ಕರ್ನಾಟಕ

karnataka

ETV Bharat / state

ಹಾಸನಾಂಬೆ ದರ್ಶನಕ್ಕೆ ಜಿಲ್ಲಾಡಳಿತದಿಂದ ಅದ್ಧೂರಿ ಸಿದ್ಧತೆ... ವೆಬ್​​ಸೈಟ್​ ಬಿಡುಗಡೆ - ಹಾಸನಾಂಬೆ ಉತ್ಸವದ ಮಾಹಿತಿ

ವರ್ಷಕ್ಕೊಮ್ಮೆ ದರ್ಶನ ಕೊಡುವಂತಹ ಹಾಸನಾಂಬೆ ಈ ಬಾರಿ ಅಕ್ಟೋಬರ್ 17 ರಿಂದ 29 ರವರೆಗೆ ದರ್ಶನ ಕೊಡಲಿದ್ದು, ಹಾಸನಂಬ ದೇವಿಗೆ ಅಲಂಕಾರ ಮಾಡುವ ಉದ್ದೇಶದಿಂದ ಇವತ್ತು ಶಾಸ್ತ್ರೋಕ್ತವಾಗಿ ದೇವಿಯ ಒಡವೆಗಳನ್ನು ಖಜಾನೆಯ ಇಲಾಖೆ ಕಚೇರಿಯಿಂದ ದೇವಸ್ಥಾನಕ್ಕೆ ಕೊಂಡೊಯ್ಯಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ದೇವಸ್ಥಾನದ ಆವರಣಕ್ಕೆ ತರಲಾಯಿತು.

ಹಾಸನಾಂಬೆ ದರ್ಶನಕ್ಕೆ ಅದ್ಧೂರಿ ಸಿದ್ಧತೆ ನಡೆಸಿರುವ ಹಾಸನ ಜಿಲ್ಲಾಡಳಿತ

By

Published : Oct 14, 2019, 10:56 PM IST

ಹಾಸನ:ವರ್ಷಕ್ಕೊಮ್ಮೆ ಭಕ್ತರಿಗೆ ದರ್ಶನ ಕೊಡುವ ಹಾಸನಾಂಬೆ ಈ ಬಾರಿ ಅಕ್ಟೋಬರ್ 17 ರಿಂದ 29 ರವರೆಗೆ ದರ್ಶನ ನೀಡಲಿದ್ದು, ಹಾಸನಾಂಬೆ ದೇವಿಗೆ ಅಲಂಕಾರ ಮಾಡುವ ಉದ್ದೇಶದಿಂದ ಇವತ್ತು ಶಾಸ್ತ್ರೋಕ್ತವಾಗಿ ದೇವಿಯ ಒಡವೆಗಳನ್ನು ಖಜಾನೆಯ ಇಲಾಖೆ ಕಚೇರಿಯಿಂದ ದೇವಸ್ಥಾನಕ್ಕೆ ಕೊಂಡೊಯ್ಯಲಾಯಿತು. ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ದೇವಸ್ಥಾನದ ಆವರಣಕ್ಕೆ ತರಲಾಯಿತು.

ಹಾಸನಾಂಬೆ ದರ್ಶನಕ್ಕೆ ಅದ್ಧೂರಿ ಸಿದ್ಧತೆ ನಡೆಸಿರುವ ಹಾಸನ ಜಿಲ್ಲಾಡಳಿತ
ವಿಶೇಷವಾಗಿ ಅಲಂಕೃತಗೊಂಡ ಪಲ್ಲಕ್ಕಿಯನ್ನು ಉಪ ವಿಭಾಗಾಧಿಕಾರಿ ನಾಗರಾಜು ಹೊತ್ತಿದ್ದು ವಿಶೇಷವಾಗಿತ್ತು. ಇದೇ ವೇಳೆ ಹಾಸನಾಂಬೆ ದೇವಾಲಯದ ಪುರೋಹಿತರು ಜಿಲ್ಲಾಧಿಕಾರಿಗಳಿಗೆ ಹೂವಿನ ಹಾರ ಹಾಕಿ ಪ್ರಸಾದ ನೀಡಿದರು. ಕಛೇರಿ ಸಭಾಂಗಣದಲ್ಲಿ ಜಿಲ್ಲಾಧಿಕಾರಿ ಗಿರೀಶ್ ಹಾಸನಾಂಬ ವೆಬ್​​ಸೈಟ್​​ ಬಿಡುಗಡೆ ಮಾಡುವ ಮೂಲಕ ಅದರ ವಿಶೇಷತೆಗಳನ್ನು ತಿಳಿಸಿಕೊಟ್ಟರು. www.srihasanamba.com (ಹಾಸನಾಂಬ ಡಾಟ್.ಕಾಂ) ಎಂಬ ಹೆಸರಿನಲ್ಲಿ ಹಾಸನಾಂಬೆ ಉತ್ಸವದ ಮಾಹಿತಿಯನ್ನು ನೀಡಲಾಗಿದೆ. ಈ ಅಂತರ್ಜಾಲ ತಾಣದಲ್ಲಿ ಹಾಸನದಲ್ಲಿರುವ ಕುದುರೆಗುಂಡಿ ಶಾಸನ ಬಗ್ಗೆ ಮಾಹಿತಿಯನ್ನು ಅಳವಡಿಸಲಾಗಿದೆ. ಹಾಸನಾಂಬೆ ದೇವಾಲಯದ ಇತಿಹಾಸವನ್ನು ಕನ್ನಡ ಮತ್ತು ಇಂಗ್ಲೀಷ್ ಎರಡು ಭಾಷೆಯಲ್ಲಿ ತಿಳಿಸಲಾಗಿದೆ.

ಹಾಸನಾಂಬೆ ದೇವಾಲಯದ ಬಾಗಿಲನ್ನು ಇದೆ ತಿಂಗಳು 17ರ ಗುರುವಾರ ಮದ್ಯಾಹ್ನ ತೆಗೆದು 12. 30ಕ್ಕೆ ತೆರೆಯಲಾಗುವುದು. ಈ ಬಾರಿ ಹಾಸನಾಂಬೆ ದರ್ಶನಕ್ಕಾಗಿ ವಿಶೇಷವಾಗಿ ಅಂತರ್ಜಾಲ ತಾಣವನ್ನು ಬಿಡುಗಡೆ ಮಾಡುವ ಮೂಲಕ ಭಕ್ತರಿಗೆ ಹೆಚ್ಚಿನ ಅನುಕೂಲ ಮಾಡಿಕೊಡಲಾಗಿದೆ.ಈ ಬಾರಿ 13 ದಿನಗಳ ಕಾಲ ಸಾರ್ವಜನಿಕರ ದರ್ಶನ ಸಿಗಲಿದ್ದು, ದೇವಾಲಯಕ್ಕೆ ಬರುವ ಭಕ್ತಾಧಿಗಳಿಗೆ ಸಿಗುವ ಸೌಲಭ್ಯಗಳ ಮಾಹಿತಿ ವಿಶೇಷ ದರ್ಶನ ಪಡೆಯಲು ಟಿಕೆಟ್ ವ್ಯವಸ್ಥೆ, ಪ್ರಸಾದದ ವ್ಯವಸ್ಥೆ ಬಗ್ಗೆ ಮಾಹಿತಿ, ಹೊರಗಿನಿಂದ ಬರುವ ಭಕ್ತಾಧಿಗಳಿಗೆ ಹಾಸನ ಸುತ್ತ ಮುತ್ತ ಯಾವ ಯಾವ ಪ್ರೇಕ್ಷಣಿಯ ಸ್ಥಳಗಳಿವೆ ಇದನ್ನು ಕೂಡ ವೆಬ್ ಸೈಟ್ ನಲ್ಲಿ ಮಾಹಿತಿ ಕೊಡಲಾಗಿದೆ.



ABOUT THE AUTHOR

...view details