ಹಾಸನ: 150 ವರ್ಷಗಳ ಇತಿಹಾಸವುಳ್ಳ ಮಾಡಳು ಗೌರಮ್ಮ ಜಾತ್ರಾ ಮಹೋತ್ಸವವನ್ನು ಈ ಬಾರಿ ಕೊರೊನಾ ಹಿನ್ನೆಲೆ ನಿಷೇಧಿಸಲಾಗಿದೆ ಎಂದು ಮಾಡಲು ಗೌರಮ್ಮ ದೇವಾಲಯದ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಶಿವಲಿಂಗಪ್ಪ ಹೇಳಿದರು.
ಅಭಿವೃದ್ಧಿ ಮಂಡಳಿ ಅಧ್ಯಕ್ಷ ಶಿವಲಿಂಗಪ್ಪ ಈ ರೀತಿ ಎರಡನೇ ಬಾರಿಗೆ ದೇವಿಯ ಜಾತ್ರಾ ಮಹೋತ್ಸವವನ್ನು ನಿಷೇಧಿಸಲಾಗಿದೆ. ಹೀಗಾಗಿ ರಾಜ್ಯದ ಮೂಲೆಗಳಿಂದ ಬರುವ ಭಕ್ತರಿಗೆ ಕೊರೊನಾ ಹಿನ್ನೆಲೆಯಲ್ಲಿ ಯಾರು ದೇವಸ್ಥಾನಕ್ಕೆ ಆಗಮಿಸದಂತೆ ಮನವಿ ಮಾಡಿದರು.
ಪ್ರತಿವರ್ಷ ರಾಜ್ಯದ ವಿವಿಧೆಡೆಯಿಂದ ಲಕ್ಷಾಂತರ ಭಕ್ತರ ದರ್ಶನಕ್ಕೆ ಆಗಮಿಸುತ್ತಿದ್ದರು. ಗೌರಿಯನ್ನು ಕಡ್ಲೆಹಿಟ್ಟು ಮತ್ತು ಅರಿಶಿಣದಿಂದ ಸ್ವರ್ಣ ಗೌರಿ ತಯಾರಿಸಲಾಗುತ್ತಿತ್ತು. ಅದು ಇಲ್ಲಿನ ದೇವರ ವಿಗ್ರಹದ ಪ್ರಮುಖ ಕೇಂದ್ರ ಬಿಂದುವಾಗಿತ್ತು. ಕೋಡಿಮಠದ ಶ್ರೀಗಳು ಆಗಮಿಸಿ, ಗೌರಿ ಮೂರ್ತಿಗೆ ಮೂಗುನತ್ತು ಹಾಕುವ ಮೂಲಕ ಜಾತ್ರೆಗೆ ಚಾಲನೆ ನೀಡುತ್ತಿದ್ದರು ಎಂದರು.
4 ದಶಕಗಳ ಬಳಿಕ ಮೊದಲ ಬಾರಿಗೆ ಜಾತ್ರಾ ಮಹೋತ್ಸವ ಹಾಗೂ ದೇವಾಲಯಕ್ಕೆ ಈ ಬಾರಿ ಸಾರ್ವಜನಿಕರಿಗೆ ನಿರ್ಬಂಧ ಹಾಕಲಾಗಿದೆ ಎಂದು ಹೇಳಿದರು.