ಹಾಸನ : ವಾರದ ಹಿಂದೆಯಷ್ಟೇ ಅಧಿಕಾರ ವಹಿಸಿಕೊಂಡಿದ್ದ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರನ್ನು ವರ್ಗಾವಣೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಹಾಸನ ಜಿಲ್ಲಾಧಿಕಾರಿ ವರ್ಗಾವಣೆ ಸಾಧ್ಯತೆ? - etv bharat
ಏಕೋ ಏನೋ ಜಿಲ್ಲೆಗೆ ಯಾವ ಜಿಲ್ಲಾಧಿಕಾರಿ ಬಂದರೂ ಎತ್ತಂಗಡಿ ಭಾಗ್ಯ ಕಾಯಂ ಎಂಬ ಮಾತು ಕೇಳಿಬರುತ್ತಿದ್ದು, ಇದೀಗ ಆ ಮಾತು ಸತ್ಯ ಎನ್ನಲಾಗುತ್ತಿದೆ.
ಇವರ ಸ್ಥಾನಕ್ಕೆ ಜಿಲ್ಲೆಗೆ ನೇರ ಐಎಎಸ್ ಅಧಿಕಾರಿಯೊಬ್ಬರನ್ನು ನೇಮಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಜಿಲ್ಲಾಧಿಕಾರಿ ಅಕ್ರಂ ಪಾಷ ಅವರ ಅತ್ತೆ ಮನೆ ಹಾಸನದಲ್ಲಿದ್ದು, ಅವರು ರಾಜಕೀಯ ಪಕ್ಷಕ್ಕೆ ಒಂದು ಕೋಮಿನ ಮತಗಳನ್ನು ತಂದುಕೊಡುವ ಉದ್ದೇಶದಿಂದ ಜಿಲ್ಲೆಗೆ ವರ್ಗಾವಣೆ ಮಾಡಿಸಲಾಗಿದೆ ಎಂದು ಶಾಸಕ ಪ್ರೀತಂ ಜೆ. ಗೌಡ ರಾಜ್ಯ ಚುನಾವಣಾ ಆಯೋಗಕ್ಕೆ ದೂರು ನೀಡಿದ್ದಾರೆ.
ಈ ದೂರಿನ ಹಿನ್ನೆಲೆ ಮೈಸೂರು ವಿಭಾಗೀಯ ಆಯುಕ್ತರನ್ನು ಹಾಸನಕ್ಕೆ ಕಳುಹಿಸಿ ಅವರಿಂದ ವರದಿ ತರಿಸಿಕೊಂಡಿರುವ ರಾಜ್ಯ ಚುನಾವಣಾ ಆಯೋಗ, ಜಿಲ್ಲಾಧಿಕಾರಿ ಅಕ್ರಂ ಪಾಷ ಅವರನ್ನು ವರ್ಗಾವಣೆ ಮಾಡುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ. ಜಿಲ್ಲೆಯ ಖಡಕ್ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಅವರಿಂದ ತೆರವಾಗಿದ್ದ ಸ್ಥಾನಕ್ಕೆ ರಾಜ್ಯ ಸರ್ಕಾರ ತಿಂಗಳ ಹಿಂದೆ ಅಕ್ರಂ ಪಾಷ ಅವರನ್ನು ನೇಮಕ ಮಾಡಿ ಆದೇಶ ನೀಡಿತ್ತು.