ಕರ್ನಾಟಕ

karnataka

ETV Bharat / state

ರಾಷ್ಟ್ರೀಯ ಪುರಸ್ಕಾರ ಪಡೆದ ಹಾಸನ ಜಿಲ್ಲಾ ಪಂಚಾಯತ್​ - ಪಂಚಾಯತಿಗಳ ಸಬಲೀಕರಣಕ್ಕೆ ನೀಡುವ ರಾಷ್ಟ್ರ ಪ್ರಶಸ್ತಿ

ಗ್ರಾಪಂ ಹಾಗೂ ತಾಪಂಗಳನ್ನು ಎಲ್ಲಾ ಸ್ವರೂಪಗಳಲ್ಲಿ ಸಶಕ್ತಗೊಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವಲ್ಲಿ ಹಾಸನ ಜಿಪಂ ಅತ್ಯುತ್ತಮ ಸಾಧನೆ ಮಾಡಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದು ಗ್ರಾಮೀಣಾಭಿವೃದ್ಧಿ ಇಲಾಖೆ ನೀಡುವ ಈ ರಾಷ್ಟ್ರ ಪ್ರಶಸ್ತಿಗೆ ಹಾಸನ ಜಿಪಂ ಪಾತ್ರವಾಗಿದೆ..

ಹಾಸನ ಜಿಲ್ಲಾ ಪಂಚಾಯತ್​
ಹಾಸನ ಜಿಲ್ಲಾ ಪಂಚಾಯತ್​

By

Published : Apr 2, 2021, 1:04 PM IST

ಹಾಸನ: ಕೇಂದ್ರದ ಗ್ರಾಮೀಣಾಭಿವೃದ್ಧಿ ಇಲಾಖೆ ಪಂಚಾಯತ್‌ಗಳ ಸಬಲೀಕರಣಕ್ಕೆ ನೀಡುವ ರಾಷ್ಟ್ರೀಯ ಪುರಸ್ಕಾರಕ್ಕೆ ಹಾಸನ ಜಿಲ್ಲಾ ಪಂಚಾಯತ್‌ ಭಾಜನವಾಗಿದೆ.

ರಾಷ್ಟ್ರೀಯ ಪುರಸ್ಕಾರಕ್ಕೆ ಹಾಸನ ಜಿಲ್ಲಾ ಪಂಚಾಯತ್ ಭಾಜನ

ಶಿಲ್ಪಕಲೆಗಳ ತವರೂರು, ಗೊಮ್ಮಟನ ನೆಲೆಬೀಡು, ಮಲೆನಾಡು, ಅರೆಮಲೆನಾಡು ಹಾಗೂ ಬಯಲು ಸೀಮೆ ಹೊಂದಿರುವ ಬಡವರ ಊಟಿ ಹಾಸನ ಜಿಲ್ಲೆಯ ಜಿಲ್ಲಾ ಪಂಚಾಯತ್, ಪಂಚಾಯತ್‌ಗಳ ಸಬಲೀಕರಣಕ್ಕೆ ನೀಡುವ ದೀನ್ ದಯಾಳ್ ಉಪಾಧ್ಯಾಯ ರಾಷ್ಟ್ರೀಯ ಪುರಸ್ಕಾರ ಪಡೆದಿದೆ.

ಗ್ರಾಪಂ ಹಾಗೂ ತಾಪಂಗಳನ್ನು ಎಲ್ಲಾ ಸ್ವರೂಪಗಳಲ್ಲಿ ಸಶಕ್ತಗೊಳಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುವಲ್ಲಿ ಹಾಸನ ಜಿಪಂ ಅತ್ಯುತ್ತಮ ಸಾಧನೆ ಮಾಡಿದೆ. ಈ ನಿಟ್ಟಿನಲ್ಲಿ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಪಡೆದು ಗ್ರಾಮೀಣಾಭಿವೃದ್ಧಿ ಇಲಾಖೆ ನೀಡುವ ಈ ರಾಷ್ಟ್ರ ಪ್ರಶಸ್ತಿಗೆ ಹಾಸನ ಜಿಪಂ ಪಾತ್ರವಾಗಿದೆ.

ಗ್ರಾಮ ಹಾಗೂ ತಾಲೂಕು ಪಂಚಾಯತ್‌ಗಳಲ್ಲಿ ಸರ್ಕಾರದ ವತಿಯಿಂದ ಬಿಡುಗಡೆಯಾದ ಅನುದಾನ ಹಾಗೂ ಅನುಷ್ಠಾನಗೊಂಡ ಯೋಜನೆಗಳನ್ನು ಜನರಿಗೆ ತಲುಪಿಸುವಲ್ಲಿ ಜಿಪಂ ಯಶಸ್ವಿಯಾಗಿದೆ. ಜತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರು, ಸ್ವಚ್ಛತೆ, ಶೌಚಾಲಯ ಇನ್ನಿತರೆ ಮೂಲಸೌಕರ್ಯ ಒದಗಿಸುವಲ್ಲಿ ಹೆಚ್ಚಿನ ಒತ್ತು ನೀಡಿರುವುದು ಕೂಡ ಪ್ರಶಸ್ತಿಗೆ ಪ್ರಮುಖ ಕಾರಣ. ಗ್ರಾಪಂಗಳಲ್ಲಿ ಹೆಚ್ಚಿನ ಗ್ರಾಮಸಭೆಗಳನ್ನು ಕೈಗೊಂಡು ಸ್ಥಳೀಯರು, ಮಹಿಳೆಯರು ಹಾಗೂ ಹಿರಿಯ ನಾಗರಿಕರ ಸಲಹೆ, ಸೂಚನೆ ಸ್ವೀಕರಿಸಿದೆ.

ಜೊತೆಗೆ ಗ್ರಾಮದ ಸಂಪೂರ್ಣ ಅಭಿವೃದ್ಧಿಗೆ ಒತ್ತು ನೀಡಲಾಗಿರುವ ಅಂಶಗಳನ್ನು ಪುರಸ್ಕಾರಕ್ಕೆ ಆಯ್ಕೆ ಸಂದರ್ಭದಲ್ಲಿ ಪರಿಗಣಿಸಲಾಗಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಕ್ಕೆ ಮೀಸಲಿರಿಸಿದ ಸರ್ಕಾರದ ಎಲ್ಲಾ ಸೌಲಭ್ಯ ಹಾಗೂ ಅನುದಾನವನ್ನು ಸಂಪೂರ್ಣ ವಿನಿಯೋಗಿಸಿ ಅವರ ಕಲ್ಯಾಣಕ್ಕೆ ಹೆಚ್ಚಿನ ಒತ್ತನ್ನು ನೀಡಿ, ಅಭಿವೃದ್ಧಿಪಡಿಸಿರುವುದನ್ನು ಗುರುತಿಸಿದ ಕಾರಣಕ್ಕೂ ಈ ಪ್ರಶಸ್ತಿ ಲಭಿಸಿದೆ.

ABOUT THE AUTHOR

...view details