ಕರ್ನಾಟಕ

karnataka

ETV Bharat / state

ದೇವಾಲಯದೊಳಕ್ಕೆ ದಲಿತರಿಗೆ ಪ್ರವೇಶ ನಿರಾಕರಣೆ... ಹಾಸನ ಡಿಸಿ ಶಾಂತಿ ಸಭೆ - ಕಲ್ಲೇಶ್ವರ ದೇವಾಲಯ

ದೇವಾಲಯಕ್ಕೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳು ಭೇಟಿ ನೀಡಿ, ಶಾಂತಿ ಸಭೆ ನಡೆಸಿದ್ದಾರೆ.

ಕಡಗ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳಿಂದ ಶಾಂತಿ ಸಭೆ

By

Published : Aug 28, 2019, 11:05 AM IST

Updated : Aug 28, 2019, 11:36 AM IST

ಹಾಸನ: ತಾಲೂಕಿನ ಸಾಲಗಾಮೆ ಹೋಬಳಿ ಕಡಗ ಗ್ರಾಮದಲ್ಲಿರುವ ಕಲ್ಲೇಶ್ವರ ದೇವಾಲಯಕ್ಕೆ ಪರಿಶಿಷ್ಟ ಜಾತಿ ಮತ್ತು ಪಂಗಡದವರಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಅಕ್ರಂ ಪಾಷ, ಎಸ್ಪಿ ಡಾ. ರಾಮನಿವಾಸ್ ಸೆಪೆಟ್ ಹಾಗೂ ತಹಶಿಲ್ದಾರ್ ಮೇಘನಾ ಗ್ರಾಮಕ್ಕೆ ಭೇಟಿ ನೀಡಿ ಶಾಂತಿ ಸಭೆ ನಡೆಸಿದ್ರು.

ಕಡಗ ಗ್ರಾಮದಲ್ಲಿ ಜಿಲ್ಲಾಧಿಕಾರಿಯಿಂದ ಶಾಂತಿ ಸಭೆ

ಗ್ರಾಮದ ಜನರ ಮಧ್ಯೆ ಸೌಹಾರ್ದಯುತ ವಾತಾವರಣ ನಿರ್ಮಿಸಲು ಅಧಿಕಾರಿಗಳು ಪ್ರಯತ್ನಿಸಿದರು‌. ಮುಜರಾಯಿ ದೇವಾಲಯವಾಗಿರುವ ಕಾರಣ ಪ್ರತಿಯೊಬ್ಬರಿಗೂ ಪ್ರವೇಶದ ಹಕ್ಕಿದೆ. ಧಾರ್ಮಿಕ ವಿಷಯದಲ್ಲಿ ಯಾರೂ ಕೂಡ ಅಸಮಾಧಾನಕ್ಕೊಳಗಾಗಬಾರದು. ಪರಸ್ಪರ ಸ್ನೇಹ, ಸೌಹಾರ್ದತೆಯಿಂದ ಬಾಳಬೇಕು ಎಂದು ಜಿಲ್ಲಾಧಿಕಾರಿ ಸಲಹೆ ನೀಡಿದ್ರು.

Last Updated : Aug 28, 2019, 11:36 AM IST

ABOUT THE AUTHOR

...view details