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Last Updated : Sep 24, 2019, 7:48 PM IST

ABOUT THE AUTHOR

...view details