ಕರ್ನಾಟಕ

karnataka

ETV Bharat / state

ಹಾಸನ: 144 ಸೋಂಕಿತರ ಪತ್ತೆ, 101 ಜನ ಗುಣಮುಖ - ಕೊರೊನಾ ವೈರಸ್​ ವರದಿ

ಹಾಸನ ಜಿಲ್ಲೆಯಲ್ಲಿಂದು 144 ಕೊರೊನಾ ಸೋಂಕಿತರು ಪತ್ತೆಯಾಗಿದ್ದು, 101 ಜನ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ.

hassan-district-corona-report
ಹಾಸನ ಕೊರೊನಾ ವರದಿ

By

Published : Aug 1, 2020, 5:42 PM IST

ಹಾಸನ: ಜಿಲ್ಲೆಯಲ್ಲಿ‌ ಇಂದು 144 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಇಬ್ಬರು ಮೃತಪಟ್ಟಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಸತೀಶ್ ತಿಳಿಸಿದ್ದಾರೆ.

ಆಲೂರು-2, ಬೇಲೂರು-15, ಹಾಸನ-94, ಅರಸೀಕೆರೆ-9, ಚನ್ನರಾಯಪಟ್ಟಣ-8, ಅರಕಲಗೂಡು-3, ಹೊಳೆನರಸೀಪುರ-11, ಸಕಲೇಶಪುರ-2 ಒಟ್ಟು 144 ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಜಿಲ್ಲೆಯಲ್ಲಿನ ಸೋಂಕಿತರ ಸಂಖ್ಯೆ 2,275ಕ್ಕೆ ಏರಿಕೆಯಾಗಿದೆ.

ಇಂದು 101 ಜನರು ಗುಣಮುಖರಾಗಿದ್ದಾರೆ. ಒಟ್ಟು ಇದುವರೆಗೆ 1022 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 1190 ಸಕ್ರಿಯ ಸೋಂಕಿತರು ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಹಾಗೂ 63 ಮಂದಿ ಕೊರೊನಾ ಸೋಂಕಿ ಬಲಿಯಾಗಿದ್ದಾರೆ.

ಕೋವಿಡ್​ ಉಲ್ಬಣವಾಗುತ್ತಿರುವ ಹಿನ್ನೆಲೆ ಯಾರಿಗಾದರೂ ಉಸಿರಾಟ ತೊಂದರೆ, ಜ್ವರ, ಶೀತ, ನೆಗಡಿ, ಕೆಮ್ಮು ಏನಾದರೂ ಇದ್ದರೆ ಹಿಮ್ಸ್, ಸಾರ್ವಜನಿಕ ಆಸ್ಪತ್ರೆ ಸೇರಿದಂತೆ ಇತರೆ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ತಪಾಸಣೆಗೆ ಒಳಪಡಬೇಕು. ಸಾರ್ವಜನಿಕರು ಕಡ್ಡಾಯವಾಗಿ ಸಾಮಾಜಿಕ ಅಂತರ ಕಾಯ್ದುಕೊಂಡು ಮತ್ತು ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಕೆ ಮಾಡಿ, ಸಭೆ ಸಮಾರಂಭವನ್ನು ಆದಷ್ಟು ಕಡಿಮೆ ಮಾಡುವ ಮೂಲಕ ಕೊರೊನಾ ಸೋಂಕು ತಡೆಗಟ್ಟುವಲ್ಲಿ ಸಹಕರಿಸುವಂತೆ ಜನರಿಗೆ ಜಿಲ್ಲಾಡಳಿತ ಮನವಿ ಮಾಡಿದೆ.

ಜಿಲ್ಲೆಯ ತಾಲ್ಲೂಕುವಾರು ಕೋವಿಡ್ ಪ್ರಕರಣಗಳು:

  • ಆಲೂರು - 89
  • ಅರಕಲಗೂಡು -148
  • ಅರಸೀಕೆರೆ -395
  • ಬೆಲೂರು -157
  • ಚನ್ನರಾಯಪಟ್ಟಣ- 397
  • ಹಾಸನ -785
  • ಹೊಳೆನರಸೀಪುರದಲ್ಲಿ- 212
  • ಸಕಲೇಶಪುರ -79

ಇತರ 13 ಪ್ರಕರಣಗಳು ಈವರೆಗೆ ವರದಿಯಾಗಿದ್ದು, ಒಟ್ಟು 2275 ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಸತೀಶ್ ತಿಳಿಸಿದ್ದಾರೆ.

ABOUT THE AUTHOR

...view details